ನವದೆಹಲಿ[ಫೆ.24]: ಪೌರತ್ವ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯ ಜಾಫರಾಬಾದ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ದೆಹಲಿ ಪೊಲೀಸರು ಭಾರತೀಯ ಸೇನಾ ಸಮವಸ್ತ್ರದಲ್ಲಿ ಕಂಡು ಬಂದಿದ್ದಾರೆ. 

ಸುಮಾರು 1.04 ನಿಮಿಷದ ಈ ವಿಡಿಯೋದಲ್ಲಿ ದೆಹಲಿ ಪೊಲೀಸರು ಸೇನಾ ಸಮವಸ್ತ್ರ ಧರಿಸಿರುವುದು ಸ್ಪಷ್ಟವಾಗಿದೆ. ಸದ್ಯ ಈ ಸಂಬಂಧ ಪ್ರತಿಕ್ರಿಯಿಸಿರುವ ಸೇನಾಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. 

ಸುದ್ದಿ ಸಂಸ್ಥೆ ANI ಟ್ವೀಟ್ ಒಂದನ್ನು ಮಾಡಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಸೇನಾಧಿಕಾರಿಗಳು 'ಆಂತರಿಕ ಸುರಕ್ಷತೆಗಾಗಿ ಭಾರತೀಯ ಸೇನೆಯನ್ನು ಇಲ್ಲಿ ನಿಯೋಜಿಸಿರಲಿಲ್ಲ ಎಂಬುವುದನ್ನು ಸ್ಪಷ್ಟಪಡಿಸುತ್ತೇವೆ' ಎಂದಿದೆ.

ಅಲ್ಲದೇ 'ಭಾರತೀಯ ಸೇನಾ ಸಮವಸ್ತ್ರ ಧರಿಸಿದ ರಾಜ್ಯ ಪೊಲೀಸ್ ಪಡೆ ಹಾಗೂ ಖಾಸಗಿ ಭದ್ರತಾ ಏಜಡನ್ಸಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದು ತಿಳಿಸಿದೆ. ನಿಯಮಗಳನ್ವಯ ಅರೆಸೇನಾ ಪಡೆ ಹಾಗೂ ರಾಜ್ಯ ಪೊಲೀಸ್ ಪಡೆ ಸಿಬ್ಬಂದಿ ಭಾರತೀಯ ಯೋಧರು ಧರಿಸುವ ಸಮವಸ್ತ್ರ ಧರಿಸುವಂತಿಲ್ಲ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್‌

"