ಮೈತೆಯಿ ಸಮುದಾಯದ ವಿದ್ಯಾರ್ಥಿಗಳಿಬ್ಬರ ಹತ್ಯೆ, ಉದ್ವಿಘ್ನಗೊಂಡ ಮಣಿಪುರದಲ್ಲಿ ಇಂಟರ್ನೆಟ್ ಸ್ಥಗಿತ
ಮಣಿಪುರ ವಿದ್ಯಾರ್ಥಿಗಳಿಬ್ಬರು ಜುಲೈ 6 ರಂದು ನಾಪತ್ತೆಯಾಗಿದ್ದರು. ಇದೀಗ ಈ ಇಬ್ಬರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿ ಬಿಸಾಕಿರುವ ಫೋಟೋ ವೈರಲ್ ಆಗಿದೆ. ವಿದ್ಯಾರ್ಥಿಗಳನ್ನು ಬಂಧನದಲ್ಲಿಟ್ಟು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಮಣಿಪುರ ಉದ್ವಿಘ್ನಗೊಂಡಿದೆ. ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.

ಇಂಫಾಲ(ಸೆ.26) ಇಂಟರ್ನೆಟ್ ಸೇವೆ ಪುನರ್ ಆರಂಭಗೊಂಡ ಎರಡೇ ದಿನಕ್ಕೆ ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಮತ್ತೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಕುಕಿ ಸಮುದಾಯದ ವಿರುದ್ದ ಮೈತೇಯಿ ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ. ಇದಕ್ಕೆ ಕಾರಣವವಾಗಿದ್ದು ಜುಲೈ 6 ರಂದು ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟುಕೊಂಡು ಬಳಿಕ ಹತ್ಯೆ ಮಾಡಿದ ಫೋಟೋ ವೈರಲ್ ಆಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಮಣಿಪುರ ಮತ್ತೆ ಉಗ್ರ ಸ್ವರೂಪ ಪಡೆದುಕೊಂಡಿದೆ.
17 ವರ್ಷದ ಹಿಮಾಜ್ ಲಿಂಥೋಯಿನ್‌ಗಂಬಿ ಹಾಗೂ 20 ವರ್ಷದ ಫಿಮಜ್ ಹೇಮಜಿತ್ ಮೃತ ದುರ್ದೈವಿಗಳು. ಇಬ್ಬರು ಮೈತೇಯಿ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ಇಬ್ಬರು ವಿದ್ಯಾರ್ಥಿಗಳನ್ನು ಕಾಡು ಪ್ರದೇಶದ ಹುಲ್ಲಿನ ಮೇಲೆ ಕುಳ್ಳಿರಿಸಲಾಗಿದೆ. ಈ ಫೋಟೋದಲ್ಲಿ ಕುಕಿ ಸಮುದಾಯದ ಬಂಡುಕೋರರು ಎಂದು ಹೇಳಲಾಗುತ್ತಿರುವ ಇಬ್ಬರು ಹಿಂಭಾಗದಲ್ಲಿ ನಿಂತಿದ್ದಾರೆ. ಈ ಫೋಟೋ ವೈರಲ್ ಆದ ಬೆನ್ನಲ್ಲೇ ಇದೇ ವಿದ್ಯಾರ್ಥಿಗಳ ಮೃತದೇಹ ಫೋಟೋ ವೈರಲ್ ಆಗಿದೆ.
ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿದ್ದ ಮಣಿಪುರದಲ್ಲಿ 5 ತಿಂಗಳ ಬಳಿಕ ಇಂಟರ್‌ನೆಟ್ ಸೇವೆ ಪ್ರಾರಂಭ
ಈ ಫೋಟೋದಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಹಿಂಸಾಚಾರದ ವೇಳೆ ಕಾಣೆಯಾಗಿದ್ದರು, ಇವರಿಬ್ಬರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು. ಇದೀಗ 5 ತಿಂಗಳಿಂದ ನಿಷೇಧಕ್ಕೊಳಪಟ್ಟಿದ್ದ ಮೊಬೈಲ್ ಇಂಟರ್ನೆಟ್ ಮತ್ತೆ ಸ್ಥಾಪಿತಗೊಂಡ ಬೆನ್ನಲ್ಲೇ ವಿದ್ಯಾರ್ಥಿಗಳ ಫೋಟೋ ವೈರಲ್ ಆಗಿದ್ದು, ಪ್ರತಿಭಟನೆ ಆರಂಭವಾಗಿದೆ. ನೂರಾರು ವಿದ್ಯಾರ್ಥಿಗಳು ರಸ್ತೆಗಳಿದು ಪ್ರತಿಭಟನೆ ನಡೆಸಿದ್ದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮುಖ್ಯಮಂತ್ರಿ ಬೀರೇನ್ ಸಿಂಗ್ ಅವರ ಮನೆಯತ್ತ ಮೆರವಣಿಗೆ ಹೊರಟಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಅಶ್ರುವಾಯು ಬಳಕೆ ಮಾಡಿದ್ದಾರೆ. ಈ ಸಾವಿನ ಬಗ್ಗೆ ಸಿಬಿಐ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬೀರೇನ್ ಸಿಂಗ್ ಹೇಳಿದ್ದಾರೆ.
Manipur violence: ಮಣಿಪುರದ ಸ್ಥಿತಿಗೆ ವೋಟ್ ಬ್ಯಾಂಕ್ ರಾಜಕಾರಣ ಕಾರಣ: ಸೂಲಿಬೆಲೆ
5 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿದ್ದ ಮಣಿಪುರದಲ್ಲಿ, ಮೇ 3ರಂದು ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಇದೇ ಶನಿವಾರದಿಂದ ಮರುಸ್ಥಾಪಿಸಲಾಗಿತ್ತು. ಆದರೆ ಎರಡೇ ದಿನಕ್ಕೆ ಮತ್ತೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇದೀಗ ಪರಿಸ್ಥಿತಿ ಕೈಮೀರುತ್ತಿದ್ದು, ಮತ್ತೊಂದು ಸಂಘರ್ಷಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.