ಫೆ.24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಜೊತೆಗೆ ಭಾರತಕ್ಕೆ ತಮ್ಮ ಚೊಚ್ಚಲ ಭೇಟಿ ನೀಡುತ್ತಿದ್ದಾರೆ. ಈ ವೇಳೆ ವ ಜಗತ್ತಿನ ಅತಿ ದೊಡ್ಡ ಮೊಟೆರಾ ಸ್ಟೇಡಿಯಂ ಉದ್ಘಾಟಿಸುವುದು ಮಾತ್ರವಲ್ಲದೆ ಉತ್ತರಪ್ರದೇಶದ ಆಗ್ರಾ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ.

ಶಾಹೀನ್‌ಬಾಗ್ ಹಿಂಭಾಗದಲ್ಲಿ ಕಾಂಡೋಮ್ ರಾಶಿ

ಈ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಈ ನಡುವೆ ಸತ್ತು ಬಿದ್ದಿರುವ ಬೀದಿ ನಾಯಿಗಳ ಫೋಟೋವೊಂದನ್ನು ಪೋಸ್ಟ್‌ ಮಾಡಿ, ಗುಜರಾತ್‌ ಸರ್ಕಾರ ಟ್ರಂಪ್‌ ಆಗಮನ ಹಿನ್ನೆಲೆಯಲ್ಲಿ ಬೀದಿ ನಾಯಿಗಳನ್ನು ಕೊಂದುಹಾಕಿದೆ ಎಂದು ಹೇಳಲಾಗಿದೆ.

ಈ ಫೋಟೋ ಹಿಂದಿನ ಸತ್ಯಾಸತ್ಯ ಏನು, ನಿಜಕ್ಕೂ ಬೀದಿ ನಾಯಿಗಳನ್ನು ಕೊಲ್ಲಲಾಗಿದೆಯೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ವೈರಲ್‌ ಇಮೇಜ್‌ ಒಂದು ವರ್ಷ ಹಳೆಯದ್ದು ಎಂಬುದು ಖಚಿತವಾಗಿದೆ.

Fact Check: 300 ವರ್ಷದ ಹಿಂದೆ ಧ್ಯಾನಸ್ಥರಾದ ಯೋಗಿ ಜೀವಂತ ಪತ್ತೆ!

ಅಲ್ಲದೆ ಇದು ಗುಜರಾತಿನದ್ದಲ್ಲ, 2019ರಲ್ಲಿ ತೆಲಂಗಾಣ ಮುನ್ಸಿಪಾಲಿಟಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತು ಹೋಗಿತ್ತು. ಅಧಿಕಾರಿಗಳು ಬೀದಿನಾಯಿಗಳ ಸಂತತಿ ಮುಂದುವರೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೊಲ್ಲಲು ಆದೇಶಿಸಿದ್ದರು.

ಇನ್ನೊಂದು ಪ್ರಮುಖ ವಿಷಯ ಎಂದರೆ, ಟ್ರಂಪ್‌ ಭೇಟಿ ಹಿನ್ನೆಲೆಯಲ್ಲಿ ಅಹಮದಾಬಾದ್‌ ಏರ್ಪೋರ್ಟ್‌ನಿಂದ ಟ್ರಂಪ್‌ ಆಗಮದ ದಾರಿಯಲ್ಲಿ ಬೀದಿ ನಾಯಿಗಳು ಅಥವಾ ಸಾಕು ಪ್ರಾಣಿಗಳು ಅಡ್ಡ ಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದಕ್ಕಾಗಿ ಬೀದಿನಾಯಿಗಳನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಲಾಗಿದೆಯೇ ಹೊರತು ಕೊಂದಿಲ್ಲ.

ಕಾಂಡೋಮನ್ನು ರಬ್ಬರ್ ಬ್ಯಾಂಡಾಗಿ ಬಳಸಿದಳಾ ಜೆಎನ್‌ಯುವ ವಿದ್ಯಾರ್ಥಿನಿ?

- ವೈರಲ್ ಚೆಕ್