ಹೊಸ ಕಾನೂನಿನಡಿ ಪ್ರಮಾಣ ಪತ್ರ ಪಡೆದ ವೃದ್ಧನ ಕೊಲೆ | 65 ವರ್ಷದ ಕಾಶ್ಮೀರ ಮೂಲದ ಪಂಜಾಬಾಯಿ ಆಭರಣ ವ್ಯಾಪಾರಿಗೆ ಗುಂಡು ಹೊಡೆದು ಸಾಯಿಸಿದ ಭಯೋತ್ಪಾದಕರು
ಶ್ರೀನಗರ(ಜ.02): ಹೊಸ ನಿವಾಸ ಕಾನೂನಿನಡಿಯಲ್ಲಿ ಪ್ರಮಾಣಪತ್ರವನ್ನು ಪಡೆದ 65 ವರ್ಷದ ಕಾಶ್ಮೀರ ಮೂಲದ ಪಂಜಾಬಾಯಿ ಆಭರಣ ವ್ಯಾಪಾರಿಯನ್ನು ಶ್ರೀನಗರದಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ 15 ವರ್ಷಗಳ ಕಾಲ ವಾಸವಾಗಿರುವ ಜನರಿಗೆ ಸ್ಥಿರವಾದ ಮಾಲೀಕತ್ವವನ್ನು ಹೊಂದಲು ಮಾಡಿಕೊಡುವ ಕಾನೂನಿನಡಿ ಇವರು ದಾಖಲೆ ಪಡೆದ ವಾರಗಳ ನಂತರವೇ ಕೃತ್ಯ ನಡೆದಿದೆ.
ಮೂಲತಃ ಪಂಜಾಬ್‌ನ ಗುರುದಾಸ್‌ಪುರದ ಮೂಲದ ಸತ್ಪಾಲ್ ನಿಶ್ಚಲ್ ಅವರು ಜಮ್ಮು ಮತ್ತು ಕಾಶ್ಮೀರ ರಾಜಧಾನಿಯಲ್ಲಿ 40 ವರ್ಷಗಳಿಂದ ವಾಸಿಸುತ್ತಿದ್ದರು. ಗುರುವಾರ ಸಂಜೆ ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿರುವ ಅವರ ಅಂಗಡಿಯಲ್ಲಿ ನಿಶ್ಚಲ್ ಅವರನ್ನು ಭಯೋತ್ಪಾದಕರು ಕೊಲೆ ಮಾಡಿದ್ದಾರೆ.
ಓರ್ವ ಹಿಂದೂ ಎಂದಿಗೂ ರಾಷ್ಟ್ರ ವಿರೋಧಿಯಾಗಲಾರ: ಮೋಹನ್ ಭಾಗವತ್!
ಹೊಸ ಕಾನೂನಿನಡಿಯಲ್ಲಿ ಪ್ರಮಾಣಪತ್ರವನ್ನು ಪಡೆದು ಭಯೋತ್ಪಾದಕರಿಂದ ಹಲ್ಲೆಗೊಳಗಾದ ಮೊದಲ ವ್ಯಕ್ತಿ ನಿಶ್ಚಲ್ ಆಗಿದ್ದಾರೆ. ಗುಂಡಿನ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶ್ರೀನಗರದ ಸರೈಬಾಲಾದಲ್ಲಿ ಸತ್ಪಾಲ್ ನಿಚಾಲ್ ಎಂಬ ಚಿನ್ನದ ಕೆಲಸಗಾರನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆಯಲ್ಲಿ ಅವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ ಮತ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
UP,MP ಬಳಿಕ ಇದೀಗ ಗುಜರಾತ್; ಲವ್ ಜಿಹಾದ್ ವಿರುದ್ಧ ಮತ್ತಷ್ಟು ಕಠಿಣ ಕಾನೂನು !
ಹೊಸ ನಿವಾಸ ಕಾನೂನಿನ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ಕನಿಷ್ಠ 15 ವರ್ಷಗಳ ರೆಸಿಡೆನ್ಸಿ ಪ್ರೂಫ್ ಹೊಂದಿರುವ ನಿವಾಸಿಗಳಿಗೆ ನಿವಾಸ ಪ್ರಮಾಣಪತ್ರಗಳನ್ನು ಪಡೆಯಲು ಅರ್ಹತೆ ಇದೆ. 370 ನೇ ವಿಧಿಯನ್ನು ರದ್ದುಗೊಳಿಸುವ ಮೊದಲು, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯದ ಜನರಿಗೆ ಮಾತ್ರ ಭೂಮಿ ಖರೀದಿಸಲು ಮತ್ತು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು.
ನಿಶ್ಚಲ್ ಹತ್ಯೆಯ ನಂತರ, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯಾದ ಟಿಆರ್‌ಎಫ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಮತ್ತು ಇಂತಹ ಹೆಚ್ಚಿನ ಘಟನೆಗಳ ಬಗ್ಗೆ ಎಚ್ಚರಿಕೆ ನೀಡಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 2, 2021, 3:44 PM IST