Asianet Suvarna News Asianet Suvarna News

Hijab Ban Case ಬುಧವಾರದ ಒಳಗೆ ವಾದ ಮುಗಿಸಿ, ಸೆ.14ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್!

ಹಿಜಾಬ್ ನಿಷೇಧ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ ಬುಧವಾರದೊಳಗೆ ಅರ್ಜಿದಾರರ ಪರ ವಾದವನ್ನು ಮುಕ್ತಾಯ ಮಾಡ್ಬೇಕು ಅಂತಾ ಕೋರ್ಟ್‌ ಹೇಳಿದೆ. ಜೊತೆಗೆ ವಿಚಾರಣೆಯನ್ನು ಸೆ.14ಕ್ಕೆ ಮುಂದೂಡಿದೆ.
 

Hijab Ban case Supreme Court adjourned hearing petitions challenging the Karnataka High Court verdict  ckm
Author
First Published Sep 12, 2022, 7:32 PM IST

ನವದೆಹಲಿ(ಸೆ.12):   ದೇಶದಲ್ಲಿ ಭಾರಿ ಸಂಚಲನ, ವಿವಾದ, ಗಲಭೆಗೆ ಕಾರಣವಾಗಿದ್ದ ಹಿಜಾಬ್ ನಿಷೇಧ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಜ್ಜಾಗಿದೆ. ಹಿಜಾಬ್ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮುಸ್ಲಿಂ ಅರ್ಜಿದಾರರಿಗೆ ಬಧುವಾರದೊಳಗೆ(ಸೆ.14) ವಾದ ಮುಗಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಇಷ್ಟೇ ಅಲ್ಲ ಸೆ.14 ರಿಂದ ವಿಚಾರಣೆ ನಡೆಸುವುದಾಗಿ ಹೇಳಿದೆ. ಬುಧವಾರ ಬೆಳಗ್ಗೆ 11.30ಕ್ಕೆ ವಿಚಾರಣೆ ಆರಂಭಿಸುವುದಾಗಿ ಹೇಳಿದೆ.  ಸೆಪ್ಟೆಂಬರ್ 7 ರಂದು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಬಳಿಕ ಸೆಪ್ಟೆಂಬರ್ 12ಕ್ಕೆ ಮುಂದೂಡಿತ್ತು. ಇದೀಗ ಸೆಪ್ಟೆಂಬರ್  14ಕ್ಕೆ ಮುಂದೂಡಿದೆ. ಆದರೆ ಇಂದಿನ ವಿಚಾರಣೆಯಲ್ಲಿ ಕೆಲ ಮಹತ್ವದ ಅಂಶಗಳ ಕುರಿತು ಬೆಳಕು ಚೆಲ್ಲಲಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ಮಕ್ಕಳ ಶಿಕ್ಷಣ ಹಕ್ಕನ್ನು ಉಲ್ಲಂಘಿಸಿಲ್ಲ ಎಂದು ದ್ವಿದಸ್ಯ ಪೀಠದ ಜಸ್ಟೀಸ್ ಹೇಮಂತ್ ಗುಪ್ತಾ ಹಾಗೂ ಸುಧಾಂಶು ಧುಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಚ್‌(Supreme Court) ನ್ಯಾ.ಹೇಮಂತ್‌ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ 23 ಅರ್ಜಿಗಳ(Hijab Ban) ವಿಚಾರಣೆ ಒಟ್ಟಿಗೆ(Karnataka High court) ನಡೆಯುತ್ತಿದೆ. ಅರ್ಜಿದಾರರ ಪರವಾಗಿ ಈಗಾಗಲೇ ಮೂವರು ವಕೀಲರು ವಾದ ಮುಗಿಸಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಅರ್ಜಿಯ 4ನೇ ದಿನದ ವಾದ-ಪ್ರತಿವಾದವನ್ನು ನ್ಯಾಯಪೀಠ ಆಲಿಸಿತು. ಬಳಿಕ ವಿಚಾರಣೆಯನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಿತು.

Hijab Ban ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದ್ರೆ ವಿವಸ್ತ್ರ ಕೂಡ ಹಕ್ಕು, ಸುಪ್ರೀಂ ಪ್ರಶ್ನೆಗೆ ಅರ್ಜಿದಾರರು ಕಕ್ಕಾಬಿಕ್ಕಿ

ಸಿಖ್ಖರ ಪೇಟವೂ ಪ್ರಸ್ತಾಪ
ಸಿಖ್ಖರ ಪೇಟದ ವಿಚಾರವೂ ವಿಚಾರಣೆ ವೇಳೆ ಪ್ರಸ್ತಾಪವಾಯಿತು. ವಕೀಲ ಪಾಷಾ ಪೇಟದ ವಿಚಾರವನ್ನು ನ್ಯಾಯಪೀಠದ ಮುಂದಿಟ್ಟು ಗಮನಸೆಳೆದರು. ಆಗ ನ್ಯಾ.ಹೇಮಂತ್‌ ಗುಪ್ತಾ, ಸಿಖ್ಖರ ಪೇಟ ಸಿಖ್‌್ಖ ಧರ್ಮದ ಕಡ್ಡಾಯ ಐದು ಅಂಶಗಳ ಭಾಗ. ಇದನ್ನು ಈಗಾಗಲೇ ಸುಪ್ರೀಂಕೋರ್ಚ್‌ ಕೂಡ ಹೇಳಿದೆ. ಸಂವಿಧಾನ ಪೀಠವೂ ಸಿಖ್ಖರು ಪೇಟ ಮತ್ತು ಕಿರ್ಪಾನ್‌ ಧರಿಸುವುದು ಆ ಧರ್ಮದ ಅಗತ್ಯ ಭಾಗ. ಹಾಗಾಗಿ ಸಿಖ್ಖರ ಪೇಟಕ್ಕೆ ಹೋಲಿಸುವುದು ಸರಿ ಅಲ್ಲ ಎಂದರು. ಆಗ ವಾದ ಮುಂದುವರೆಸಿದ ಪಾಷ, ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದು ಕೂಡ ಇದೇ ಆಗಿದೆ ಎಂದರು. ಆಗ ನ್ಯಾ.ಗುಪ್ತಾ ದಯವಿಟ್ಟು ಸಿಖ್ಖರಿಗೆ ಹೋಲಿಕೆ ಮಾಡಬೇಡಿ, ಸಿಖ್‌್ಖ ಧರ್ಮ ಭಾರತೀಯ ಸಂಸ್ಕೃತಿಯೊಂದಿಗೆ ಬೇರೂರಿದೆ ಎಂದರು. ಆಗ ವಕೀಲ ಪಾಷ, ಇಸ್ಲಾಂ ಧರ್ಮವೂ 1400 ವರ್ಷಗಳಿಂದ ಇದೆ. ಹಿಜಾಬ್‌ ಕೂಡ ಪ್ರಸ್ತುತವಾಗಿದೆ ಎಂದರು. ಬಳಿಕ ಸೆ.12ಕ್ಕೆ ವಿಚಾರಣೆಯನ್ನು ಸುಪ್ರೀಂ ಕೋರ್ಚ್‌ ಮುಂದೂಡಿತು.

Hijab Row: ಮೂಗುತಿ ಧಾರ್ಮಿಕ ಆಚರಣೆಯಲ್ಲ, ಮಂಗಳಸೂತ್ರ ಧಾರ್ಮಿಕ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

ಶಾಸಕರೇ ಇಲ್ಲಿ ಅಧ್ಯಕ್ಷರು: ಸಮವಸ್ತ್ರವನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರ ಸ್ಥಳೀಯ ಶಾಲಾ ಆಡಳಿತ ಮಂಡಳಿಗೆ ನೀಡಿದೆ. ಆದರೆ ಆಡಳಿತ ಮಂಡಳಿಯಲ್ಲಿ ಶಾಸಕರೇ ಇದ್ದಾರೆ. ಅವರೇ ಅಧ್ಯಕ್ಷರು ಎಂದು ಕಾಮತ್‌ ಹೇಳಿದರು. ಆಗ ಆಡಳಿತ ಮಂಡಳಿಯಲ್ಲಿ ಶಾಸಕರು ಅಥವಾ ಜನಪ್ರತಿನಿಧಿಗಳು ಇರುವುದು ನಿಮಗೆ ಇಷ್ಟವಿಲ್ಲವೇ ಎಂದು ನ್ಯಾ.ಹೇಮಂತ ಗುಪ್ತಾ ಪ್ರಶ್ನಿಸಿದರು. ಶಾಸಕರಿಗೆ ರಾಜ್ಯ ಸರ್ಕಾರದ ಅಧೀನ ಅಧಿಕಾರ ಇಲ್ಲ ಎಂದು ಈ ಹಿಂದೆಯೇ ನ್ಯಾಯಪೀಠ ಹೇಳಿದೆ. ಈ ಶಾಸಕರದ್ದು ಯಾವುದು ನೈತಿಕತೆ ಎನ್ನುವುದು ನಿರ್ಧರಿಸಬಹುದಾಗಿದೆ. ಇಂಥ ಕಾನೂನುಬಾಹಿರ ನಿರ್ಧಾರಗಳ ಅಗತ್ಯತೆಯನ್ನು ನ್ಯಾಯಪೀಠ ಮನಗಾಣಬೇಕು ಎಂದು ಕಾಮತ್‌ ವಾದಿಸಿದರು.

Follow Us:
Download App:
  • android
  • ios