Asianet Suvarna News Asianet Suvarna News

ನನಗೆ ಚಪ್ಪಾಳೆ ಬೇಡ ಆದ್ರೆ...: ಈ ಬಾರಿ ಪಿಎಂ ಮೋದಿ ಕೇಳಿದ್ದೇನು?

ವಿವಾದಕ್ಕೆ ಎಡೆಮಾಡುವ ಕಿಡಿಗೇಡಿತನ| ನಿಜಕ್ಕೂ ನನಗೆ ಗೌರವ ಸಲ್ಲಿಸಬೇಕು ಎಂದಿದ್ದರೆ ಕೊರೋನಾ ವೈರಸ್‌ ತೊಲಗುವವರೆಗಾದರೂ ಬಡ ಕುಟುಂಬಗಳ ಜವಾಬ್ದಾರಿ ತೆಗೆದುಕೊಳ್ಳಿ| ಮೋದಿ ಪರ ಚಪ್ಪಾಳೆ ಅಭಿಯಾನಕ್ಕೆ ಸ್ವತಃ ಪ್ರಧಾನಿ ಅಸಮ್ಮತಿ

Do not need standing ovation honour me by feeding poor during says PM Modi appeals to India
Author
Bangalore, First Published Apr 9, 2020, 10:33 AM IST

ನವದೆಹಲಿ(ಏ.09): ಏಪ್ರಿಲ್‌ 12ರ ಭಾನುವಾರ ಸಂಜೆ 5 ಗಂಟೆಗೆ ದೇಶದ ಪ್ರಜೆಗಳು ತಮ್ಮ ಮನೆಯ ಬಾಲ್ಕನಿಗೆ ಬಂದು 5 ನಿಮಿಷಗಳ ಕಾಲ ಎದ್ದು ನಿಂತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಪ್ಪಾಳೆ ತಟ್ಟಿಗೌರವ ಸಮರ್ಪಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ಇದು ವಿವಾದಕ್ಕೆ ಎಡೆಮಾಡುವ ಕಿಡಿಗೇಡಿತನವೆಂದು ತೋರುತ್ತಿದೆ ಎಂದು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ನಿಜಕ್ಕೂ ನನಗೆ ಗೌರವ ಸಲ್ಲಿಸಬೇಕು ಎಂದಿದ್ದರೆ ಕೊರೋನಾ ವೈರಸ್‌ ತೊಲಗುವವರೆಗಾದರೂ ಬಡ ಕುಟುಂಬಗಳ ಜವಾಬ್ದಾರಿ ತೆಗೆದುಕೊಳ್ಳಿ. ಅದು ನನಗೆ ನೀವು ಸಲ್ಲಿಸುವ ದೊಡ್ಡ ಗೌರವ’ ಎಂದು ಮನವಿ ಮಾಡಿಕೊಂಡಿದ್ದಾರೆ.

"

Follow Us:
Download App:
  • android
  • ios