ಅಹಮದಾಬಾದ್[ಫೆ.24]: ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಡೇಡಿಯಂ ಉದ್ಘಾಟಿಸಿ ಮಾತನಾಡಿದ ಟ್ರಂಪ್ ಭಾರತ ಅಮೆರಿಕಾದ ನಿಜವಾದ ಗೆಳೆಯ ಎಂದಿದ್ದಾರೆ. ಇನ್ನು ಇದಕ್ಕೂ ಮುನ್ನ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್ ಅಲ್ಲಿ ಕೆಲ ಸಮಯ ಕಳೆದಿದ್ದಾರೆ.

"

ಹೀಗಿರುವಾಗ ವಿಸಿಟರ್ಸ್ ಪುಸ್ತಕದಲ್ಲಿ ಟ್ರಂಪ್ ಬರೆದಿರುವ ಸಂದೇಶ ಭಾರೀ ವೈರಲ್ ಆಗಿದೆ. ಕೆಲವರು ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್, ಗಾಂಧೀಜಿಯನ್ನೇ ಮರೆತಿದ್ದಾರೆ ಎಂದರೆ, ಇನ್ನು ಕೆಲವರು ಅವರು ಬರೆದ ಸಂದೇಶ ಹಾಗೂ 5 ವರ್ಷದ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಮೆರಿಕಾ ಮಾಜಿ ಅಧ್ಯಕ್ಷ ಒಬಾಮಾ ಬರೆದಿದ್ದ ಸಂದೇಶದೊಂದಿಗೆ ಹೋಲಿಸಿದ್ದಾರೆ.

ಹೌದು ಇಂದು ಸೋಮವಾರ ಮೊಟೆರೋ ಸ್ಟೇಡಿಯಂ ಉದ್ಘಾಟನೆಗೂ ಮುನ್ನ ಗಾಂಧೀಜಿಯವರ ಸಬರಮತಿ ಆಶ್ರಮಕ್ಕೆ ತನ್ನ ಪತ್ನಿ ಮೆಲೇನಿಯಾ ಜೊತೆ ಭೇಟಿ ನೀಡಿದ ಟ್ರಂಪ್ ಗಾಂಧೀಜಿ ಬಳಸುತ್ತಿದ್ದ ಚರಕ ಮೊದಲಾದವನ್ನು ವೀಕ್ಷಿಸಿದ್ದಾರೆ. ಇದೇ ವೇಳೆ ಪಿಎಂ ಮೋದಿ ಅವರಿಗೆ ಮೂರು ಕೋತಿಗಳ ಕತೆಯನ್ನೂ ವಿವರಿಸಿದ್ದಾರೆ. ಆದರೆ ಇಲ್ಲಿಂದ ಹೊರಡುವ ವೇಳೆ ವಿಸಿಟರ್ಸ್ ಪುಸ್ತಕದಲ್ಲಿ ತಮ್ಮ ಅನುಭವ ಬರೆದುಕೊಂಡ ಟ್ರಂಪ್ 'ನನ್ನ ಆತ್ಮೀಯ ಗೆಳೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ, ಈ ಭೇಟಿ ಆಯೋಜಿಸಿದ್ದಕ್ಕೆ ಧನ್ಯವಾದಗಳು' ಎಂದು ಬರೆದು ಸಹಿ ಮಾಡಿದ್ದಾರೆ. 

ಆದರೆ ಅವರ ಈ ಸಂದೇಶದಲ್ಲಿ ಎಲ್ಲೂ ಗಾಂಧೀಜಿ ಕುರಿತು ಉಲ್ಲೇಖಿಸದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಿರುವಾಗ ಅನೇಕರು ಐದು ವರ್ಷದ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಸಂದೇಶವನ್ನೂ ನೆನಪಿಕೊಂಡು ಹೋಲಿಕೆ ಮಾಡಿದ್ದಾರೆ. ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್ ಮೋದಿಯನ್ನಷ್ಟೇ ನೆನಪಿಸಿಕೊಂಡಿದ್ದಾರೆ. ಆದರೆ ಒಬಾಮಾ ಗಾಂಧಿಯನ್ನು ಇಡೀ ವಿಶ್ವದ ಹೀರೋ ಎಂದು ಬಣ್ಣಿಸಿದ್ದರು ಎಂದಿದ್ದಾರೆ.

ಹೌದು ಅಂದು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ಒಬಾಮಾ 'ಗಾಂಧಿಯವರ ಜೀವನಕ್ಕೆ ಸಂಬಂಧಿಸಿದ ಒಡಂಬಡಿಕೆ ಜನೋಡುವ ಅವಕಾಶ ನನಗೆ ಸಿಕ್ಕಿದೆ. ಇದರಿಂದ ನನ್ನಲ್ಲಿ ಭರವಸೆ ಮತ್ತು ಸ್ಫೂರ್ತಿಯಿಂದ ತುಂಬಿದ್ದೇನೆ. ಅವರು ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಹೀರೋ' ಎಂದು ಬಣ್ಣಿಸಿದ್ದರು.