ಮುಂಬೈ(ಸೆ.29): ಉತ್ತರ ಪ್ರದೇಶದ ಹಾರ್ಥ್ಸರ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದ್ದಾಳೆ. ದೆಹಲಿಯ ಸಫ್ದರ್‌ಗಂಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಲಿತ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆ ಬೆನ್ನಲ್ಲೇ ವಿಪಕ್ಷಗಳು ಮೋದಿ ಹಾಗೂ ಯೋಗಿ ಸರ್ಕಾರದ ವಿರುದ್ಧ ಕಿಡಿ ಕಾರಲಾರಂಭಿಸಿವೆ. ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡಾ ಪ್ರಕರಣ ಸಂಬಂಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಗುಡುಗಿದ್ದಾರೆ,

ಟ್ವೀಟ್ ಮಾಡಿರುವ ಪ್ರಿಯಾಂಕಾ ಚತುರ್ವೇದಿ ಉತ್ತರ ಪ್ರದೇಶದ ಸಂಸದೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆಯ ಮೌನ ಚಿಂತೆಗೀಡು ಮಾಡಿದೆ. ಅವರಿಗೆ ಪ್ರಕರಣದ ಮಾಹಿತಿ ಲಭ್ಯವಾಗಿದೆ ಹಾಗೂ ಕಟ್ಟುನಿಟ್ಟಿನ ತನಿಖೆ ನಡೆಸಲು ಆದೇಶಿಸಿದ್ದಾರೆಂದು ಭಾವಿಸುತ್ತೇನೆ ಎಂದಿದ್ದಾರೆ.

उत्तर प्रदेश की सांसद, जो महिला और बाल विकास कल्याण मंत्री भी हैं, उनकी चुप्पी चिंताजनक है।
उम्मीद है उनको ख़बर की जानकारी मिल गयी होगी और उन्होंने सख़्त कार्यवाही का आदेश भी issue कर दीया होगा। https://t.co/GBtU2Uf3QR

— Priyanka Chaturvedi (@priyankac19) September 29, 2020

ನೋವುಭರಿತ ಹಾಗೂ ಕ್ರೌರ್ಯದ ಎಲ್ಲಾ ಮಿತಿ ಮೀರಿದ ಈ ಘಟನೆ ದೌರ್ಭಾಗ್ಯಪೂರ್ಣವಾದುದು. ಪ್ರಕರಣದ ಎಲ್ಲಾ ಆರೋಪಿಗಳಿಗೂ ಕಠಿಣ ಶಿಕ್ಷೆಯಾಗಲಿ. ಇದ ಸರ್ಕಾರಕ್ಕೆ ನಾನು ಮಾಡುವ ಮನವಿ ಎಂದಿದ್ದಾರೆ. ಪ್ರಿಯಾಂಕಾ ಚತುರ್ವೇದಿ ಹಾಗೂ ಸ್ಮೃತಿ ಇರಾನಿ ನಡುವೆ ಈ ಹಿಂದೆಯೂ ಅನೇಕ ಬಾರಿ ವಾಕ್ಸಮರ ನಡೆದಿದೆ.