Asianet Suvarna News Asianet Suvarna News

ಹಕ್ಕಿ ಜ್ವರ ನಿಯಂತ್ರಣಕ್ಕೆ 12 ಸಾವಿರ ಕೋಳಿ, ಪಕ್ಷಿಗಳ ಹತ್ಯೆ!

ಹಕ್ಕಿ ಜ್ವರ ನಿಯಂತ್ರಣಕ್ಕೆ 12 ಸಾವಿರ ಕೋಳಿ, ಪಕ್ಷಿಗಳ ಹತ್ಯೆ| ವೆಂಗೆರಿ ಮತ್ತು ಕೊಡಿಯಾಥೂರ್‌ ಪ್ರದೇಶದಲ್ಲಿ 1 ಕಿ.ಮೀ. ಅಂತರದಲ್ಲಿ ಇರುವ ಎರಡು ಪೌಟ್ರಿ

Kerala govt to cull 10,000 birds to curb spread of disease
Author
Bangalore, First Published Mar 9, 2020, 11:54 AM IST

ಕಲ್ಲಿಕೋಟೆ[ಮಾ.09]: ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾಕಿದ ಕೊಳಿಗಳು ಮತ್ತು ಹಕ್ಕಿಗಳನ್ನು ಸಾಮೂಹಿಕ ಹತ್ಯೆ ಮಾಡುವ ಪ್ರಕ್ರಿಯೆಗೆ ಕೇರಳ ಸರ್ಕಾರ ಚಾಲನೆ ನೀಡಿದೆ.

ವೆಂಗೆರಿ ಮತ್ತು ಕೊಡಿಯಾಥೂರ್‌ ಪ್ರದೇಶದಲ್ಲಿ 1 ಕಿ.ಮೀ. ಅಂತರದಲ್ಲಿ ಇರುವ ಎರಡು ಪೌಟ್ರಿಯಲ್ಲಿನ 12,000ಹಕ್ಕಿಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ. ಇದರಲ್ಲಿ ಹೆಚ್ಚಿನವು ಸಾಕು ಕೋಳಿ, ಟರ್ಕಿ ಮತ್ತು ಲವ್‌ ಬರ್ಡ್‌ಗಳಾಗಿವೆ.

ಕೋಳಿಗೆ 60 ರಿಂದ 65 ರೂಪಾಯಿ ಇಳಿತ..!

ಈ ಕಾರ್ಯದಲ್ಲಿ ತರಬೇತಿ ಪಡೆದ 200 ಸಿಬ್ಬಂದಿ ಹಾಗೂ ಕ್ಷಿಪ್ರ ನಿರ್ವಹಣೆ ಪಡೆಯ ಸಿಬ್ಬಂದಿ ಭಾಗಿಯಾಗಲಿದ್ದಾರೆ. ಜೊತೆಗೆ ಪಕ್ಷಿಗಳನ್ನು ಇರಿಸಿದ್ದ ಪಂಜರವನ್ನು ಸುಡುವಂತೆ ಸೂಚನೆ ನೀಡಲಾಗಿದೆ.

Follow Us:
Download App:
  • android
  • ios