ನವದೆಹಲಿ [ಮಾ.20]: ಜ್ಯೋತಿರಾಧಿತ್ಯ ಸಿಂಧಿತಾ ಬಣದ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಬಿಕ್ಕಟ್ಟಿಗೆ ಸಿಲುಕಿದ್ದ ಮಧ್ಯ ರಾಜಕೀಯ ಇದೀಗ ಹೊಸ ತಿರುವು ಪಡೆದುಕೊಂಡಿದೆ. 

ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ವಿಶ್ವಾಸಮತ ಸಾಬಿತುಪಡಿಸುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಮಾರ್ಚ್ 20ರ ಸಂಜೆ 5 ಗಂಟೆಯ ಒಳಗೆ ಸರ್ಕಾರ ತನ್ನ ವಿಶ್ವಾಸಮತ ಸಾಬೀತು ಮಾಡಬೇಕು ಎಂದು ಸಭಾಪತಿ ಸೂಚಿಸಿದ್ದರು.

ಮಧ್ಯಪ್ರದೇಶ, ಕಮಲ್ ನಾಥ್ ಸರ್ಕಾರ ಉಳಿಸಲು ಮುಂದಾದ ಈ 13ರ ಪೋರ ಯಾರು?...

ಆದರೆ ಕಮಲನಾಥ್ ಅವರು ವಿಶ್ವಾಸಮತ ಸಾಬಿತುಪಡಿಸುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಹುದ್ದೆ ತೊರೆದಿದ್ದಾರೆ.  

ಕೊರೋನಾ ಭೀತಿಯಲ್ಲೂ ಮಧ್ಯೆಪ್ರದೇಶ ರಾಜಕೀಯ ಹೈಡ್ರಾಮಕ್ಕೆ ಕೊನೆ ಮೊಳೆ ಹೊಡೆದ ಸುಪ್ರೀಂ.

ಒಟ್ಟು 230 ಸಂಖ್ಯಾಬಲದ  ಮಧ್ಯ ಪ್ರದೇಶದಲ್ಲಿ ಬಹುಮತಕ್ಕೆ 112 ಸ್ಥಾನಗಳು ಅಗತ್ಯವಿತ್ತು. ಆದರೆ ಕಾಂಗ್ರೆಸಿನಿಂದ 22 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಕಾಂಗ್ರೆಸ್ 99 ಪ್ಲಸ್ ಸ್ಥಾನಗಳು ಉಳಿದಿದ್ದು, ಈ ನಿಟ್ಟಿನಲ್ಲಿ ಕಮಲ್ ನಾಥ್ ತಮ್ಮ ಸ್ಥಾನ ತೊರೆದಿದ್ದಾರೆ.

2018ರ ಡಿಸೆಂಬರ್ 17 ರಂದು ಕಮಲ್ ನಾಥ್ ಮಧ್ಯಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ವಿಶ್ವಾಸ ಮತ ಸಾಬೀತು ಮುನ್ನವೇ ಸ್ಥಾನ ತೊರೆದು ಕೆಳಕ್ಕೆ ಇಳಿದಿದ್ದಾರೆ.