15 ರಿಂದ 18 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಲಸಿಕೆಅತ್ಯಂತ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಿದ ಕೇಂದ್ರಾಡಳಿತ ಪ್ರದೇಶಅತೀ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ

ನವದೆಹಲಿ (ಜ. 11): ಕೋವಿಡ್-19 ಲಸಿಕೆಯ (COVID-19 Vaccination)ವಿಚಾರದಲ್ಲಿ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ (Lakshadweep ) ಮತ್ತೊಂದು ಮೈಲಿಗಲ್ಲು ದಾಖಲಿಸಿದೆ. ಲಕ್ಷದ್ವೀಪ ಆಡಳಿತವು 15 ರಿಂದ 18 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಂಪೂರ್ಣ ಶೇ. 100 ಕೋವಿಡ್-19 ಲಸಿಕೆಯನ್ನು ಹಾಕಿದೆ. ಆ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ (first among UTs and states ) ಎನ್ನುವ ಕೀರ್ತಿ ಲಕ್ಷ್ವದೀಪದ್ದಾಗಿದೆ. 

ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿ ಕವರತ್ತಿಯಲ್ಲಿ 2021 ರ ಜನವರಿ 3 ರಂದು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ (Praful Patel) ಅವರು ಮಕ್ಕಳಿಗೆ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ್ದರು. ಲಕ್ಷದ್ವೀಪದ ಎಲ್ಲಾ ಹತ್ತು ಜನವಸತಿ ದ್ವೀಪಗಳಲ್ಲಿ ಶಾಲೆಗಳಲ್ಲಿ ವಿವಿಧ ಜಾಗೃತಿ ಅಭಿಯಾನಗಳು ಮತ್ತು ವಿಶೇಷ ಅಭಿಯಾನಗಳ ಮೂಲಕ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ ಒಂದು ವಾರದೊಳಗೆ 3492 ಮಕ್ಕಳ ಗುರಿಯನ್ನು ಸಾಧಿಸಲಾಗಿದೆ ಎನ್ನುವುದು ಗಮನಾರ್ಹ ಅಂಶವಾಗಿದೆ. ಇದಕ್ಕೂ ಮುನ್ನ 18 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲೂ ಶೇ. 100 ರಷ್ಟು ಲಸಿಕೆ ಹಾಕಿದ ಮೊದಲ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ ಎನ್ನುವ ಹಿರಿಮೆಯನ್ನೂ ಲಕ್ಷದ್ವೀಪ ಸಂಪಾದಿಸಿತ್ತು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ, "ಮಕ್ಕಳಿಗೆ ಲಸಿಕೆ ಹಾಗೂ ಹಿರಿಯ ನಾಗರೀಕರಿಗೆ ಬೂಸ್ಟರ್ ಡೋಸ್ ಗಳನ್ನು ನೀಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಮಾಣದ ಕೋವಾಕ್ಸಿನ್ ಲಸಿಕೆಯ ಪ್ರಮಾಣವನ್ನು ಹೊಂದಿದೆ. ಅದಲ್ಲದೆ, ಲಕ್ಷದ್ವೀಪ ಆಡಳಿತವು ಜನವರಿ 10 ರಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಮಾರ್ಗಸೂಚಿಗಳ ಆಧಾರದ ಪ್ರಕಾರ ಮುಂಚೂಣಿಯ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರಿಗೆ ಬೂಸ್ಟರ್ ಡೋಸ್ ಗಳನ್ನು ನೀಡಲು ಪ್ರಾರಂಭ ಮಾಡಿದೆ' ಎಂದು ಜಿಲ್ಲಾಧಿಕಾರಿ ಹಾಗೂ ಕಾರ್ಯದರ್ಶಿ ಎಸ್ ಅಸ್ಕೆರ್ ಅಲಿ (S Asker Ali, District Collector & Secy ) ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Scroll to load tweet…


ನೈಟ್ ಕರ್ಫ್ಯೂ, ಕಡ್ಡಾಯ ಆರ್ ಟಿಪಿಸಿಆರ್ ಟೆಸ್ಟ್, ಕೋವಿಡ್ ನೆಗೆಟಿವ್ ರಿಪೋರ್ಟ್, ಲಸಿಕಾ ಪ್ರಮಾಣಪತ್ರ, ಟೆಸ್ಟಿಂಗ್ ಮತ್ತು ಟ್ರ್ಯಾಕಿಂಗ್ ಮುಂತಾದ ಕೋವಿಡ್ ನಿರ್ವಹಣೆಯ ಪೂರ್ವಭಾವಿ ಕ್ರಮದ ಮೂಲಕ, ಲಕ್ಷದ್ವೀಪ ಆಡಳಿತವು ಭವಿಷ್ಯದಲ್ಲಿ ಎದುರಾಗಬಹುದಾದ ಕೋವಿಡ್-19 ಮೂರನೆಯ ಅಲೆಗೆ ಸಿದ್ಧವಾಗುತ್ತಿದೆ.