ಚೀನಾ(ಜೂ.12): ಚೀನಾ ಗಡಿ ಖ್ಯಾತೆ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ನೇಪಾಳ ಗಡಿ ಸಮಸ್ಯೆ ಆರಂಭಗೊಂಡಿದೆ. ಇಂದು(ಜೂ.12) ನೇಪಾಳ ಬಾರ್ಡರ್ ಪೊಲೀಸರ ಗುಂಡಿಗೆ ಒರ್ವ ಭಾರತೀಯ ಮೃತಪಟ್ಟಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಷ್ಟೇ ಅಲ್ಲ ಮತ್ತೊರ್ವನನ್ನು ನೇಪಾಳ ಬಾರ್ಡರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೇಪಾಳದಲ್ಲಿ ಕೊರೋನಾ ಹರಡಲು ಭಾರತ ಕಾರಣ; ಪ್ರಧಾನಿ ಕೆಪಿ ಶರ್ಮಾ!...

ಭಾರತ ನೇಪಾಳ ಗಡಿಯ ಜಾನಕಿನಗರ ಗ್ರಾಮದ ನಿವಾಸಿಯೊಬ್ಬರ ಮಗಳನ್ನು ನೇಪಾಳದ ವ್ಯಕ್ತಿಗೆ ಮುದವೆ ಮಾಡಿಕೊಡಲಾಗಿದೆ. ಹೀಗಾಗಿ ಮಗಳನ್ನು ಕರೆ ತರಲು ನೇಪಾಳಕ್ಕೆ ಪ್ರವೇಶಿಸಿದ್ದಾರೆ. ಈ ವೇಳೆ ಕೊರೋನಾ ವೈರಸ್ ಕಾರಣ ಭಾರತೀಯರು ನೇಪಾಳ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೂ ಹಲವು ಮಾರ್ಗಗಳ ಮೂಲಕ ಭಾರತೀಯರು ನೇಪಾಳ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವ ನೇಪಾಳ ಬಾರ್ಡರ್ ಪೊಲೀಸರ ಜೊತೆ ಭಾರತೀಯರು ವಾಗ್ವಾದ ನಡೆಸಿದ್ದಾರೆ. 

ಪಾಕ್, ಚೀನಾ ಬೆನ್ನಲ್ಲೇ ಗಡಿ ಕ್ಯಾತೆ ತೆಗೆದ ನೇಪಾಳ: ಭಾರತದ ಭೂಭಾಗ ಸೇರಿಸಿ ಹೊಸ ನಕ್ಷೆ!

ನೇಪಾಳದಿಂದ ಹಿಂತಿರುಗಿಸಲು ಸೂಚಿಸಿದ ನೇಪಾಳ ಬಾರ್ಡರ್ ಪೊಲೀಸರ ಜೊತೆ ಭಾರತೀಯರು ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಪೊಲೀಸರು 15 ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳ ಓರ್ವ ಭಾರತೀಯ ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಇಬ್ಬರು ಗಾಯಗೊಂಡಿದ್ದಾರೆ. 45 ವರ್ಷದ ಲಾಗನ್ ಯಾದವ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಸಶಸ್ತ್ರ ಸೀಮಾದಳ ಪಡೆಯ ನಿರ್ದೇಶಕ ಕುಮಾರ್ ರಾಜೇಶ್ ಚಂದ್ರ, ನೇಪಾಳ ಬಾರ್ಡರ್ ಪೊಲೀಸರ ಜೊತೆ ಮಾತುಕತೆ ನಡೆಸಿದ್ದಾರೆ.  ಸದ್ಯ ಪರಿಸ್ಥಿತಿ ಶಾಂವಾಗಿದ್ದು, ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ. ವಾಸ್ತವಿಕ ವರದಿ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ನೀಡಲಾಗುವುದು ಎಂದಿದ್ದಾರೆ.