ತಂತ್ರಜ್ಞಾನ ಮುಂದುವರಿ ಯುತ್ತಿದ್ದಂತೆಯೇ ಯುದ್ಧಗಳ ವಿಧಾನಗಳು ಕೂಡ ಬದಲಾಗುತ್ತಿವೆ. ಕೇವಲ ಎದುರು ಬದುರಾಗಿ ಖಡ್ಗ, ಗನ್ ಹಿಡಿದು ಯುದ್ಧ ನಡೆಸುವ ಕಾಲಹೋಗಿ ಅತ್ಯಾಧುನಿಕ ಯುದ್ದದೆ ವಿಧಾನಗಳು ಕಾರ್ಯರೂಪಕ್ಕೆ ಬಂದಿವೆ.  

ನವದೆಹಲಿ (ಮಾ.20): ತಂತ್ರಜ್ಞಾನ ಮುಂದುವರಿ ಯುತ್ತಿದ್ದಂತೆಯೇ ಯುದ್ಧಗಳ ವಿಧಾನಗಳು ಕೂಡ ಬದಲಾಗುತ್ತಿವೆ. ಕೇವಲ ಎದುರು ಬದುರಾಗಿ ಖಡ್ಗ, ಗನ್ ಹಿಡಿದು ಯುದ್ಧ ನಡೆಸುವ ಕಾಲಹೋಗಿ ಅತ್ಯಾಧುನಿಕ ಯುದ್ದದೆ ವಿಧಾನಗಳು ಕಾರ್ಯರೂಪಕ್ಕೆ ಬಂದಿವೆ. ಹೀಗಾಗಿ ಭಾರತೀಯ ಸೇನೆಯು 'ಸಿಗ್ನಲ್ಸ್ ಟೆಕ್ನಾಲಜಿ ಇವ್ಯಾಲ್ಯು ಯೇಶನ್ ಮತ್ತು ಅಡಾಪ್ಟೆಶನ್ ಗ್ರೂಪ್' (ಎಸ್‌ಟಿಇಎಜಿ) ಎಂಬ ಸೇನಾ ಘಟಕವನ್ನು ಹುಟ್ಟುಹಾಕಿದೆ. ಈ ಘಟಕವು ಈಗ ಕೃತಕ ಬುದ್ಧಿಮತ್ತೆ, 5ಜಿ ಮತ್ತು 6ಜಿ, ಮೆಷಿನ್ ಲರ್ನಿಂಗ್, ಕ್ವಾಂಟಮ್ ತಂತ್ರಜ್ಞಾನಂತಹ ಭವಿಷ್ಯದ ಸಂವಹನ ತಂತ್ರಜ್ಞಾನಗಳ ಸಂಶೋಧನೆ ನಡೆಸಲಿದೆ. 

'ಸಂವಹನವು ಮಿಲಿಟರಿ ಕಾರ್ಯಾಚರಣೆಗಳ ಪ್ರಮುಖ ಅಂಶವಾಗಿದೆ. ಯುದ್ಧಭೂಮಿಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳಲ್ಲಿ, ಉತ್ತಮ ಸಂವಹನ ಮತ್ತು ಮಾಹಿತಿ ಹಂಚಿಕೆಗಾಗಿ ವಿವಿಧ ಘಟಕಗಳನ್ನು ಸಂಪರ್ಕಿಸುವ ಸಾಮರ್ಥ್ಯವು ಅದರ ಎದುರಾಳಿಯ ಮೇಲೆ ಖಂಡಿತವಾಗಿ ಮೇಲುಗೈ ತಂದುಕೊಡುತ್ತದೆ. ಅದಕ್ಕೆಂದೇ ಸೇನೆಯಲ್ಲಿ ಭವಿಷ್ಯದ ಸಂವಹನ ತಂತ್ರಜ್ಞಾನದ ಅಳವಡಿಕೆಗೆ ಎಸ್‌ಟಿಇಎಜಿ ಘಟಕವನ್ನು ಸೃಷ್ಟಿಸಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದರು. 'ಈ ಸಂಶೋಧನೆಯ ಯಶಸಿನ ಬಳಿಕ, ಯಶಸ್ಸಿನ ಆಧಾರದಲ್ಲಿ ಸೇನೆಗೆ ಹೊಸ ಅತ್ಯಾಧಿಕ ಉಪಕರಣಗಳನ್ನು ಹಾಗೂ ತಂತ್ರಾಂಶ ಸೇರಿಸಲಾಗುವುದು. 

ಆಂಧ್ರ ಹೈವೇಯಲ್ಲೇ ಯುದ್ಧ ವಿಮಾನ ಇಳಿಸಲು ಏರ್‌ಸ್ಟ್ರಿಪ್‌: ತುರ್ತು ಅಗತ್ಯ ಇದ್ದಾಗ ಲ್ಯಾಂಡ್‌!

12 ಲಕ್ಷ ಸೈನಿಕರು ಇರುವ ಸೇನೆಯ ಬಲ ಹೆಚ್ಚಿಸಲಿದೆ' ಎಂದು ಹೇಳಿದರು, 'ಕರ್ನಲ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ, ಎಸ್‌ಟಿಇಎಜಿ ಕೆಲಸ ಮಾಡಲಿದೆ, ಸೂಕ್ತ ತಂತ್ರಜ್ಞಾನಗಳನ್ನು ಪೋಷಿಸಲು ಮತ್ತು ಅಭಿವೃದ್ಧಿಪಡಿಸಲು ಈ ಘಟಕವು ನರ್ಸರಿ ರೀತಿ ಕೆಲಸ ಮಾಡಲಿದೆ. ವೈರ್ಡ್ ಮತ್ತು ವೈರ್‌ಸ್ ಸಿಸ್ಟಮ್‌ಗಳು ಎಲೆಕ್ಟ್ರಾನಿಕ್ ಎಕ್ಸ್‌ಚೇಂಜ್‌ಗಳು, ಮೊಬೈಲ್ ಸಂವಹನಗಳು, ಸಾಫ್ಟ್‌ವೇರ್ ಡಿಫೈನ್ಸ್ ರೇಡಿಯೋಗಳು, ಎಲೆಕ್ಟ್ರಾನಿಕ್ ವಾರ್ ಫೇರ್‌ಸಿಸ್ಟಮ್‌ಗಳು, 6ಜಿ ಮತ್ತು 6ಜಿನೆಟ್‌ವಕ್ ೯ಗಳು, ಕ್ವಾಂಟಮ್ ಟೆಕ್ನಾಲಜೀಸ್, ಎಐ ಮತ್ತು ಮೆಷಿನ್ ಲರ್ನಿಂಗ್ ಗಳ ಬಗ್ಗೆ ಸಂಶೋಧನೆ ನಡೆಸಲಿದೆ' ಎಂದರು.