ಉಗ್ರ ನಿಜ್ಜರ್ ಕೊಲೆ ಕೇಸ್‌ನಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ಗೂಢಚಾರಿಕೆ ನಡೆಸಿತ್ತು ಕೆನಡಾ!
ಕೆನಡಾ ಸಂಸತ್ತಿನಲ್ಲಿ ನಿಂತು ಭಾರತದ ವಿರುದ್ಧ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನ ಕೊಲೆ ಮಾಡಿದ ಆರೋಪವನ್ನು ಪ್ರಧಾನಿ ಜಸ್ಟೀನ್ ಟ್ರುಡೊ ಮಾಡಿದ್ದರು. ತಮ್ಮಲ್ಲಿ ಸಾಕ್ಷ್ಯ ಇದೆ ಎಂದು ಅವರು ಹೇಳಿದ್ದರು. ಈ ನಡುವೆ ಕೆನಡಾದ ಗುಪ್ತಚರ ಅಧಿಕಾರಿಗಳು ಭಾರತದ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ಗೂಢಚಾರಿಕೆ ನಡೆಸಿತ್ತು ಎನ್ನುವ ಸ್ಫೋಟಕ ವಿಚಾರ ಬಹಿರಂಗವಾಗಿದೆ.

ನವದೆಹಲಿ (ಸೆ.22): ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸುವ ಮೊದಲು ಭಾರತೀಯ ರಾಜತಾಂತ್ರಿಕರ ಮೇಲೆ ಬೇಹುಗಾರಿಕೆ ನಡೆಸಿತ್ತು ಎನ್ನುವ ಸ್ಪೋಟಕ ವಿಚಾರ ಬಹಿರಂಗವಾಗಿದೆ. ಕೆನಡಾದ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಸುದ್ದಿ ಸಂಸ್ಥೆ ಎಪಿಗೆ ನೀಡಿದ್ದಾರೆ. ಅಲ್ಲಿರುವ ಭಾರತೀಯ ಅಧಿಕಾರಿಗಳು ಮತ್ತು ರಾಜತಾಂತ್ರಿಕರ ಮೇಲೆ ಕೆನಡಾ ನಿಗಾ ಇರಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದಲ್ಲದೆ, ಫೈವ್ ಐಸ್ ದೇಶಗಳ ಸದಸ್ಯರು ಕೆನಡಾಕ್ಕೆ ಗುಪ್ತಚರ ಸಂಗ್ರಹಿಸುವಲ್ಲಿ ಸಹಾಯ ಮಾಡಿದರು. ಕೆನಡಾದ ಮಾಧ್ಯಮ ಸಿಬಿಸಿ ವರದಿಯ ಪ್ರಕಾರ, ಭಾರತೀಯ ರಾಜತಾಂತ್ರಿಕರ ಸಂವಹನಗಳು ಅಂದರೆ ಅವರು ಯಾರನ್ನು ಭೇಟಿಯಾದರು, ಯಾರೊಂದಿಗೆ ಮಾತನಾಡಿದರು, ಇದೆಲ್ಲವನ್ನೂ ಟ್ರ್ಯಾಕ್ ಮಾಡಲಾಗಿದೆ. ಕೆನಡಾದಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಅದೆಷ್ಟೇ ಕ್ಲೋಸ್ಡ್ ಡೋರ್ ಸಂವಹನಗಳ ನಡೆದಿದೆ ಎಂದು ಹೇಳಿದ್ದರೂ, ನಿಜ್ಜರ್ ಕೊಲೆ ಕೇಸ್‌ನಗಳಲ್ಲಿ ಭಾರತೀಯ ಸರ್ಕಾರದ ಹಸ್ತಕ್ಷೇಪವಿದೆ ಎನ್ನುವುದಕ್ಕೆ ಸಾಕ್ಷ್ಯವದೆ ಎನ್ನುವ ಯಾವ ವಿಚಾರವನ್ನೂ ಈವರೆಗೂ ತಿರಸ್ಕರಿಸಿಲ್ಲ.
ಇದಲ್ಲದೆ, ಕೆನಡಾದ ಅಧಿಕಾರಿಗಳು ನಿಜ್ಜರ್ ಹತ್ಯೆಯ ತನಿಖೆಯಲ್ಲಿ ಸಹಕಾರ ಪಡೆಯಲು ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ. ಕೆನಡಾದ ಎನ್‌ಎಸ್‌ಎ ಜೂಡಿ ಥಾಮಸ್ ಆಗಸ್ಟ್‌ನಲ್ಲಿ 4 ದಿನಗಳ ಕಾಲ ಭಾರತದಲ್ಲಿದ್ದರು. ಇದಲ್ಲದೆ, ಈ ತಿಂಗಳೂ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ 5 ದಿನಗಳ ಕಾಲ ಭಾರತಕ್ಕೆ ಬಂದಿದ್ದರು. ನ್ಯೂಯಾರ್ಕ್‌ನಲ್ಲಿ ಗುರುವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಂತರ ಕೆನಡಾದ ಪ್ರಧಾನಿ ಟ್ರುಡೊ ಅವರು ಭಾರತದ ವಿರುದ್ಧ ಆತುರದಿಂದಲ್ಲ, ಆದರೆ ಸಂಪೂರ್ಣ ಗಂಭೀರತೆಯಿಂದ ಆರೋಪ ಮಾಡಿರುವುದಾಗಿ ಹೇಳಿದ್ದಾರೆ. ಆದಾಗ್ಯೂ, ಕೆನಡಾ ತನ್ನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ಇನ್ನೂ ಮಂಡಿಸಿಲ್ಲ.
ಕೆನಡಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತವು ಗುರುವಾರ ಕೆನಡಾದ ನಾಗರಿಕರಿಗೆ ವೀಸಾ ಸೇವೆಯನ್ನು ನಿಲ್ಲಿಸಿತ್ತು. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಕೆನಡಾದಲ್ಲಿ ನಮ್ಮ ರಾಜತಾಂತ್ರಿಕ ಘಟಕಕ್ಕೆ ಬೆದರಿಕೆಗಳು ಬರುತ್ತಿವೆ. ಅವರ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ವೀಸಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕೆನಡಾ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಬಾಗ್ಚಿ ಆರೋಪಿಸಿದ್ದರು.
ಕೆಣಕಿದವರ ಸುಮ್ಮನೆ ಬಿಡಲ್ಲ, 5 ದಿನದಲ್ಲಿ ದೇಶ ಬಿಟ್ಟು ಹೋಗಿ: ಕೆನಡಾ ಏಟಿಗೆ ಭಾರತದ ಎದಿರೇಟು
ಇನ್ನೊಂದೆಡೆ, ಕೆನಡಾ ಮಾಡಿರುವ ಎಲ್ಲಾ ಆರೋಪಗಳನ್ನು ಭಾರತ ನಿರಂತರವಾಗಿ ತಿರಸ್ಕರಿಸುತ್ತಿದೆ. ಕೆನಡಾದ ಎಲ್ಲಾ ಆರೋಪಗಳು ಅಸಂಬದ್ಧ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇದೇ ರೀತಿಯ ಆರೋಪಗಳನ್ನು ಕೆನಡಾದ ಪ್ರಧಾನಿ ನಮ್ಮ ಪ್ರಧಾನಿ ಮೋದಿಯವರಿಗೆ ಮಾಡಿದ್ದು, ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ಇಂತಹ ಆಧಾರ ರಹಿತ ಆರೋಪಗಳು ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ. ಉಗ್ರರಿಗೆ ಕೆನಡಾದಲ್ಲಿ ಆಶ್ರಯ ನೀಡಲಾಗಿದೆ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ನೀಡುತ್ತಿದೆ. ಇತ್ತ, ವಿದೇಶಾಂಗ ಸಚಿವ ಜೈಶಂಕರ್ ಅವರು ಬುಧವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿಯೂ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಜೈಶಂಕರ್ ಅವರು ಪ್ರಧಾನಿಗೆ ಸಂಪೂರ್ಣ ವಿಷಯದ ಬಗ್ಗೆ ವಿವರಣೆ ನೀಡಿದ್ದಾರೆ.
ನಕಲಿ ವೀಸಾ ಮೂಲಕ ಬಂದಿದ್ದವನಿಗೆ ಕೆನಡಾ ಪೌರತ್ವ : ಜಿ-20 ವೇಳೆ ಪ್ರೆಸಿಡೆಂಟ್ ಸೂಟ್ ತಿರಸ್ಕರಿಸಿದ್ದ ಟ್ರಡೋ