ಸದ್ಯ ಭಾರತದಲ್ಲಿ ನಡೆದ ಅತ್ಯಾಚಾರ ಕುರಿತ ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿವೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ.

ಇದೇ ವೇಳೆ ಸೌದಿ ಅರೇಬಿಯಾ ಸರ್ಕಾರವು ಭಾರತಕ್ಕೆ ಓಡಾಡುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದು ಮಾಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್‌ ಆಗಿರುವ ಸಂದೇಶ ಹೀಗಿದೆ; ‘ ಸೌದಿ ಅರೇಬಿಯಾ ಪ್ರಜೆಗಳ ಪ್ರಯಾಣಕ್ಕೆ ಭಾರತ ಸುರಕ್ಷಿತವಲ್ಲ ಎಂದು ಸೌದಿ ರಾಯಭಾರ ಕಚೇರಿ ಘೋಷಿಸಿದೆ.

Fact Check: ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಕೀಲರು ಟೋಲ್‌ ಕಟ್ಟಬೇಕಿಲ್ಲ!

ಜೊತೆಗೆ ಸದ್ಯ ಭಾರತದಲ್ಲಿ ಅಶಾಂತಿಯ ವಾತಾವರಣ ಇರುವುದರಿಂದ ಸೌದಿ ಅರೇಬಿಯಾದಿಂದ ಭಾರತಕ್ಕೆ ಸಂಚರಿಸುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಸೌದಿಯಿಂದ ಹೈದರಾಬಾದ್‌, ಮುಂಬೈ, ದೆಹಲಿ, ಕೊಚ್ಚಿಗೆ ಸಂಚರಿಸುತ್ತಿದ್ದ ಎಲ್ಲಾ ವಿಮಾನಗಳನ್ನು ರದ್ದು ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸೌದಿ ಡಾಟ್‌ ಕಾಮ್‌ ವೆಬ್‌ಸೈಟ್‌ಗೆ ಭೇಟಿ ನೀಡಿ’ ಎಂದಿದೆ. ಇದೀಗ ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ವೈರಲ್‌ ಆಗುತ್ತಿದೆ.

Fact Check: ಮೋದಿಗೆ ಕೆಟ್ಟಹೆಸರು ತರಲು ಈರುಳ್ಳಿ ಟ್ರಕ್‌ ತಡೆದ್ರಾ ಮಮತಾ?

ಈ ಸುದ್ದಿ ನಿಜವೇ ಎಂದು ಕ್ವಿಂಟ್‌ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಸೌದಿ ಸರ್ಕಾರ ಭಾರತಕ್ಕೆ ಸಂಚರಿಸುವ ಯಾವುದೇ ವಿಮಾನಗಳ ಹಾರಾಟವನ್ನೂ ರದ್ದು ಮಾಡಿಲ್ಲ ಎಂದು ತಿಳಿದುಬಂದಿದೆ. ಸೌದಿ ಅರೇಬಿಯಾ ಏರ್‌ಲೈನ್ಸ್‌ಗಳು ಈ ಹಿಂದಿನಂತೆಯೇ ಓಡಾಡುತ್ತಿವೆ. ಕ್ವಿಂಟ್‌ ಟ್ವೀಟರ್‌ ಮೂಲಕ ಸೌದಿ ಏರ್‌ಲೈನ್ಸ್‌ ಸಂಪರ್ಕ ಸಾಧಿಸಿ ಸ್ಪಷ್ಟನೆಯನ್ನೂ ಪಡೆದಿದ್ದು ಅದು, ‘ವೈರಲ್‌ ಆಗಿರುವ ಸಂದೇಶ ಸುಳ್ಳು. ಸೌದಿ ಏರ್‌ಲೈನ್ಸ್‌ ಇದನ್ನು ಬಿಡುಗಡೆ ಮಾಡಿಲ್ಲ’ ಎಂದಿದೆ.

- ವೈರಲ್ ಚೆಕ್