ಹೈದರಾಬಾದ್(ಮಾ.07): ಬೆಟ್ಟಿಂಗ್‌ ದಂಧೆಗೆ ಹಣ ಕೊಡದ್ದಕ್ಕೆ ತಂದೆಯೊಬ್ಬ ಮೂವರು ಹೆಣ್ಣು ಮಕ್ಕಳನ್ನು ನದಿಗೆಸೆದು ಕೊಂದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಕಮರೆಡ್ಡಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಕಮರೆಡ್ಡಿ ಜಿಲ್ಲೆಯಲ್ಲಿರುವ ನಾಲೆಯಲ್ಲಿ ಅಫಿಯಾ(10), ಮಹೀನ್(9),ಝೋಯಾ(7) ಅವರ ಮೃತದೇಹ ಸಿಕ್ಕಿದೆ. ಮೂವರು ಹೆಣ್ಮಕ್ಕಳನ್ನು ಕೊಲೆ ಮಾಡಿರುವ ಫಯಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯೊಂದಿಗೆ ಜಗಳ ಮಾಡಿದ ಫಯಾಜ್ ತನ್ನ ಮೂವರು ಹೆಣ್ಣು ಮಕ್ಕಳನ್ನು ನಾಲೆ ಬದಿಗೆ ಕರೆದುಕೊಂಡು ಬಂದು ನದಿಗೆ ತಳ್ಳಿ ಕೊಂದಿದ್ದಾನೆ.

ಅತ್ಯಾಚಾರ ಪ್ರಕರಣದಲ್ಲಿ ಹಿರಿಯ ನಟನ ಪುತ್ರ ಅಂದರ್!

ದಿನಗೂಲಿಗೆ ದುಡಿಯುತ್ತಿದ್ದ ಫಯಾಸ್‌ಗೆ ಹಲವು ದುಶ್ಚಟಗಳಿತ್ತು. ಇದೇ ಕಾರಂಣಕ್ಕೆ ಪತಿ ಪತ್ನಿ ನಡುವೆ ದಿನವೂ ಜಗಳವಾಗುತ್ತಿತ್ತು. ಗುರುವಾರ ರಾತ್ರಿ ಬೆಟ್ಟಿಂಗ್‌ಗಾಗಿ ಫಯಾಜ್‌ ತನ್ನ ಪತ್ನಿಯ ಬಳಿ ಹಣ ಕೇಳಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆಯೂ ಜಗಳ ನಡೆದಿತ್ತು.

ಇದರಿಂದ ಕೋಪಗೊಂಡ ಫಯಾಜ್‌ ತನ್ನ ಮೂವರು ಮಕ್ಕಳನ್ನು ಕೊಲ್ಲಲು ಪ್ಲಾನ್ ಮಾಡಿದ್ದ. ಶುಕ್ರವಾರ ಬೆಳಗ್ಗೆ ತನ್ನ ಮೂವರು ಹಣ್ಣು ಮಕ್ಕಳನ್ನು ನದಿ ಬಳಿಗೆ ಕರೆತಂದಿದ್ದ. ನಂತರ ಅವರನ್ನು ನದಿಗೆ ತಳ್ಳಿ ಹಾಕಿದ್ದಾನೆ. ಮೂವರು ಬಾಲಕಿಯರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಗ್ರಾಮಸ್ಥರು ಪೊಲೀಸರಿಗೆ ಘಟನೆ ಬಗ್ಗೆ ತಿಳಿಸಿದ್ದು, ಪೊಲೀಸರು ಬಾಲಕಿಯ ಮೃತದೇಹ ಹೊರತೆಗೆದಿದ್ದಾರೆ.