ನವದೆಹಲಿ(ಡಿ.04): ಸಶಸ್ತ್ರಪಡೆಗಳನ್ನು ಹೊಗಳುವ ಭರಾಟೆಯಲ್ಲಿ ರಾಜಕೀಯ ನಾಯಕರು ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಈ ಸಾಲಿಗೆ ಇದೀಗ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸೇರ್ಪಡೆಗೊಂಡಿದ್ದಾರೆ.

ನೌಕಾಸೇನೆ ದಿನಾಚರಣೆ ಅಂಗವಾಗಿ ಭಾರತೀಯ ನೌಕಾಪಡೆಯನ್ನು ಹೊಗಳಿ ಟ್ವಿಟ್ ಮಾಡಿರುವ ಮನೋಜ್ ತಿವಾರಿ, ಅಮೆರಿಕ ನೌಕಾಸೇನೆಯ ಫೋಟೋ ಹಾಕಿ ಟ್ರೋಲ್ ಆಗಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ...ಎಲ್ಲ ಸರಿಯಾಗುವುದು ಮನೋಜ್ ತಿವಾರಿ ಹೇಳಿದ್ದು ಕೇಳಿದರೆ..!

ಭಾರತೀಯ ಸಮುದ್ರ ಗಡಿಗಳನ್ನು ಕಾಯುತ್ತಿರುವ ನೌಕಾಸೇನೆಯ ಧೀರ ಯೋಧರಿಗೆ ನನ್ನ ಸಲಾಂ ಎಂದು ಟ್ವಿಟ್ ಮಾಡಿದ್ದ ಮನೋಜ್ ತಿವಾರಿ, ಭಾರತೀಯ ನೌಕಾಸೇನೆಯ ಫೋಟೋ ಬದಲಿಗೆ ಅಮೆರಿಕ ನೌಕಾಸೇನೆಯ ಫೋಟೋ ಹಾಕಿದ್ದಾರೆ.

ದೆಹಲಿಗೂ NRC ಬೇಕೆಂದ ಮನೋಜ್ ತಿವಾರಿಗೆ ತಿವಿದ ಕಾಂಗ್ರೆಸ್!

ಈ ಫೋಟೋ ನೋಡಿದ ನೆಟ್ಟಿಗರು ಮನೋಜ್ ತಿವಾರಿ ಕಾಲೆಳೆದಿದ್ದು, ಭಾರತೀಯ ನೌಕಾಸೇನೆಯನ್ನು ಹೊಗಳುವ ಮೊದಲು, ಅದರ ಕುರಿತು ಸರಿಯಾಗಿ ಓದಿಕೊಳ್ಳಿ ಎಂದು ಕಿಚಾಯಿಸಿದ್ದಾರೆ.