Asianet Suvarna News Asianet Suvarna News

ಹುಡುಗಿಯರ ಜತೆ ಕೆಟ್ಟದಾಗಿ ವರ್ತಿಸಲ್ಲ; ವಿದ್ಯಾರ್ಥಿಗಳಿಂದ ಪ್ರತಿಜ್ಞೆ

ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆಗಳು ಹೆಚ್ಚಾಗುತ್ತಿದೆ. ಇತ್ತೀಚಿಗೆ ನಡೆದ ಹೈದರಾಬಾದ್ ರೇಪ್‌ ಕೇಸ್‌ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಹೆಣ್ಣು ಮಕ್ಕಳ ಶೋಷಣೆ ತಡೆಗಟ್ಟಲು ಗಂಡು ಮಕ್ಕಳಲ್ಲಿ ಶಾಲಾ ದಿನಗಳಿಂದಲೇ ಜಾಗೃತಿ ಮೂಡಿಸುವ ಕೆಲಸಗಳು ಶುರುವಾಗಿದೆ. 

Delhi school boys take pledge to not misbehave with girls says CM Arvind Kejriwal
Author
Bengaluru, First Published Dec 14, 2019, 9:38 AM IST

ನವದೆಹಲಿ (ಡಿ. 14): ದೇಶದ ವಿವಿಧೆಡೆ ಹೆಚ್ಚಾಗುತ್ತಿರುವ ಮಹಿಳಾ ದೌರ್ಜನ್ಯ ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳ ತಡೆಗೆ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಬಾಲಕರು ‘ಯಾವುದೇ ಹುಡುಗಿಯರ ಜತೆ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ, ಛೇಡಿಸುವುದಿಲ್ಲ’ ಎಂದು ಪ್ರತಿಜ್ಞೆ ತೆಗೆದುಕೊಳ್ಳುವ ಯೋಜನೆಯನ್ನು ದೆಹಲಿ ಸರ್ಕಾರ ರೂಪಿಸಿದೆ.

ಭಾರತಕ್ಕೆ ದಾಖಲೆ ವಿದೇಶೀ ಬಂಡವಾಳ; ಆರ್ಥಿಕ ಪ್ರಗತಿಯ ಸಂಕೇತವಿದು!

ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ‘ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ. ಇದರಿಂದ ಶಾಲಾ-ಕಾಲೇಜುಗಳಲ್ಲಿ ಇದನ್ನು ತಿಳಿಹೇಳಲು ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ. ಅಲ್ಲದೇ ಪೋಷಕರು ಕೂಡ ಮಕ್ಕಳಿಗೆ ತಿಳಿಹೇಳಬೇಕು. ಒಳ್ಳೆಯದನ್ನೇ ಮಾಡಲು ಪ್ರೇರೇಪಿಸಬೇಕು ಎಂದು ತಿಳಿಸಿದ್ದಾರೆ.

 

Follow Us:
Download App:
  • android
  • ios