ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನವದೆಹಲಿ: ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ‘ನಾಚ್-ಗಾನಾ’ (ಹಾಡು ಮತ್ತು ನೃತ್ಯ) ಸಭೆ ಆಗಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಡಿದ್ದಾರೆ ಎನ್ನಲಾದ ಮಾತಿನ ವಿಡಿಯೋ ವೈರಲ್ ಆಗಿದೆ. ಇದರ ವಿರುದ್ಧ ಬಿಜೆಪಿ ಕಿಡಿಕಾರಿದೆ.
‘ಬಿಜೆಪಿ ಅಯೋಧ್ಯೆಯಲ್ಲಿ ಏಕೆ ಸೋತಿತು ಗೊತ್ತೆ? ಅವರು ಅಯೋಧ್ಯೆಯಲ್ಲಿ ಮಂದಿರ ತೆರೆದರು. ನೀವು ಅದಾನಿ, ಅಂಬಾನಿ ಮತ್ತು ಬಚ್ಚನ್ ಅವರನ್ನು ಅಲ್ಲಿ ನೋಡಿದಿರಿ. ಆದರೆ ಒಬ್ಬ ಬಡ ರೈತನೂ ಇರಲಿಲ್ಲ. ಬರೀ ನಾಚ್-ಗಾನಾ (ಹಾಡು-ನೃತ್ಯ) ಇತ್ತು. ಇದೇ ಅವರು ಸೋಲಲು ಕಾರಣ’ ಎಂದಿದ್ದು ವಿಡಿಯೋದಲ್ಲಿದೆ.
ಲೋಕಾಯುಕ್ತ ತನಿಖೆ ಎದುರಿಸುವ ನಿರ್ಧಾರಕ್ಕೆ ಸಿಎಂ ಬಂದರೆ ಅದಕ್ಕಿರುವ ಅಡ್ಡಿ ಆತಂಕಗಳು ಏನು?
ರಾಗಾ ಸುಳ್ಳುಗಾರ- ಬಿಜೆಪಿ ಟೀಕೆ:
ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇಧಿ, ಕಾಂಗ್ರೆಸ್ ಪದೇ ಪದೇ ರಾಮ ಮಂದಿರಕ್ಕೆ ಅಗೌರವ ತೋರುತ್ತಿದೆ. ರಾಹುಲ್ ಗಾಂಧಿ ಒಬ್ಬರ ಉನ್ನತ ಆದೇಶದ ಸುಳ್ಳುಗಾರ ಎಂದು ಕಿಡಿಕಾರಿದ್ದಾರೆ. ಈ ನಡುವೆ ನಾಚ್‌ಗಾನ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಸುಳ್ಳಿನ ನಾಯಕ. ಅವರು ಹಿಂದೂ ವಿರೋಧಿ ಮನಸ್ಥಿತಿ ಯನ್ನು ಹೊಂದಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಟೀಕಿಸಿದೆ.
‘ನಾಯ್ಡು ಪಾಪ ಪರಿಹಾರ’ಕ್ಕೆ ಜಗನ್ ಪಕ್ಷದಿಂದ ‘ಪ್ರಾಯಶ್ಚಿತ್ತ ಪೂಜೆ’
