ತೆಲಂಗಾಣ [ಮಾ.07]: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಎನ್ ಕೌಂಟರ್ ಆಗಿದ್ದ ಓರ್ವನ ಪತ್ನಿಗೆ ಈಗ ಹೆಣ್ಣು ಮಗು ಜನಿಸಿದೆ. 

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಅತ್ಯಾಚಾರ, ಕೊಲೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದರು. 

ಈ ವೇಳೆ 6 ತಿಂಗಳ ಗರ್ಭಿಣಿಯಾಗಿದ್ದ ಆರೋಪಿ ಚೆನ್ನಕೇಶವುಲು ಎಂಬಾತನ 14 ವರ್ಷದ ಪ್ರಾಪ್ತ ಪತ್ನಿ ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ.

ಹೈದ್ರಾಬಾದ್‌ ಕೀಚಕರಿಂದ ರಾಜ್ಯದಲ್ಲೂ 6 ರೇಪ್‌...

ಡಿಸೆಂಬರ್  6 ರಂದು ಎನ್ಕೌಂಟರ್ ನಡೆದಿದ್ದು,  ಈ ವೇಳೆ ಹತನಾದ ಚೆನ್ನಕೇಶವುಲು ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಹೈದರಾಬಾದ್ ಅತ್ಯಾಚಾರಿಗಳಿಗೆ ಗುಂಡಿಟ್ಟ ಸಿಂಗಂ, ಕನ್ನಡಿಗ ಸಜ್ಜನರ್!...

ತಾಯಿ ಮಗು ಆರೋಗ್ಯವಾಗಿದ್ದು, ಈ ಸಂಬಂಧ ಬಾಲಿವುಡ್ ನಿರ್ಮಾಪಕ ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡಿ ಸಹಾಯ ಕೋರಿದ್ದಾರೆ. 

ಚೆನ್ನಕೇಶವುಲು ಪತ್ನಿ ಮಗು ಆರೋಗ್ಯವಾಗಿದ್ದು, ಅವರಿಗೆ ಯಾವುದೇ ರೀತಿಯ ಧನಸಹಾಯ ಮಾಡುವವರು ಮಾಡಿ ಎಂದು ಬ್ಯಾಂಕ್ ಅಕೌಂಟ್ ನಂಬರ್ ಶೇರ್ ಮಾಡಿದ್ದಾರೆ.