ಪುದುಚೇರಿ (ಫೆ.06): ಯಾರಾದರೂ 5 ಕೋಟಿ ರು. ನೀಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಮಾಡುವುದಾಗಿ ಘೋಷಣೆ ಮಾಡಿದ್ದ ಪುದುಚೇರಿ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 

ಆತನನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ ಎಂದು ಪೊಲೀಸರು ಹೇಳಿದರು. ಆರ್ಯನ್‌ಕುಪ್ಪಂ ರಿಯಲ್‌ ಎಸ್ಟೇಟ್‌ ಉದ್ಯಮಿ ಸತ್ಯಾನಂದಂ(43) ಎಂಬುವರೇ ಈ ರೀತಿ ಟ್ವೀಟ್‌ ಮಾಡಿ ಬಂಧನಕ್ಕೊಳಗಾದವ. 

'ಮೋದಿ ಸರ್ಕಾರದಿಂದ ದೇಶವನ್ನು ಖಾಸಗಿಯವರ ಕೈಗಿಡುವ ಹುನ್ನಾರ' .

ಈ ಬಗ್ಗೆ ಶುಕ್ರವಾರ ಮಾತನಾಡಿದ ಪೊಲೀಸರು, ಆರೋಪಿಯು ತಾನು ಪ್ರಧಾನಿ ನರೇಂದ್ರ ಮೋದಿ ಅವರ ಕೊಲೆಗೈಯ್ಯಲು ಸಿದ್ಧನಿದ್ದೇನೆ. ಇದಕ್ಕಾಗಿ ಯಾರಾದರೂ 5 ಕೋಟಿ ರು. ನೀಡಲು ಸಿದ್ಧರಿದ್ದಾರೆಯೇ? ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಎಂದು ಹೇಳಿದ್ದಾರೆ.