Asianet Suvarna News Asianet Suvarna News

ಟ್ರಂಪ್ ಊಟಕ್ಕೂ ಮುನ್ನ ಮೋದಿ ಸಿಎಎ ಪಾಠ

ಹೈದ್ರಾಬಾದ್‌ ಹೌಸ್‌ನಲ್ಲಿ ಟ್ರಂಪ್‌ ಜೊತೆ ಮೋದಿ ಭೋಜನ ಆಯೋಜನೆಗೊಂಡಿತ್ತು. ಈ ವೇಳೆ ದಿಢೀರನೆ ತಮ್ಮ ಆಪ್ತರ ಮೂಲಕ ತಮ್ಮ ಐಪ್ಯಾಡ್‌ ತರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಪ್ರಮಾಣ ಕೊರತೆ ಬಗ್ಗೆ ಟ್ರಂಪ್‌ಗೆ ಇರುವ ಅನುಮಾನವನ್ನು ಅಂಕಿ- ಅಂಶಗಳ ಸಮೇತ ವಿವರಿಸಿದರು ಎನ್ನಲಾಗಿದೆ.

Modi Explain About CAA To US President Donald Trump
Author
Bengaluru, First Published Feb 29, 2020, 7:52 AM IST

ನವದೆಹಲಿ [ಫೆ.29]: ವ್ಯಾಪಾರ ಒಪ್ಪಂದ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಂತೆ ಭಾರತ ವಿರೋಧಿ ನಿಲುವನ್ನೇ ಇಟ್ಟುಕೊಂಡು ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅನುಮಾನ ಪರಿಹರಿಸಲು ಪ್ರಧಾನಿ ನರೇಂದ್ರ ತಮಗೆ ಸಿಕ್ಕ ಚಿಕ್ಕ ಅವಕಾಶವನ್ನೇ ಚೊಕ್ಕವಾಗಿ ಬಳಸಿಕೊಂಡಿದ್ದರು ಎಂಬ ಅಚ್ಚರಿಯ ವಿಷಯ ಇದೀಗ ಬೆಳಕಿಗೆ ಬಂದಿದೆ.

ಕಳೆದ ಮಂಗಳವಾರ ಹೈದ್ರಾಬಾದ್‌ ಹೌಸ್‌ನಲ್ಲಿ ಟ್ರಂಪ್‌ ಜೊತೆ ಮೋದಿ ಭೋಜನ ಆಯೋಜನೆಗೊಂಡಿತ್ತು. ಆದರೆ ಪೂರ್ವನಿಗದಿತ ಕಾರ್ಯಕ್ರಮ ಮುಗಿದ ಬಳಿಕ ಭೋಜನ ಮಾಡಲು ಇನ್ನೂ ಸ್ವಲ್ಪ ಸಮಯ ಉಳಿದುಕೊಂಡಿತ್ತು. ಈ ವೇಳೆ ದಿಢೀರನೆ ತಮ್ಮ ಆಪ್ತರ ಮೂಲಕ ತಮ್ಮ ಐಪ್ಯಾಡ್‌ ತರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಪ್ರಮಾಣ ಕೊರತೆ ಬಗ್ಗೆ ಟ್ರಂಪ್‌ಗೆ ಇರುವ ಅನುಮಾನವನ್ನು ಅಂಕಿ- ಅಂಶಗಳ ಸಮೇತ ವಿವರಿಸಿದರು ಎನ್ನಲಾಗಿದೆ.

ಟ್ರಂಪ್‌ ಭೇಟಿಯಿಂದ ದೇಶಕ್ಕಾದ ಲಾಭವೇನು?

‘2014ರಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆ 31 ಶತಕೋಟಿ ಡಾಲರ್‌ ಇತ್ತು. ಅದನ್ನು ನಾವು 2018ರ ವೇಳೆಗೆ 24 ಶತಕೋಟಿ ಡಾಲರ್‌ಗೆ ಇಳಿಸಿದ್ದೇವೆ. 2013ರಲ್ಲಿ ಅಮೆರಿಕದಿಂದ ತೈಲೋತ್ಪನ್ನಗಳ ಆಮದು ಶೂನ್ಯ ಇತ್ತು. 2018ರಲ್ಲಿ ಅದು 9 ಶತಕೋಟಿ ಡಾಲರ್‌ಗೆ ತಲುಪಿದೆ. ಈ ವರ್ಷಾಂತ್ಯಕ್ಕೆ ಅದು 12 ಶತಕೋಟಿ ಡಾಲರ್‌ ತಲುಪಲಿದೆ. ಇನ್ನು ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ವಾರ್ಷಿಕ 6 ಶತಕೋಟಿ ಡಾಲರ್‌ಗಳಷ್ಟುಹಣವನ್ನು ತಮ್ಮ ಶೈಕ್ಷಣಿಕ ವೆಚ್ಚದ ರೂಪದಲ್ಲಿ ಅಮೆರಿಕ ಅರ್ಥವ್ಯವಸ್ಥೆಗೆ ನೀಡುತ್ತಿದ್ದಾರೆ. ಇನ್ನು ಅಮೆರಿಕದಿಂದ ರಕ್ಷಣಾ ಉಪಕರಣಗಳ ಆಮದಿನಲ್ಲೂ ಭಾರೀ ಏರಿಕೆಯಾಗಿದೆ’ ಎಂಬ ವಿಷಯವನ್ನು ಟ್ರಂಪ್‌ ಗಮನಕ್ಕೆ ಮೋದಿ ತಂದರು.

ಇದರ ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆ, ಕೇವಲ ವಿದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಸಮುದಾಯದವರಿಗೆ ಪೌರತ್ವ ನೀಡುವ ಮಸೂದೆ. ಈ ವಿಷಯ ಭಾರತದ ಯಾವುದೇ ಮುಸ್ಲಿಮರಿಗೆ ಪೌರತ್ವ ವಜಾ ಮಾಡುವುದಿಲ್ಲ ಎಂಬುದನ್ನು ಟ್ರಂಪ್‌ಗೆ ಮನವರಿಕೆ ಮಾಡಿಕೊಟ್ಟರು. ಅದೇ ವೇಳೆ ನೆರೆಯ ಪಾಕಿಸ್ತಾನ ಸೇರಿದಂತೆ ಮುಸ್ಲಿಂ ದೇಶಗಳಲ್ಲಿ ಹಿಂದೂ, ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿದರು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios