Asianet Suvarna News Asianet Suvarna News

ಉಚಿತ ಯೋಜನೆಗಳಿಂದ ಆರ್ಥಿಕತೆ ಹಾಳು: ಮೋಹನದಾಸ್‌ ಪೈ

ಇನ್ಫೋಸಿಸ್‌ ಮಾಜಿ ಸಿಎಫ್‌ಒ ಮೋಹನ್‌ದಾಸ ಪೈ, ಚುನಾವಣೆ ಗೆಲ್ಲಲು  ಕಾಂಗ್ರೆಸ್ ಘೋಷಣೆ ಮಾಡಿರುವ ಉಚಿತ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Mohandas pai says Free Schemes  are damage economy mrq
Author
First Published Sep 20, 2024, 7:36 AM IST | Last Updated Sep 20, 2024, 7:36 AM IST

ನವದೆಹಲಿ: ಇನ್ಫೋಸಿಸ್‌ ಮಾಜಿ ಸಿಎಫ್‌ಒ ಮೋಹನ್‌ದಾಸ ಪೈ ಅವರು ಅವರು ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಕಟಿಸಿರುವ ಉಚಿತ ಭರವಸೆಗಳನ್ನು ಪ್ರಶ್ನಿಸಿದ್ದು, ಈ ವೇಳೆ ಅವರು ಕರ್ನಾಟಕದ ಉದಾಹರಣೆ ನೀಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆ ಅಂಶ ವಿವರಿಸುವ ವಿಡಿಯೋಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪೈ, ‘ಇದಕ್ಕೆ ಯಾರು ಹಣ ಕೊಡುತ್ತಾರೆ? ಖರ್ಗೆ ಅವರಾ, ಕಾಂಗ್ರೆಸ್‌ ಪಕ್ಷವಾ ಅಥವಾ ಜೈರಾಂ ರಮೇಶ್‌ ಅವರಾ? ಬಿಟ್ಟಿ ಯೋಜನೆಗಳಿಂದ ಕರ್ನಾಟಕದ ಆರ್ಥಿಕತೆ ಹಾಳಾಗಿದೆ. ಮೂಲಸೌಕರ್ಯ ಹಾಳಾಗುತ್ತಿದೆ, ಬೆಂಗಳೂರು ರಸ್ತೆಗಳು ಹದಗೆಟ್ಟಿವೆ. ನಮ್ಮ ಯುವಕರಿಗೆ ಭವಿಷ್ಯವಿದೆಯೇ? ರಾಜ್ಯ ತೀವ್ರ ಸಂಕಷ್ಟದಲ್ಲಿದೆ. ಭ್ರಷ್ಟಾಚಾರ ಸಾರ್ವಕಾಲಿಕ ಎತ್ತರದಲ್ಲಿದೆ’ ಎಂದು ಟೀಕಿಸಿದ್ದಾರೆ. 

ಸಿಎಂಗೆ ಮತ್ತೊಂದು ಗೌರ್ನರ್‌ ಕಂಟಕ: ಸಿಬಿಐ ತನಿಖೆಗೆ ಆಗ್ರಹಿಸಿ ಗೆಹಲೋತ್‌ಗೆ ದೂರು

Latest Videos
Follow Us:
Download App:
  • android
  • ios