ರಾಂಚಿ[ಡಿ.01]: 5 ಹಂತಗಳ ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ಶನಿವಾರ ಮೊದಲ ಹಂತದ ಮತದಾನ ನಡೆದಿದ್ದು, ಶೇ.64.12ರಷ್ಟುಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. 6 ನಕ್ಸಲ್‌ಪೀಡಿತ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಚುನಾವಣೆ ನಡೆಯಿತು.

ಹೀಗಾಗಿ ಭಾರೀ ಭದ್ರತೆ ಕಲ್ಪಿಸಲಾಗಿತ್ತು. ನಕ್ಸಲ್‌ಪೀಡಿತ ಪ್ರದೇಶಗಳಾದ ಕಾರಣ ಮಧ್ಯಾಹ್ನ 3 ಗಂಟೆಗೇ ಮತದಾನ ಮುಕ್ತಾಯಗೊಂಡಿತು. 81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಯಲ್ಲಿ ಸದ್ಯ ಬಿಜೆಪಿ ಸರ್ಕಾರವಿದೆ. ಡಿ.7, 12, 16, 20ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ಆಡಳಿತ ಇರುವ ಜಾರ್ಖಂಡ್‌ ವಿಧಾನಸಭೆಯ ಮೊದಲ ಸುತ್ತಿನ ಮತದಾನ ಶನಿವಾರ ಪೂರ್ಣಗೊಂಡಿದ್ದು, ನಕ್ಸಲೀಯರ ಬೆದರಿಕೆ ಮಧ್ಯೆಯೂ ಶೇ.64.12ರಷ್ಟುಉತ್ತಮ ಮತದಾನ ನಡೆದಿದೆ.

6 ನಕ್ಸಲ್‌ಪೀಡಿತ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಚುನಾವಣೆ ಜರುಗಿತು. ಹೀಗಾಗಿ ಭಾರೀ ಭದ್ರತೆಯ ನಡುವೆ ಮತದಾನ ನಡೆಯಿತು. ನಕ್ಸಲ್‌ಪೀಡಿತ ಪ್ರದೇಶಗಳಾದ ಕಾರಣ ಮಧ್ಯಾಹ್ನ 3 ಗಂಟೆಗೇ ಮತದಾನ ಮುಕ್ತಾಯಗೊಂಡಿತು.

ಅಲ್ಲಲ್ಲಿ ಹಿಂಸಾಚಾರ ಹೊರತುಪಡಿಸಿದರೆ ಮಿಕ್ಕ ಕಡೆ ಚುನಾವಣೆ ಶಾಂತವಾಗಿ ನಡೆಯಿತು. ಬಿಲಾಸ್‌ಪುರ ವಿಧಾನಸಭಾ ಕ್ಷೇತ್ರದ ಅರಣ್ಯವೊಂದರ ಸಮೀಪ ಬಾಂಬ್‌ ಸ್ಫೋಟ ನಡೆದಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಒಟ್ಟು 189 ಅಭ್ಯರ್ಥಿಗಳು ಮೊದಲ ಹಂತದಲ್ಲಿ ಕಣಕ್ಕಿಳಿದಿದ್ದರು.

ಮುಖ್ಯಮಂತ್ರಿ ರಘುಬರ ದಾಸ್‌ ನೇತೃತ್ವದಲ್ಲಿ ಬಿಜೆಪಿ ಪುನಃ ಅಖಾಡಕ್ಕೆ ಇಳಿದಿದೆ. ಇದಕ್ಕೆ ಜಾರ್ಖಂಡ್‌ ಮುಕ್ತಿ ಮೋರ್ಚಾ, ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಮೈತ್ರಿಕೂಟ ಪ್ರಬಲ ಸ್ಪರ್ಧೆ ಒಡ್ಡಿದೆ. ಬಾಬುಲಾಲ್‌ ಮರಾಂಡಿ ಅವರ ಜಾರ್ಖಂಡ್‌ ವಿಕಾಸ್‌ ಮೋರ್ಚಾ (ಪಿ), ಜೆಡಿಯು ಹಾಗೂ ಎಡಪಕ್ಷಗಳು ಕೂಡ ಅಖಾಡಕ್ಕಿಳಿದಿವೆ.

ಒಟ್ಟು 81 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮುಂದಿನ ಹಂತದ ಮತದಾನವು ಡಿಸೆಂಬರ್‌ 7, 12, 16 ಹಾಗೂ 20ರಂದು ನಡೆಯಲಿದೆ. ಡಿ.23ರಂದು ಫಲಿತಾಂಶ ಪ್ರಕಟವಾಗಲಿದೆ.