Asianet Suvarna News Asianet Suvarna News

Kulgam Encounter;ಹಿಜ್ಬುಲ್ ಕಮಾಂಡರ್ ಹತ್ಯೆ, ಶಾಲಾ ಮಕ್ಕಳು ಸೇರಿ 60 ಮಂದಿ ರಕ್ಷಣೆ!

  • ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ
  • ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆಯಿಂದ ಎನ್‌ಕೌಂಟರ್
  • ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹತ್ಯೆ
  • ಶಾಲಾ ಮಕ್ಕಳು ಸೇರಿ 60 ಮಂದಿ ರಕ್ಷಿಸಿದ ಭಾರತೀಯ ಸೇನೆ
Kulgam Encounter hizbul Mujahideen commander killed Indian Army rescue 60 including school children ckm
Author
Bengaluru, First Published Nov 20, 2021, 7:21 PM IST

ಶ್ರೀನಗರ(ನ.20): ಜಮ್ಮು ಮತ್ತು ಕಾಶ್ಮೀರ(Jammu and Kashmir) ಸೇರಿದಂತೆ ಪಾಕಿಸ್ತಾನಜೊತೆ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದೆ(Terror Attack). ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆಯ(Indian Army) ಹದ್ದಿನ ಕಟ್ಟಿದೆ. ಆದರೆ ಸತತ ದಾಳಿ ನಡೆಯುತ್ತಿದೆ. ನಾಗರೀಕರ ಗುರಿಯಾಗಿಸಿ ದಾಳಿ, ಪೊಲೀಸ್ ಮೇಲಿನ ದಾಳಿ ನಡೆಯುತ್ತಲೇ ಇದೆ. ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಕುಲ್ಗಾಮ್ ಜಿಲ್ಲೆಯಲ್ಲಿ(Kulgam) ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಹತ್ಯೆಯಾಗಿದ್ದಾನೆ.

ದಕ್ಷಿಣ ಕಾಶ್ಮೀರದ ಅಶ್ಮುಂಜಿ ಏರಿಯಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ(Encounter) ಮಲ್ವಾನ್ ಗ್ರಾಮದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಮುದಾಸಿರ್ ವಾಗೆ ಹತ್ಯೆಯಾಯಿದ್ದಾನೆ. 2018ರಿಂದ ದಕ್ಷಿಣ ಕಾಶ್ಮೀರ ಸೇರಿದಂತೆ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದ ಮುದಾಸಿರ್‌ಗೆ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳು ಹಣಕಾಸಿನ ನೆರವು ನೀಡುತ್ತಿತ್ತು. ಪೊಲೀಸರ A+ ಲಿಸ್ಟ್‌ನಲ್ಲಿದ್ದ ಮುದಾಸಿರ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ.

Anti terror operation; ಉಗ್ರರ ನೆರವು ನೀಡುತ್ತಿದ್ದ ಇಬ್ಬರು ಶ್ರೀನಗರ ಉದ್ಯಮಿಗಳ ಹತ್ಯೆ!

ಕುಲ್ಗಾಮ್ ಎನ್‍‌ಕೌಂಟರ್ ಅತ್ಯಂತ ಸವಾಲಿನಿಂದ ಕೂಡಿತ್ತು. ಕಾರಣ ಉಗ್ರರು ಅಡಗಿರುವ ಮಾಹಿತಿ ಪಡೆದು ಸೇನೆ ಅಶ್ಮುಂಜಿ ಎರಿಯಾ ಸುತ್ತುವರಿದು ದಾಳಿ ನಡೆಸಿತ್ತು. ಆದರೆ ಈ ಏರಿಯಾದಲ್ಲಿ ನಾಗರೀಕರು ಶಾಲೆ(School) ಒಳಗೊಂಡಿತ್ತು. ಸೇನೆ ಕಾರ್ಯಾಚರಣೆ ಮಾಹಿತಿ ಪಡೆದ ಉಗ್ರ ಪ್ರತಿಧಾಳಿ ನಡೆಸಲು ಆರಂಭಿಸಿದ್ದಾನೆ. ಈ ವೇಳೆ ಸೇನೆ ಶಾಲಾ ಮಕ್ಕಳು ಸೇರಿ 60 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದೆ. ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. 

ಮಕ್ಕಳನ್ನು ಸೇನಾ ವಾಹದಲ್ಲಿ ಸುರಕ್ಷಿತ ತಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ನಾಗರೀಕರು, ಶಾಲಾ ಮಕ್ಕಳ ಕಾರಣ ಕಾರ್ಯಾಚರಣ ಅಂತ್ಯಂತ ಸವಾಲಿನಿಂದ ಕೂಡಿತ್ತು. ಈ ಕಾರ್ಯಾಚರಣೆಯಲ್ಲಿ ನಾಗರೀಕರು ಹಾಗೂ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಸೇನೆ ಹಾಗೂ ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿದೆ.

 

Maharashtraದಲ್ಲಿ ಭೀಕರ ಎನ್‌ಕೌಂಟರ್ : 26 ಮಾವೋವಾದಿಗಳು ಹತ!

ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. ನವೆಂಬರ್ 17 ರಂದು ಕುಲ್ಗಾಮದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆ ಐವರು ಉಗ್ರರನ್ನು ಹೊಡೆದುರುಳಿಸಿತ್ತು. ಎರಡು ಪ್ರತ್ಯೇಕ ಎನ್‌ಕೌಂಟರ್ ಮೂಲಕ ಉಗ್ರರ ಹೆಡೆಮುರಿ ಕಟ್ಟಲಾಗಿತ್ತು.

ಪೊಂಬೆ ಹಾಗೂ ಗೋಪ್ಲಾಪೊರಾ ಏರಿಯಾದಲ್ಲಿ ಉಗ್ರರು ಅಡಗಿರುವ ಮಾಹಿತಿ ಪಡೆದ ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರರು ಪ್ರತಿದಾಳಿ ನಡೆಸಿದ್ದಾರೆ. ಮೊದಲೆ ಸಿದ್ದರಾಗಿದ್ದ ಸೇನೆ ತಕ್ಕ ತಿರುಗೇಟು ನೀಡಿತು. ಇದರಿಂದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. 

11 ವರ್ಷದಲ್ಲೇ ಅತಿ ಸುದೀರ್ಘ ಸೇನಾ ಕಾರ್ಯಾಚರಣೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಸತತ ದಾಳಿಗಳು ನಡೆಯುತ್ತಿದೆ. ಬಿಹಾರ ಕಾರ್ಮಿಕರ ಹತ್ಯೆ, ಪೊಲೀಸ್, ಅಧಿಕಾರಿಗಳ ಹತ್ಯೆ ನಡೆಯುತ್ತಲೇ ಇದೆ. ಕೆಲ ದಿನಗಳ ಹಿಂದೆ ಕಾಶ್ಮೀರ ಪ್ರವಾಸ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಣಿವೆ ರಾಜ್ಯದ ಭದ್ರತೆ ಹೆಚ್ಚಿಸಲು ಹಾಗೂ ಭಯೋತ್ಪಾದಕ ದಾಳಿ ತಡೆಯಲು ಮಹತ್ವದ ಸಭೆ ನಡೆಸಿದ್ದರು. ಭದ್ರತೆಯಲ್ಲಿ ರಾಜಿ ಇಲ್ಲ. ಉಗ್ರ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದರು. ಈ ಸಭೆಗೂ ಮೊದಲು ಉಗ್ರರಿಂದ ಹುತಾತ್ಮರಾದ ಪೊಲೀಸ್ ಅಧಿಕಾರಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದ್ದರು. ಮಣಿಪುರದಲ್ಲಿ ನಡೆದ ಅಸ್ಸಾಂ ರೈಫಲ್ಸ್ ವಾಹನದ ಮೇಲೆ ನಡೆದ ಉಗ್ರರ ದಾಳಿ ಸೇರಿದಂತೆ ಗಡಿ ರಾಜ್ಯಗಳಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. 
 

Follow Us:
Download App:
  • android
  • ios