Asianet Suvarna News Asianet Suvarna News

ಮುಂಬೈ ಮೇಲಿನ ಉಗ್ರರ ದಾಳಿ ಬೆಂಬಲಿಸುವೆ ಎಂದ ಕೇರಳ ಮಹಿಳೆಗೆ ಛಳಿ ಬಿಡಿಸಿದ ನೆಟ್ಟಿಗರು

ಆ ಕಾರಣಕ್ಕಾಗಿ ಮಂಬೈ ಮೇಲೆ ಪಾಕಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ರೆ ಬೆಂಬಲಿಸೋದಾಗಿ ಅಶ್ಲಿನ್ ಜಿಮ್ಮಿ ಹೇಳಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

Kerala writer Ashlin Jimmi Justifies Mumbai Terror Attack mrq
Author
First Published Jun 20, 2024, 2:40 PM IST

ತಿರುವನಂತರಪುರ: ಮುಂಬೈ ಮೇಲೆ ಪಾಕ್ ಉಗ್ರರು ದಾಳಿ ಮಾಡಿದ್ರೆ ಬೆಂಬಲಿಸುತ್ತೇನೆ ಎಂದ ಕೇರಳದ ತಿರುವನಂತಪುರ ಮೂಲದ ಬರಹಗಾರ್ತಿ ಅಶ್ಲಿನ್ ಜಿಮ್ಮಿಗೆ ನೆಟ್ಟಿಗರು ಚಳಿ ಬಿಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಶ್ಲಿನ್ ಜಿಮ್ಮಿ, ತಾನು ಭಯೋತ್ಪಾದಕೆಯನ್ನು ಬೆಂಬಲಿಸುವದಾಗಿ ಹೇಳಿಕೆ ನೀಡುವ ಮೂಲಕ ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ದೇಶದಾದ್ಯಂತ ಜಿಮ್ಮಿ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಅಶ್ಲಿನ್ ಜಿಮ್ಮಿಗೆ ಬಾಲಿವುಡ್ ಸ್ಟಾರ್ ನಟರಾದ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೊತೆ ನಾಯಕಿ ನಟಿಯಾಗಿ ಆಸೆ ಇತ್ತಂತೆ. ಆದರೆ ಶಾರೂಕ್ ಮತ್ತು ಸಲ್ಮಾನ್ ಅವಕಾಶ ನೀಡಲಿಲ್ಲ. ಹಾಗಾಗಿ ಮುಂಬೈ ಕೆಟ್ಟ ನಗರಿ ಎಂದು ಜಿಮ್ಮಿ ಹೇಳಿದ್ದಾಳೆ. ಆ ಕಾರಣಕ್ಕಾಗಿ ಮಂಬೈ ಮೇಲೆ ಪಾಕಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ರೆ ಬೆಂಬಲಿಸೋದಾಗಿ ಅಶ್ಲಿನ್ ಜಿಮ್ಮಿ ಹೇಳಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಹಳೆಯ ಪೇಂಟಿಂಗ್ ಬಟ್ಟಲಿಗೆ 314 ಕೋಟಿ ರೂ. ಕೊಟ್ಟ ಉದ್ಯಮಿ; ವಿಶ್ವದಾಖಲೆ ಬರೆದ ಪಾತ್ರೆಯ ವಿಶೇಷತೆ ಗೊತ್ತಾ?

ಅಶ್ಲಿನ್ ಜಿಮ್ಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಮೊದಲು ನೀನು ಎಲ್ಲಿದ್ದಿಯಾ ಎಂದು ತಿಳಿದುಕೊ. ಏನು ಹೇಳ್ತಿದ್ದೀನಿ ಎಂಬ ಅರಿವು ನಿನಗಿದೆಯಾ? ಬುದ್ದಿ ಭ್ರಮಣೆಯಾಗಿದೆಯಾ ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿಕೋ ಎಂದು ನೆಟ್ಟಿಗರು ಚಳಿ ಬಿಡಿಸಿದ್ದಾರೆ. ಇದು ತುಂಬಾ ಅತಿರೇಕದ ಹೇಳಿಕೆಯಾಗಿದ್ದು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಬಂಧಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ. 

ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಚಿತ್ರದಲ್ಲಿ ಅವಕಾಶ ನೀಡದಕ್ಕೆ ಮುಂಬೈ ನಗರವನ್ನು ಕೆಟ್ಟದ್ದು ಅಂತಿದ್ದಾಳೆ. ಶಾರೂಕ್ ಮತ್ತು ಸಲ್ಮಾನ್ ಈಕೆಗೊಂದು ನಿಮ್ಮ ಸಿನಿಮಾದಲ್ಲಿ ಲೀಡ್ ರೋಲ್ ನೀಡಿ ಎಂದು ವ್ಯಂಗ್ಯ ಮಾಡಿ, ನಮ್ಮ ಯುವ ಜನತೆಯ ಇಂತಹ ಹೇಳಿಕೆ ನೀಡಿದ್ರೆ ಆಘಾತವಾಗಿದೆ. ಈ ರೀತಿ ಮಾತನಾಡಲು ನಾಚಿಕೆ ಆಗಬೇಕು ಎಂದು ನೆಟ್ಟಿಗರು ವಾಗ್ದಾಳಿ ನಡೆಸಿದರು. 

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಾಲ್ವರ ಬಂಧನ: ಒಬ್ಬರಿಗೆ ಇಷ್ಟು ಚಾರ್ಜ್ ಮಾಡ್ತಿದ್ದ ಮಾಸ್ಟರ್‌ಮೈಂಡ್

Latest Videos
Follow Us:
Download App:
  • android
  • ios