Asianet Suvarna News Asianet Suvarna News

ಸಂಸತ್ತಿನಲ್ಲಿ ಜ.19, 1990ರ ಉಲ್ಲೇಖ: ಮೋದಿಗೆ ಜೈ ಎಂದ ಕಾಶ್ಮೀರಿ ಪಂಡಿತರು!

ಸಂಸತ್ತಿನಲ್ಲಿ ಜ.19, 1990ನ್ನು ಉಲ್ಲೇಖಿಸಿದ್ದ ಪ್ರಧಾನಿ ಮೋದಿ| ಪ್ರಧಾನಿ ಮೋದಿ ಅವರ ಲೋಕಸಭೆ ಭಾಷಣಕ್ಕೆ ಕಾಶ್ಮೀರಿ ಪಂಡಿತರ ಸ್ವಾಗತ| ಕಣಿವೆಯಿಂದ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಓಡಿಸಿದ್ದ ದಿನ| ಕಾಶ್ಮೀರಿ ಪಂಡಿತರ ದು:ಖಕ್ಕೆ ಧ್ವನಿಯಾಗಿದ್ದ ಪ್ರಧಾನಿ ಮೋದಿ| ಮರಳಿ ತಾಯ್ನೆಲ ಸೇರುವ ಭರವಸೆ ಮೂಡಿದೆ ಎಂದ ಕಾಶ್ಮೀರಿ ಪಂಡಿತರು| ಮೋದಿ ಭಾಷಣ ಸ್ವಾಗತಿಸಿದ ಅಮೆರಿಕದಲ್ಲಿರುವ ಕಾಶ್ಮೀರಿ ಪಂಡಿತರು| 

Group Of Kashmiri Pandits In US Welcomes PM Modi Remark In Parliament
Author
Bengaluru, First Published Feb 13, 2020, 7:43 PM IST

ವಾಷಿಂಗ್ಟನ್(ಫೆ.13): ಬಜೆಟ್ ಅಧಿವೇಶನದ ವೇಳೆ ಕಾಶ್ಮೀರಿ ಪಂಡಿತರ ಕುರಿತು ಲೋಕಸಭೆಯಲ್ಲಿ ಉಲ್ಲೇಖಿಸಿದ್ದ ಪ್ರಧಾನಿ ಮೋದಿ ಅವರನ್ನು ಅಮೆರಿಕದಲ್ಲಿರುವ ಕಾಶ್ಮೀರಿ ಪಂಡಿತರ ಸಂಘಟನೆ ಸ್ವಾಗತಿಸಿದೆ.

ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತು ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಜ.19, 1990ರ ಮಧ್ಯರಾತ್ರಿ ಕಾಶ್ಮೀರದ ಅಸ್ತಿತ್ವವನ್ನೇ ಕಸಿದುಕೊಳ್ಳಲಾಗಿತ್ತು ಎಂದು ಹೇಳಿದ್ದರು.

ಜ.19, 1990ರಂದು ಏಕಾಏಕಿ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಕಣಿವೆಯಿಂದ ಹೊರ ಹಾಕಲಾಗಿತ್ತು. ಈ ಘಟನೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದ ಪ್ರಧಾನಿ ಮೋದಿ, ಅಂದು ಕಾಶ್ಮೀರಿ ಪಂಡಿತರ ದು:ಖ ಕೇಳದವರು ಇದೀಗ ವಿಶೇಷ ಸ್ಥಾನಮಾನ ರದ್ದತಿ ಕುರಿತು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಪ್ರಧಾನಿ ಅವರ ಲೋಕಸಭೆಯ ಭಾಷಣವನ್ನು ಸ್ವಾಗತಿಸಿರುವ ಅಮೆರಿಕದಲ್ಲಿರುವ ಕಾಶ್ಮೀರಿ ಪಂಡಿತರು, ನಾವು ಮರಳಿ  ನಮ್ಮ ತಾಯ್ನೆಲವನ್ನು ಕೂಡಿಕೊಳ್ಳುವ ಭರವಸೆ ಮೂಡಿದೆ ಎಂದು ಹೇಳಿದ್ದಾರೆ.

ಮೋದಿ ಅವರ ಭಾಷಣದಿಂದ ನಾವು ಮತ್ತೆ ನಮ್ಮ ತಾಯ್ನೆಲ ಕಾಣುವ ಭರವಸೆ ಮೂಡಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಲಿದೆ ಎಂದು ಕಾಶ್ಮೀರಿ ಪಂಡಿತರು ಭರವಸೆ ವ್ಯಕ್ತಪಡಿಸಿದ್ದಾರೆ.

ಕೈಯಲ್ಲಿದೆ 370ನೆ ವಿಧಿ ರದ್ದತಿಯ ಲಾಠಿ: ಕಾಶ್ಮೀರಿ ಪಂಡಿತರಿಂದ ಮೋದಿ ಭೇಟಿ!

ಜ.19 ನ್ನು ವಿಶ್ವದಾದ್ಯಂತ ಇರುವ ಕಾಶ್ಮೀರಿ ಪಂಡಿತರು ‘ನಿರ್ಗಮನ ದಿನ’ವನ್ನಾಗಿ ಆಚರಿಸುತ್ತಾರೆ. 

Follow Us:
Download App:
  • android
  • ios