ನವದೆಹಲಿ(ಡಿ.18): ಪೌರತ್ವ ತಿದ್ದುಪಡಿ ಕಾಯ್ದೆ ಬೆನ್ನಲ್ಲೇ, ದೇಶಾದ್ಯಂತ NRC ಜಾರಿಯಾಗುವ ನಿರೀಕ್ಷೆ ಇದ್ದು, ಬಾಲಿವುಡ್ ನಟಿ ದಿಯಾ ಮಿರ್ಜಾ ಈ ಕುರಿತು ತಮ್ಮ ಅಭಿಪ್ರಾಯ ಹೊರಗೆಡವಿದ್ದಾರೆ.

CAA ಜಾರಿಗೆ ಭಾರತೀಯ ಮುಸ್ಲಿಮರು ಹೆದರಬೇಕಿಲ್ಲ: ಅಹ್ಮದ್ ಬುಖಾರಿ!

ನನ್ನ ತಾಯಿ ಹಿಂದುವಾಗಿದ್ದು ನನ್ನ ಹೆತ್ತ ತಂದೆ ಕ್ರಿಶ್ಚಿಯನ್. ನನ್ನ ಸಾಕು ತಂದೆ ಓರ್ವ ಮುಸ್ಲಿಂ ಆಗಿದ್ದು, ನನ್ನ ಎಲ್ಲ ದಾಖಲಾತಿಗಳಲ್ಲಿ ಧರ್ಮದ ಕಾಲಂನ್ನು ಖಾಲಿ ಬಿಡಲಾಗಿದೆ ಎಂದು ದಿಯಾ ಮಿರ್ಜಾ ಹೇಳಿದ್ದಾರೆ.

ನಾನು ಭಾರತೀಯಳೆಂದು ಸಾಬೀತುಪಡಿಸಲು ಧರ್ಮ ಎಂದೂ ಪರಿಗಣನೆಗೆ ಬಂದಿಲ್ಲ. ಮುಂದೆಯೂ ಬರದಿರಲಿ ಎಂಬುದು ನನ್ನ ಆಶಯ ಎಂದು ದಿಯಾ ಮಿರ್ಜಾ ಟ್ವಿಟ್ ಮಾಡಿದ್ದಾರೆ.

‘ಕೈ’ಗೆ ಮೋದಿ ಸವಾಲ್‌!: ಎರಡು ಪಂಥಾಹ್ವಾನ ನೀಡಿದ ಪ್ರಧಾನಿ!

ಬಾಲಿವುಡ್ ನಟಿಯಾಗಿರುವ ದಿಯಾ ಮಿರ್ಜಾ, ರೆಹನಾ ಹೈ ತೇರೆ ದಿಲ್ ಮೈ' ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದು, 2000ರಲ್ಲಿ ಮಿಸ್ ಏಶಿಯಾ ಪೆಸಿಫಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

11 ವರ್ಷಗಳ ನಂತರ ಮುರಿದು ಬಿತ್ತು ದಿಯಾ ಮಿರ್ಜಾ ದಾಂಪತ್ಯ

ಬಾಲಿವುಡ್ ನಟಿಯಾಗಿರುವ ದಿಯಾ ಮಿರ್ಜಾ, ರೆಹನಾ ಹೈ ತೇರೆ ದಿಲ್ ಮೈ' ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದು, 2000ರಲ್ಲಿ ಮಿಸ್ ಏಶಿಯಾ ಪೆಸಿಫಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ಇಷ್ಟೇ ಅಲ್ಲದೇ ಹಲವು ಸಾಮಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ದಿಯಾ ಮಿರ್ಜಾ, ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಅಷ್ಟೇನೂ ಚಟುವಟಿಕೆಯಿಂದಿಲ್ಲ.