2216 ಹುದ್ದೆ, ಸಂದರ್ಶನಕ್ಕೆ ಸೇರಿದ್ದು ಮಾತ್ರ 25 ಸಾವಿರಕ್ಕೂ ಹೆಚ್ಚು ಜನ: ನೂಕಾಟ ತಳ್ಳಾಟ
ಇತ್ತೀಚೆಗೆ ಮುಂಬೈನಲ್ಲಿ ನಡೆದ ಉದ್ಯೋಗ ನೇಮಕಾತಿ ಸಂದರ್ಶನಕ್ಕೆ ಸೇರಿದ ಯುವಕರ ಸಂಖ್ಯೆ ನೋಡಿದರೆ ತಲೆ ತಿರುಗುತ್ತಿದ್ದೆ. 2216 ಹುದ್ದೆಗಳ ನೇಮಕಾತಿಗೆ ನಡೆಯುತ್ತಿದ್ದ ಸಂದರ್ಶನಕ್ಕೆ 25 ಸಾವಿರಕ್ಕೂ ಹೆಚ್ಚು ಜನ ಸೇರಿದ ಪರಿಣಾಮ ಸಂದರ್ಶನ ನಡೆದ ಸ್ಥಳದಲ್ಲಿ ನೂಕಾಟ ತಳ್ಳಾಟ ಉಂಟಾಗಿ ಕಾಲ್ತುಳಿತವೊಂದು ಆಗುವುದು ಸ್ವಲ್ಪದರಲ್ಲೇ ತಪ್ಪಿದ್ದಂತಹ ಘಟನೆ ನಡೆದಿದೆ.
ಮುಂಬೈ: ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಮಧ್ಯೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಭಾವದಿಂದಾಗಿ ಅನೇಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ 2024ರಲ್ಲಿ ಐಐಟಿಯಿಂದ ಹೊರಬಿದ್ದ 7 ಸಾವಿರಕ್ಕೂ ಅಧಿಕ ಪದವೀಧರರಿಗೆ ಉದ್ಯೋಗ ಸಿಗಲ್ಲ ಎಂಬ ವರದಿಗಳಿವೆ. ಇದೆಲ್ಲದರ ನಡುವೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಉದ್ಯೋಗ ನೇಮಕಾತಿ ಸಂದರ್ಶನಕ್ಕೆ ಸೇರಿದ ಯುವಕರ ಸಂಖ್ಯೆ ನೋಡಿದರೆ ತಲೆ ತಿರುಗುತ್ತಿದ್ದೆ. 2216 ಹುದ್ದೆಗಳ ನೇಮಕಾತಿಗೆ ನಡೆಯುತ್ತಿದ್ದ ಸಂದರ್ಶನಕ್ಕೆ 25 ಸಾವಿರಕ್ಕೂ ಹೆಚ್ಚು ಜನ ಸೇರಿದ ಪರಿಣಾಮ ಸಂದರ್ಶನ ನಡೆದ ಸ್ಥಳದಲ್ಲಿ ನೂಕಾಟ ತಳ್ಳಾಟ ಉಂಟಾಗಿ ಕಾಲ್ತುಳಿತವೊಂದು ಆಗುವುದು ಸ್ವಲ್ಪದರಲ್ಲೇ ತಪ್ಪಿದ್ದಂತಹ ಘಟನೆ ನಡೆದಿದೆ.
ಮುಂಬೈನಲ್ಲಿ ಏರ್‌ಪೋರ್ಟ್ ಲೋಡರ್‌ಗಳ ಹುದ್ದೆಗೆ ಉದ್ಯೋಗಿಗಳ ಆಯ್ಕೆ ಮಾಡುವುದಕ್ಕಾಗಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಇಲ್ಲಿ 2,216 ಹುದ್ದೆಗಳಿದ್ದು, ಇದಕ್ಕೆ ಕರೆದಿದ್ದ ಸಂದರ್ಶನಕ್ಕೆ 25 ಸಾವಿರಕ್ಕೂ ಅಧಿಕ ಜನ ಸೇರಿದ್ದರು. ಇಷ್ಟು ಕಡಿಮೆ ಪೋಸ್ಟ್‌ಗೆ ಸಾಗರದಂತೆ ಇಷ್ಟೊಂದು ಜನ ಸೇರಿದ್ದರಿಂದ ಏರ್ ಇಂಡಿಯಾದ ಏರ್‌ಪೋರ್ಟ್ ಸರ್ವೀಸ್ ಲಿಮಿಟೆಡ್‌ನ ಸಿಬ್ಬಂದಿಗಳು ಈ ಜನರನ್ನು ನಿಭಾಯಿಸಲು ಹರಸಾಹಸಪಟ್ಟಿದ್ದಾರೆ. ಏರ್ ಇಂಡಿಯಾದ ಏರ್‌ಪೋರ್ಟ್ ಸರ್ವೀಸ್ ಲಿಮಿಟೆಡ್ ದೇಶದ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಗ್ರೌಂಡ್ ಸಿಬ್ಬಂದಿಯನ್ನು ಒದಗಿಸುತ್ತದೆ. ಆದರೆ ಇಲ್ಲಿ ಸೇರಿದ್ದ ಯುವಕರನ್ನು ನೋಡಿ ಏರ್‌ಪೋರ್ಟ್ ಸಿಬ್ಬಂದಿಯೇ ಶಾಕ್ ಆಗಿದ್ದಾರೆ.
7000 ಐಐಟಿ ಪದವೀಧರರಿಗೆ ಇನ್ನೂ ಉದ್ಯೋಗ ಆಫರ್ ಇಲ್ಲ!
ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿರುವ ದೃಶ್ಯದ ವೀಡಿಯೋಗಳು ತೋರಿಸುವಂತೆ ಫಾರ್ಮ್ ಕೌಂಟರ್ ತಲುಪಲು ಉದ್ಯೋಗಾಕಾಂಕ್ಷಿಗಳು ನೂಕಾಟ ತಳ್ಳಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದರ ಜೊತೆಗೆ ಉದ್ಯೋಗಕ್ಕಾಗಿ ಆಕಾಂಕ್ಷಿಗಳು ಆಹಾರ ನೀರು ಇಲ್ಲದೇ ಗಂಟೆಗಟ್ಟಲೇ ಕಾದಿದ್ದಾರೆ. ಅಲ್ಲದೇ ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ವರದಿ ಆಗಿದೆ.
ಏರ್‌ಪೋರ್ಟ್ ಲೋಡರ್‌ಗಳಿಗೆ ವಿಮಾನದಿಂದ ಲಗೇಜ್‌ಗಳನ್ನು ಅನ್‌ಲೋಡ್ ಮಾಡುವ ಹಾಗೂ ಲೋಡ್ ಮಾಡುವ ಹಾಗೂ ಬ್ಯಾಗೇಜ್ ಬೆಲ್ಟ್ ಹಾಗೂ ರಾಂಪ್ ಟ್ರ್ಯಾಕ್ಟರ್‌ಗಳನ್ನು ನಿರ್ವಹಿಸುವ ಕೆಲಸವಿರುತ್ತದೆ. ಪ್ರತಿ ವಿಮಾನಯಾನ ಸಂಸ್ಥೆಯೂ ಪ್ರತಿ ವಿಮಾನ ನಿಲ್ದಾಣದಲ್ಲಿ ಲಗೇಜ್ ಹಾಗೂ ಆಹಾರ ಪೂರೈಕೆ ಹಾಗೂ ಕಾರ್ಗೋಗಳನ್ನು ನಿರ್ವಹಿಸಲು ಕನಿಷ್ಠ ಐದು ಲೋಡರ್‌ಗಳನ್ನು ಹೊಂದಿರಬೇಕು. ಇವರ ವೇತನ ಶ್ರೇಣಿ 20 ರಿಂದ 25 ಸಾವಿರ ಇರಬೇಕು. ಆದರೆ ಇಲ್ಲಿ ಕೆಲಸ ಮಾಡುವ ಬಹುತೇಕರು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ ತಿಂಗಳಿಗೆ 30 ಸಾವಿರ ಸಂಪಾದಿಸುತ್ತಾರೆ. ಆದರೆ ಇವರ ಶೈಕ್ಷಣಿಕ ಅರ್ಹತೆ ಕಡಿಮೆ ಆಗಿದ್ದರೂ ದೈಹಿಕವಾಗಿ ಬಹಳ ಸಧೃಡವಾಗಿರಬೇಕು.
ಇನ್ನು ಈ ಸಂದರ್ಶನಕ್ಕೆ ಯುವಕನೋರ್ವ ಬುಲ್ಧಾನ ಜಿಲ್ಲೆಯಿಂದ 400 ಕಿಲೋ ಮೀಟರ್ ಪ್ರಯಾಣ ಮಾಡಿ ಈ ಸಂದರ್ಶನಕ್ಕಾಗಿ ಬಂದಿದ್ದ, ನಾನು ಹ್ಯಾಂಡಿಮ್ಯನ್ (ಕೆಲಸದಾಳು) ಪೋಸ್ಟ್‌ಗೆ ಅರ್ಜಿ ಸಲ್ಲಿಸಲು ಬಂದಿದ್ದೇನೆ, ಅವರು 22,500 ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಎಂದು ಹೇಳಿದ ಈ ತ ಬಿಬಿಎ ವಿದ್ಯಾರ್ಥಿ, ಉದ್ಯೋಗ ಸಿಕ್ಕರೆ ಕೆಲಸ ತೊರೆಯುವಿರಾ ಎಂದು ಕೇಳಿದಾಗ, ಆತ ಹೇಳಿದ್ದು, ಏನ್ ಮಾಡೋಕಾಗುತ್ತೆ, ಇಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಿದ್ದಾರೆ, ಸರ್ಕಾರ ಮತ್ತಷ್ಟು ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಹೇಳಿದ್ದಾನೆ.
ಇದ್ದ ಕೆಲಸ ಬಿಟ್ಟು 100 ಕೋಟಿ ರೂ. ಕಂಪನಿ ಕಟ್ಟಿದ 30ರ ಯುವತಿ; ತಾಯಿಯ ಮಾತೇ ಶಕ್ತಿ
ಹಾಗೆಯೇ ಮತ್ತೊಬ್ಬ ಬಿಎ ಪದವಿ ಪಡೆದಿರುವಾತ ಕೂಡ ಈ ಹ್ಯಾಂಡಿಮನ್ ಕೆಲಸ ಗಿಟ್ಟಿಸಿಕೊಳ್ಳಲು ಬಂದಿದ್ದ, ಕೆಲಸ ಗೊತ್ತಿಲ್ಲ, ಆದರೆ ಕೆಲಸ ಬೇಕು ಎಂಬುದು ಆತನ ಮಾತಾಗಿತ್ತು. ಮತ್ತೊಬ್ಬ ರಾಜಸ್ಥಾನದ ಅಲ್ವಾರದಿಂದ ಬಂದಿದ್ದು, ಆತನ ವಿದ್ಯಾರ್ಹತೆ ಎಂಕಾಂ ಆದರೆ ಕನಿಷ್ಟ ವಿದ್ಯಾರ್ಹತೆ ಇರುವ ಈ ಕೆಲಸಕ್ಕೆ ಆತ ಆಕಾಂಕ್ಷಿಯಾಗಿದ್ದ, ನಾನು ಸರ್ಕಾರಿ ಕೆಲಸಕ್ಕೆ ಸಿದ್ಧಗೊಳ್ಳುತ್ತಿದ್ದೇನೆ, ಯಾರೋ ಇಲ್ಲಿ ಉತ್ತಮ ಸ್ಯಾಲರಿ ಕೊಡುತ್ತಾರೆ ಎಂದರು ಎಂದು ಆತ ಹೇಳಿದ್ದಾನೆ.
ಒಟ್ಟಿನಲ್ಲಿ ದೇಶದ ಜನಸಂಖ್ಯೆ ಏರುತ್ತಿರುವುದರ ಜೊತೆ ಜೊತೆಗೆ ತೀವ್ರವಾಗಿ ನಿರುದ್ಯೋಗಿಗಳ ಸಂಖ್ಯೆಯೂ ನಿರಂತರ ಹೆಚ್ಚಳವಾಗುತ್ತಿರುವುದು ಆತಂಕದ ವಿಚಾರವಾಗಿದ್ದು, ಜನ ಸ್ವಉದ್ಯೋಗದತ್ತ ಮುಖ ಮಾಡಬೇಕಿದೆ.