Asianet Suvarna News Asianet Suvarna News

ವಿದೇಶಿ ನಿಯೋಗ ಬರುವುದು ಮೂರನೇ ಬಾರಿ: ದಾಲ್ ಸರೋವರದಲ್ಲಿ ಸವಾರಿ!

ಕಣಿವೆಗೆ ಬಂದಿಳಿದ ಮೂರನೇ ವಿದೇಶಿ ನಿಯೋಗ| ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಅವಲೋಕನ| ಇಟಲಿ, ಜರ್ಮಿನಿ, ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳ ಸದಸ್ಯರ ನಿಯೋಗ| ಸ್ಥಳೀಯ ವ್ಯಾಪಾರಸ್ಥರು ಹಾಗೂ ರಾಜಕೀಯ ನಾಯಕರೊಂದಿಗೆ ಸಭೆ| ಶ್ರೀನಗರದ ಪ್ರಸಿದ್ಧ ದಾಲ್ ಸರೋವರದಲ್ಲಿ ದೋಣಿ ವಿಹಾರ|

Diplomats from 25 Nations Visits Jammu and Kashmir
Author
Bengaluru, First Published Feb 12, 2020, 7:26 PM IST

ಶ್ರೀನಗರ(ಫೆ.12): ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಅವಲೋಕನಕ್ಕಾಗಿ ಮೂರನೇ ವಿದೇಶಿ ನಿಯೋಗ ಕಣಿವೆಗೆ ಭೇಟಿ ನೀಡಿದೆ.

ಈಗಾಗಲೇ ಎರಡು ವಿದೇಶಿ ನಿಯೋಗ ಕಣಿವೆಯ ಪರಿಸ್ಥಿತಿ ಅವಲೋಕಿಸಿದ್ದು, ಇದೀಗ 25 ದೇಶಗಳ ಮೂರನೇ ನಿಯೋಗ ಕಣಿವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ಬಾರಿಯ ನಿಯೋಗದಲ್ಲಿ ಇಟಲಿ, ಜರ್ಮಿನಿ, ಕೆನಡಾ, ಫ್ರಾನ್ಸ್, ಪೊಲ್ಯಾಂಡ್, ನ್ಯೂಜಿಲ್ಯಾಂಡ್, ಮೆಕ್ಸಿಕೋ, ಅಫ್ಘಾನಿಸ್ತಾನ, ಆಸ್ಟ್ರಿಯಾ ಹಾಗೂ ಉಜ್ಬೇಕಿಸ್ತಾನದ ಸದಸ್ಯರು ಇರುವುದು ವಿಶೇಷ.

ಕಾಶ್ಮೀರಕ್ಕೆ 15 ದೇಶಗಳ ಅಂತಾರಾಷ್ಟ್ರೀಯ ನಿಯೋಗ: ಜನರ ಪ್ರತಿಕ್ರಿಯೆಗೆ ಸಂತಸ!

ಶ್ರೀನಗರಕ್ಕೆ ಬಂದಿಳಿದ ನಿಯೋಗ ಸ್ಥಳೀಯ ವ್ಯಾಪಾರಸ್ಥರು ಹಾಗೂ ರಾಜಕೀಯ ನಾಯಕರೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ವಿಶ್ಲೇಷಿಸಿದರು. ಈ ವೇಳೆ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯ ಪರಿಸ್ಥಿತಿ ಸುಧಾರಿಸಿದೆ ಎಂದೇ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ಕಣಿವೆಗೆ ಬಂದ ಮೂರನೇ ವಿದೇಶಿ ನಿಯೋಗ ಶ್ರೀನಗರದ ಪ್ರಸಿದ್ಧ ದಾಲ್ ಸರೋವರದಲ್ಲಿ ದೋಣಿ ವಿಹಾರ ನಡೆಸಿದ್ದು ವಿಶೇಷವಾಗಿತ್ತು.

ಕಣಿವೆ ನೋಡುವುದೇ ಸುಯೋಗ: ಕಣಿವೆಗೆ ಭೇಟಿ ನೀಡಿದ ಯೂರೋಪಿಯನ್ ನಿಯೋಗ!

Follow Us:
Download App:
  • android
  • ios