Asianet Suvarna News Asianet Suvarna News

ಕಣಿವೆಯಿಂದ ಅಸ್ಸಾಂಗೆ: ತಡವಾಗಲಿದೆ ಬರುವುದು ಮನೆಗೆ!

ಉತ್ತರದಿಂದ ಈಶಾನ್ಯಕ್ಕೆ CRPF ಯೋಧರ ಪಯಣ| ಕಣಿವೆ ರಕ್ಷಣೆಯಲ್ಲಿ ನಿರತರಾಗಿದ್ದ ಯೋಧರು ಇದೀಗ ಅಸ್ಸಾಂ ರಕ್ಷಣೆಗೆ| ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ| CAB ವಿರೋಧಿಸಿ ಅಸ್ಸಾಂನಲ್ಲಿ ಭುಗಿಲೆದ್ದ ಹಿಂಸಾಚಾರ| ಅಸ್ಸಾಂನತ್ತ ಪಯಣ ಬೆಳೆಸಿದ CRPFನ 20 ತುಕಡಿಗಳು| ಜಮ್ಮು ಮತ್ತು ಕಾಶ್ಮೀರದಿಂದ CRPF ಪಡೆ ವಾಪಸ್ ಪಡೆಯಲು ಕೇಂದ್ರದ ಸಮ್ಮತಿ| ವಿಶೇಷ ರೈಲಿನಲ್ಲಿ ಅಸ್ಸಾಂನತ್ತ ಹೊರಟ CRPF ಯೋಧರು|

CRPF Troops Moved To Assam From J&K Amid Violent Protest Against CAB
Author
Bengaluru, First Published Dec 11, 2019, 4:06 PM IST

ಶ್ರೀನಗರ(ಡಿ.11): ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಜೋರಾಗಿದೆ. ಅದರಲ್ಲೂ ಅಸ್ಸಾಂ ರಾಜ್ಯದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದೆ.

ಈ ಹಿನ್ನೆಲೆಯಲ್ಲಿ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯ ಜವಾಬ್ದಾರಿ ಹೊತ್ತಿದ್ದ CRPF,ಇದೀಗ ಅಸ್ಸಾಂ ರಾಜ್ಯದತ್ತ ಪಯಣ ಬೆಳೆಸಿದೆ.

ಕೆಲವರ ನಾಲಿಗೆ ಮೇಲೆ ಪಾಕ್ ಕುಣಿದಾಡುತ್ತಿದೆ: ಪ್ರಧಾನಿ ಮೋದಿ!

ಅಸ್ಸಾಂ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರ ತಹಬದಿಗೆ ತರಲು CRPFನ ಸುಮಾರು 20 ತುಕಡಿಗಳನ್ನು ಕಣಿವೆ ರಾಜ್ಯದಿಂದ ಕರೆಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ CRPF ತುಕಡಿಗಳನ್ನು ಅಸ್ಸಾಂ ರಾಜ್ಯಕ್ಕೆ ರವಾನಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.

CRPF ಯೋಧರನ್ನು ಅಸ್ಸಾಂಗೆ ರವಾನಿಸಲು ವಿಶೇಷ ರೈಲನ್ನು ಓಡಿಸಲು ರೈಲ್ವೇ ಇಲಾಖೆ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಇವುಗಳಲ್ಲಿ ಮೂರರು ತುಕಡಿಗಳನ್ನು  ದಿಸ್‌ಪುರ್‌ನಿಂದ ಮಣಿಪುರಕ್ಕೆ ರವಾನಿಸಲು ಗೃಹ ಇಲಾಖೆ ನಿರ್ಧರಿಸಿದೆ.

ಅಮಿತ್ ಶಾ CAB: ವಾಷಿಂಗ್ಟನ್ ಟು ದಿಲ್ಲಿ, ಪಿಕ್ಚರ್ ಅಬಿ ಬಾಕಿ ಹೈ....!

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಎನ್‌ಆರ್‌ಸಿ ಜಾರಿಯಿಂದ ಖುಷಿಯಾಗಿದ್ದ ಅಸ್ಸಾಂ ಇದೀಗ CAB ಜಾರಿಯಿಂದ ಉದ್ವಿಗ್ನಗೊಂಡಿರುವುದು ವಿಪರ್ಯಾಸ.

Follow Us:
Download App:
  • android
  • ios