Asianet Suvarna News Asianet Suvarna News

ಹೆಪ್ಪುಗಟ್ಟಿದ ಕಾಶ್ಮೀರದ ದ್ರಾಸ್‌!

ಲಡಾಖ್‌ನ ದ್ರಾಸ್‌ನಲ್ಲಿ -30 ಡಿಗ್ರಿ ಉಷ್ಣಾಂಶ| ಕಾಶ್ಮೀರ ಕಣಿವೆಯಾದ್ಯಂತ ಭಾರೀ ಚಳಿಗಾಳಿ, ಹಿಮಪಾತ

Cold wave tightens grip on Kashmir Drass records 30 degrees
Author
Bangalore, First Published Jan 25, 2020, 10:52 AM IST

ಶ್ರೀನಗರ[ಜ.25]: ಕಾಶ್ಮೀರ ಕಣಿವೆಯಲ್ಲಿ ಚಳಿಗಾಲದ ಶೀತಗಾಳಿಯ ತೀವ್ರತೆ ದಿನೇ ದಿನೇ ಏರುತ್ತಿದೆ. ಜೊತೆಗೆ ಭಾರೀ ಉಷ್ಣಾಂಶ ಕುಸಿದ ಪರಿಣಾಮ ಶನಿವಾರದ ಬಳಿಕ ಕೆಲ ದಿನಗಳ ಕಾಲ ಸಣ್ಣ ಮಳೆ ಅಥವಾ ಹಿಮಪಾತ ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ಭವಿಷ್ಯ ನುಡಿದಿದೆ.

ಮಂಜುಗಡ್ಡೆಯಾದ ನಯಾಗರಾ: ವೈರಲ್ ಆಯ್ತು ಫಾಲ್ಸ್ ಬ್ಯೂಟಿ!

ಈ ನಡುವೆ ಲಡಾಖ್‌ನ ದ್ರಾಸ್‌ನಲ್ಲಿ ಉಷ್ಣಾಂಶ ಬರೋಬ್ಬರಿ -30 ಡಿಗ್ರಿಗೆ ಕುಸಿದಿದೆ.ಈ ಹಿಂದೆ 1995 ಜನವರಿ 9 ರಂದು -60 ಡಿಗ್ರಿ ದಾಖಲಿಸುವ ಮೂಲಕ ದ್ರಾಸ್‌ ದಾಖಲೆ ಬರೆದಿತ್ತು.

ಇನ್ನು-20.1 ಡಿಗ್ರಿ ದಾಖಲಿಸುವ ಮೂಲಕ ಲೇಹ್‌ ಎರಡನೇ ಸ್ಥಾನದಲ್ಲಿದೆ. ಶ್ರೀನಗರದಲಿ -6.1 ಡಿ. ಸೆ., ಪಹಲ್ಗಾಂನಲ್ಲಿ 13.4 ಡಿ.ಸೆ., ಗುಲ್ಮಾರ್ಗ್‌ನಲ್ಲಿ -11.2 ಡಿ.ಸೆ.ಕ್ಕೆ ಇಳಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸೌಂದರ್ಯವೇ ಧರೆಗಿಳಿದಂತೆ: ಹಿಮದ ಹೊದಿಕೆ ಹೊದ್ದ ಹಿಮಾಚಲ!

Follow Us:
Download App:
  • android
  • ios