ನವದೆಹಲಿ[ಮಾ.12]: ತನ್ನ ಮಕ್ಕಳನ್ನು ಕಾಪಾಡುವ ಸಲುವಾಗಿ ನಾಗರ ಹಾವನ್ನೇ ಎದುರಾಕ್ಕೊಂಡ ಅಳಿಲಿನ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದವರೂ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋವನ್ನು IFS ಆಫೀಸರ್ ಸುಶಾಂತ್ ನಂದಾ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 39 ಸೆಕೆಂಡ್ ನ ಈ ವಿಡಿಯೋದಲ್ಲಿ ತಾಯಿ ಅಳಿಲು ತನ್ನ ಮಕ್ಕಳನ್ನು ರಕ್ಷಿಸಲು ಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.

IFS ಅಧಿಕಾರಿ ಅನ್ವಯ ಪ್ರಾಣಿಗಳು ತಮ್ಮ ಮರಿಗಳ ರಕ್ಷಣೆಗೆ ಮುಂದಾಗಿದೆ ಎಂದಿದ್ದಾರೆ. ವಿಡಿಯೋ ಕುರಿತು ಬರೆದುಕೊಂಡಿರುವ ನಂದಾ 'ತಾಯಿಯ ಮಮತೆಗೆ ಸಾಟಿ ಇಲ್ಲ. ಉಸಿರಿರೋ ಕೊನೆಯ ಕ್ಷಣದವರೆಗೂ ಆಕೆಯ ಪ್ರೀತಿ ಕರಗುವುದಿಲ್ಲ. ಈ ವಿಡಿಯೋ ತನ್ನ ಮಕ್ಕಳ ರಕ್ಷಣೆಗಾಗಿ ಶಕ್ತಿಶಾಲಿ ನಾಗರಹಾವಿನೊಂದಿಗೆ ಕಾದಾಡುವ ತಾಯಿ ಅಳಿಲಿನ ಶಕ್ತಿ ಏನೆಂದು ತೋರಿಸುತ್ತದೆ.' ಎಂದು ಬರೆದಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.