ನೋಯ್ಡಾ[ನ.17]: ಮಹಿಳೆಯೊಬ್ಬಳನ್ನು ಅತ್ಯಾಚಾರದಿಂದ ರಕ್ಷಿಸಿದ ಗುಂಪೊಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಕೆಲಸ ಕಾಯಂ ಆಮಿಷ: ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ

21 ವರ್ಷದ ಮಹಿಳೆ ಕೆಲಸ ಹುಡುಕುವ ಸಲುವಾಗಿ ಸೋದರನ ಸ್ನೇಹಿತನ ಭೇಟಿಗೆಂದು ಪಾರ್ಕ್ಗೆ ಬಂದಿದ್ದಳು. ಆದರೆ, ಆತ ಅಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದನ್ನು ನೋಡಿದ ಆರು ಜನರ ಗುಂಪು ಮಹಿಳೆಯನ್ನು ಅತ್ಯಾಚಾರದಿಂದ ಪಾರು ಮಾಡಿತ್ತು. ಆದರೆ, ಆ ಬಳಿಕ ಮಹಿಳೆಯ ಮೇಲೆ ಅದೇ ಗುಂಪಿನ ಸದಸ್ಯರು ಅತ್ಯಾಚಾರವೆಸಗಿದ್ದಾರೆ.

ವೋಡ್ಕಾ ಕುಡಿಸಿ ಕಾರಿನಲ್ಲೇ ಅತ್ಯಾಚಾರ ಮಾಡಿದ ವೈದ್ಯ..!

ಈ ಸಂಬಂಧ ಮಹಿಳೆ ದೂರು ದಾಖಲಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.