ನವದೆಹಲಿ (ನ. 06): ಕಳೆದೊಂದು ವಾರದಿಂದ ವಿಪರೀತ ಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಪರಿಸ್ಥಿತಿ ಮತ್ತಷ್ಟುಸುಧಾರಣೆಯಾಗಿದೆ. ‘ಅತ್ಯಂತ ಗಂಭೀರ’ ಹಾಗೂ ‘ಗಂಭೀರ ಸ್ಥಿತಿ’ಯಲ್ಲಿದ್ದ ಮಾಲಿನ್ಯ ಪ್ರಮಾಣ ಈಗ ‘ಅತ್ಯಂತ ಕಳಪೆ’ ಹಂತಕ್ಕೆ ಬಂದಿದೆ.

ಗಂಟೆಗೆ 25 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮಲಿನ ಧೂಮ ದೆಹಲಿಯಿಂದಾಚೆ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಂಭವವೂ ಇರುವುದರಿಂದ ದೆಹಲಿ ಸಹಜಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ನಡುವೆ, ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿನ ಮಾಲಿನ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿದ್ದಾರೆ.

 

ಮಕ್ಕಳೇ ಆರೋಗ್ಯವಾಗಿರಿ! ಶಾಲೆ ಸುತ್ತಮುತ್ತ ಜಂಕ್ ಫುಡ್ ನಿಷೇಧ

ವಾಯುಗುಣಮಟ್ಟಶೂನ್ಯದಿಂದ 50ರವರೆಗೆ ಇದ್ದರೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. 51ರಿಂದ 100 ರು. ಇದ್ದರೆ ತೃಪ್ತಿದಾಯಕ ಎನ್ನಲಾಗುತ್ತದೆ. ಆದರೆ ದೆಹಲಿಯಲ್ಲಿ 500 ಮೇಲ್ಪಟ್ಟು ದಾಟಿ ಹೋಗಿತ್ತು. ಅದು ಅತ್ಯಂತ ಗಂಭೀರ ಸ್ಥಿತಿ. ಸೋಮವಾರ 400 ಒಳಗೆ ಬಂದು ಗಂಭೀರ ಸ್ಥಿತಿಯಲ್ಲಿ ಉಳಿದುಕೊಂಡಿತ್ತು. ಮಂಗಳವಾರ 310ರಿಂದ 358ರವರೆಗೆ ಇದೆ. ಇದು ಅತ್ಯಂತ ಕಳಪೆ ವಾಯುಗುಣಮಟ್ಟವಾದರೂ ಗಂಭೀರಕ್ಕೆ ಹೋಲಿಸಿದರೆ ಪರವಾಗಿಲ್ಲ ಎನ್ನುವಂತಾಗಿದೆ.

ಮೋದಿ ಸಭೆ:

ಮೂರು ದಿನಗಳ ಥಾಯ್ಲೆಂಡ್‌ ಪ್ರವಾಸ ಮುಗಿಸಿ ಬಂದಿರುವ ಪ್ರಧಾನಿ ಮೋದಿ ಅವರು ಉತ್ತರ ಭಾರತದ ಮಾಲಿನ್ಯ ಸ್ಥಿತಿ ಕುರಿತು ಮಂಗಳವಾರ ಅಧಿಕಾರಿಗಳ ಜತೆ ಸಭೆ ನಡೆಸಿದರು. ಮೋದಿ ಅವರ ಅನುಪಸ್ಥಿತಿಯಲ್ಲಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರು ದೆಹಲಿ, ಪಂಜಾಬ್‌ ಹಾಗೂ ಹರಾರ‍ಯಣ ಅಧಿಕಾರಿಗಳೊಂದಿಗೆ ಭಾನುವಾರ ಮತ್ತು ಸೋಮವಾರ ಸಭೆ ನಡೆಸಿದ್ದರು.