ಲಕ್ನೋ(ಅ. 07)  ದೆಹಲಿಯಿಂದ  ಹತ್ರಾಸ್ ಗೆ ತೆರಳುತ್ತಿದ್ದ  ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಮೂವರನ್ನು ಅನುಮಾನಾಸ್ಪದ ವ್ಯಕ್ತಿಗಳು ಎಂಬ ಆರೋಪದ ಮೇಲೆ ಬಂಧಿಸಿದ್ದನ್ನು  ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್  ಖಂಡಿಸಿದ್ದು ಕೂಡಲೇ ಬಿಡುಗಡೆ ಮಾಡಲು ಒತ್ತಾಯ ಮಾಡಿದೆ.

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಸಂತ್ರೆಸ್ತೆಯ ಮನೆಗೆ ಭೇಟಿ ನೀಡಿ ವಾಸ್ತವದ ವರದಿ ಮಾಡಲು ತೆರಳುತ್ತಿದ್ದವರ ಬಂಧನ ಮಾಡಲಾಗಿತ್ತು. ಟೋಲ್ ಗೇಟ್ ನಲ್ಲಿ ಅತೀಕ್ ಊರ್ ರೆಹಮಾನ್, ಸಿದ್ದೀಕ್ ಕಪ್ಪನ್, ಮಸೂದ್ ಅಹಮದ್ ಮತ್ತು ಆಲಂ ಎಂಬುವರನ್ನು ಬಂಧನ ಮಾಡಲಾಗಿತ್ತು

ರೇಪ್ ಗಳಿಗೆ  ಪೋಷಕರೆ ಕಾರಣ; ಬಿಜೆಪಿ ನಾಯಕನ ವಿವಾದಿತ ಹೇಳಿಕೆ

ಹತ್ರಾಸ್ ಸಂತ್ರಸ್ತ ಕುಟುಂಬದ ಪರಿಸ್ಥಿತಿ ವರದಿ ಮಾಡಲು ಸಿದ್ದೀಕ್ ತೆರಳುತ್ತಿದ್ದರು. ಸಿದ್ದೀಕ್ ಕಪ್ಪನ್, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯೂಜೆ) ದೆಹಲಿ ಘಟಕದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದು ಸಿದ್ದೀಕ್ ಅವರನ್ನು ಬಿಡುಗಡೆ ಮಾಡಲು ಕೇಳಿಕೊಂಡಿತ್ತು. ಇನ್ನೊಂದು ಕಡೆ ಈ ನಾಲ್ವರು ಪಿಎಫ್‌ಐನೊಂದಿಗೆ ನಂಟು ಹೊಂದಿದ್ದರು ಎಂಬ ಆರೋಪವೂ ಕೇಳಿಬಂದಿದೆ. 

PFI ಲಿಂಕ್?  ಹತ್ರಾಸ್‌ಗೆ ತೆರಳುತ್ತಿದ್ದ ಪತ್ರಕರ್ತ ಟೋಲ್‌ಗೇಟ್‌ನಲ್ಲೇ ಅರೆಸ್ಟ್!...