ಲಖನೌ[ಫೆ.04]: ಉತ್ತರ ಪ್ರದೇಶದ ಫರೂಖಾಬಾದ್‌ನಲ್ಲಿ 23 ಮಕ್ಕಳನ್ನು ಒತ್ತೆ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆಯ ಬಳಿಕ ಅನಾಥವಾಗಿರುವ ಆತನ ಒಂದು ವರ್ಷದ ಮಗುವನ್ನು ದತ್ತು ಸ್ವೀಕರಿಸಲು ಉತ್ತರ ಪ್ರದೇಶದ ಪೊಲೀಸ್‌ ಅಧಿಕಾರಿಯೊಬ್ಬರು ಮುಂದಾಗಿದ್ದಾರೆ.

ಮಕ್ಕಳನ್ನು ಒತ್ತೆ ಇಟ್ಟುಕೊಂಡಿದ್ದ ಕೊಲೆ ಆರೋಪಿ ಸುಭಾಷ್‌ ಬಾಥಮ್‌ ಕಳೆದ ವಾರ ಪೊಲೀಸರ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದ. ಬಳಿಕ ಆತನ ಪತ್ನಿಯನ್ನು ಜನರು ಥಳಿಸಿ ಹತ್ಯೆ ಮಾಡಿದ್ದರು. ಆದರೆ, ಒಂದು ವರ್ಷದ ಹೆಣ್ಣು ಮಗು ಗೌರಿಯನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಮಗುವನ್ನು ನೋಡಿಕೊಳ್ಳಲು ಯಾರೂ ಮುಂದಾಗದೇ ಇರುವ ಕಾರಣ, ತಾವು ಆ ಮಗುವನ್ನು ದತ್ತು ಸ್ವೀಕರಿಸುತ್ತಿರುವುದಾಗಿ ಕಾನ್ಪುರ ಐಜಿಪಿ ಮೋಹಿತ್‌ ಅಗರ್ವಾಲ್‌ ಹೇಳಿದ್ದಾರೆ.

ಆ ಮಗು ಬೆಳೆದು ದೊಡ್ಡವಳಾದ ಬಳಿಕ ಐಪಿಎಸ್‌ ಅಧಿಕಾರಿಯನ್ನಾಗಿ ಮಾಡುವ ಬಯಕೆಯನ್ನು ಅವರು ಹೊಂದಿದ್ದಾರೆ.