Asianet Suvarna News Asianet Suvarna News

ಕ್ರೀಡಾ ಸಾಕ್ಸ್ ಆರ್ಡರ್ ಮಾಡಿದವನಿಗೆ ಬಂತು 34 ಸೈಜ್‌‌ನ ಬ್ರಾ; ಇದೇ ಹಾಕಿ ಫುಟ್ಬಾಲ್ ಆಡ್ತೇನೆ ಎಂದ ಗ್ರಾಹಕ!

  • ಆನ್‌ಲೈನ್ ಶಾಪಿಂಗ್ ಎಡವಟ್ಟುಗಳ ಸಾಲಿಗೆ ಮತ್ತೊಂದು ಪ್ರಕರಣ
  • ಫುಟ್ಬಾಲ್ ಸಾಕ್ಸ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ಬ್ರಾ
  • ಎಕ್ಸ್‌ಜೇಂಜ್ ಮಾಡಲ್ಲ, ಇದು ನನ್ನ ಸ್ಪೋರ್ಟ್ಸ್ ಬ್ರಾ ಎಂದು ಕುಟುಕಿದ ಗ್ರಾಹಕ
Man Receives women bra Instead Football Stockings in e commerce online shoping ckm
Author
Bengaluru, First Published Oct 19, 2021, 6:15 PM IST
  • Facebook
  • Twitter
  • Whatsapp

ನವದೆಹಲಿ(ಅ.19): ಆನ್‌ಲೈನ್ ಶಾಪಿಂಗ್‌ನಲ್ಲಿ(Online Shoping) ಆರ್ಡರ್ ಮಾಡಿದ ವಸ್ತುವಿನ ಬದಲು ಮತ್ತೊಂದು ವಸ್ತು ಪಡೆದ ಹಲವು ಉದಾಹರಣೆಗಳಿವೆ. ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಫುಟ್ಬಾಲ್ ಸಾಕ್ಸ್ ಆರ್ಡರ್ ಮಾಡಿದ ವ್ಯಕ್ತಿಗೆ 34 ಸೈಜ್ ಬ್ರಾ ಕಳುಹಿಸಿದ ಘಟನೆ ನಡೆದಿದೆ. ಪ್ರಕರಣ ಇಷ್ಟಕ್ಕೆ ಅಂತ್ಯವಾಗಿಲ್ಲ. ಬದಲಾಯಿಸಲು ಹೋದರೆ ಈ ಕಾಮರ್ಸ್(E Commerce) ಕಂಪನಿ ಸಾಧ್ಯವಿಲ್ಲ ಎಂದಿದೆ. ಇದೀಗ ಈ ಫುಟ್ಬಾಲ್ ಬ್ರಾ ವೈರಲ್ ಆಗಿದೆ.

53,000 ರೂ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫ್ಲಿಫ್‌ಕಾರ್ಟ್ ಕೊಟ್ಟಿದ್ದು ನಿರ್ಮಾ ಸೋಪ್!

ಕಶ್ಯಪ್ ಮಿಂತ್ರಾ ಇ ಕಾಮರ್ಸ್ ಮೂಲಕ ಫುಟ್ಬಾಲ್ ಸಾಕ್ಸ್(Football Stockings) ಆರ್ಡರ್ ಮಾಡಿದ್ದಾನೆ. ನಿಗದಿತ ದಿನಾಂಕದಲ್ಲಿ ಮಿಂತ್ರಾ(Myntra) ಬಾಕ್ಸ್ ಒಂದನ್ನು ಡೆಲಿವರಿ(Delivery) ಮಾಡಿದೆ. ಈ ಬಾಕ್ಸ್ ತೆಗೆದು ನೋಡಿದರೆ ಫುಟ್ಬಾಲ್ ಸಾಕ್ಸ್ ಬದಲು ಮಹಿಳೆಯರ 34 ಸೈಜ್‌ನ ಬ್ರಾ(Bra). ಇನ್ನು ಇತರ ಕಂಪನಿಗಳು ಮಾಡಿದಂತೆ ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಹಣ ವಾಪಾಸ್ ನೀಡಿ ಪ್ರಕರಣ ಸುಖಾಂಖ್ಯಗೊಂಡಿದೆ ಎಂದುಕೊಂಡರೆ ತಪ್ಪು. ಕಾರಣ ಇಲ್ಲಿ ಗ್ರಾಹಕನ ಮನವಿಗೆ ಮಿಂತ್ರಾ ಸ್ಪಂದಿಸಿಲ್ಲ.

ಅಚ್ಚರಿಗೊಂಡ ಕಶ್ಯಪ್ ಮಿಂತ್ರ ಗ್ರಾಹಕರ ವೇದಿಕೆಗೆ ಕರೆ ಮಾಡಿದ್ದಾನೆ. ತನಗೆ ಫುಟ್ಬಾಲ್ ಸಾಕ್ಸ್ ಬದಲು ಕಪ್ಪು ಬಣ್ಣದ ಬ್ರಾ ಕಳುಹಿಸಿದ್ದೀರಿ. ಇದನ್ನು ಬದಲಾಯಿಸಿ ಎಂದು ಮನವಿ ಮಾಡಿದ್ದಾನೆ. ಆದರೆ ಮಿಂತ್ರಾ ಬದಲಾಯಿಸಲು ಸಾಧ್ಯವಿಲ್ಲ ಎಂದಿದೆ. ಇದು ಗ್ರಾಹಕ ಕಶ್ಯಪ್ ಚಿಂತೆ ಹೆಚ್ಚಿಸಿದೆ.

 

ಆರ್ಡರ್ ಮಾಡಿದ್ದು 300 ರೂ. ಲೋಶನ್, ಬಂದಿದ್ದು 19 ಸಾವಿರದ ಐಟಂ!

ಗ್ರಾಹಕರ ವೇದಿಕೆಯಲ್ಲಿ ವಸ್ತು ಬದಲಾಯಿಸಲು ಕೇಳಿದರೆ ಸಾಧ್ಯವಿಲ್ಲ ಅನ್ನೋ ಉತ್ತರಿಂದ ಬೇಸತ್ತ ಕಶ್ಯಪ್, ನೇರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಫುಟ್ಬಾಲ್ ಸಾಕ್ಸ್ ಆರ್ಡರ್ ಮಾಡಿದ್ದೇನೆ.ನನಗೆ ಮಿಂತ್ರಾ ಟ್ರಿಂಪ್ ಕಂಪನಿಯ ಕಪ್ಪು ಬಣ್ಣದ ಬ್ರಾ ನೀಡಿದ್ದಾರೆ. ಇದನ್ನು ಬದಯಾಯಿಸಲು ಸಾಧ್ಯವಿಲ್ಲ ಎಂದು ಮಿಂತ್ರಾ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಫುಟ್ಬಾಲ್ ಪಂದ್ಯದಲ್ಲಿ ಈ 34ರ ಸೈಜ್ ಬ್ರಾ ಹಾಕಿ ಆಡುತ್ತೇನೆ. ನಾನು ಇದನ್ನು ಫುಟ್ಬಾಲ್ ಬ್ರಾ ಎಂದು ಕರೆಯತ್ತೇನೆ ಎಂದು ಕಶ್ಯಪ್ ಟ್ವೀಟ್ ಮಾಡಿದ್ದಾರೆ

ಕಶ್ಯಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಂತೆ ವೈರಲ್ ಆಗಿದೆ.  ಮಿಂತ್ರಾದಲ್ಲಿ  ಸ್ಪೋರ್ಟ್ಸ್ ಬ್ರಾ ಆರ್ಡರ್ ಮಾಡಿದರೆ ಮಾತ್ರ ಸಾಕ್ಸ್ ಡೆಲವರಿ ಆಗಲಿದೆ. ಸಾಕ್ಸ್ ಆರ್ಡರ್ ಮಾಡಿದರೆ ಬ್ರಾ ಡೆಲಿವರಿ ಆಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಬ್ರಾ ಆರ್ಡರ್ ಮಾಡಿದ ಮಹಿಳೆಗೆ ಸಾಕ್ಸ್ ಡೆಲಿವರಿ ಆಗಿದೆ. ಅವರ ಗತಿಯೇನು? ಎಂದು ಪ್ರಶ್ನಿಸಿದ್ದಾರೆ.

ಆನ್‌ಲೈನ ಶಾಪಿಂಗ್‌ನಲ್ಲಿ ಈ ರೀತಿಯ ಎಡವಟ್ಟುಗಳು ಹೊಸದೇನಲ್ಲ. ಆದರೆ ಕಂಪನಿ ತಕ್ಷಣ ಸ್ಪಂದಿಸಿ ಪ್ರಕರಣಗಳನ್ನು ಸುಖಾಂತ್ಯಗೊಳಿಸಿದೆ. ಆದರೆ ಇಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಅನ್ನೋ ಮೂಲಕ ಮಿಂತ್ರಾ ಗ್ರಾಹಕರು ಹಾಗೂ ಜನರ ಆಕ್ರೋಶಕ್ಕೆ ತುತ್ತಾಗಿದೆ. 


 

Follow Us:
Download App:
  • android
  • ios