ನವದೆಹಲಿ(ಡಿ. 06)  ಹೈದರಾಬಾದ್ ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವುದು ಇಡೀ ದೇಶಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಪಶು ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಶುಕ್ರವಾರ ಎನ್ ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರ ಕ್ರಮಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ಎನ್ ಕೌಂಟರ್ ವಿರೋಧಿಸಿ ವಾಗ್ವಾದಕ್ಕಿಳಿದ ವಕೀಲ

ಪೊಲೀಸರು ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವುದು ಅತ್ಯಂತ ಕಳವಳಕಾರಿ ಎಂದು ಹೇಳಿರುವ ಆಯೋಗ ಸ್ಥಳ ಪರಿಶೀಲನೆ ಮಾಡಲು ಆಯೋಗ ಸೂಚನೆ ನೀಡಿದೆ.

ನಾಲ್ವರು ಆರೋಪಿಗಳಾದ ಶಿವು, ಆರಿಫ್, ಚೆನ್ನಕೇಶವುಲು, ನವೀನ್ ಎಂಬುವವರನ್ನು ಪೊಲೀಸರು ಶುಕ್ರವಾರ ಮುಂಜಾನೆ ಎನ್ ಕೌಂಟರ್ ಮಾಡಿದ್ದರು.

ಬದುಕುವ ಹಕ್ಕು ಮತ್ತು ಸಮಾನತೆಯ ಹಕ್ಕುಗಳ ಉಲ್ಲೇಖ ಮಾಡಿಕೊಂಡಿರುವ ಆಯೋಗ  ಈ ಘಟನೆಯಲ್ಲಿ ಕೆಲ ನಿಯಮಗಳು ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ಹೇಳಿದೆ.