ಶಾಸಕನಾಗಿ ಕೂಡ ಅನುಭವ ಇಲ್ಲದೇ ನೇರವಾಗಿ ಮುಖ್ಯಮಂತ್ರಿ ಆದ ಉದ್ಧವ್‌ ಠಾಕ್ರೆ ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸುತ್ತಿರುವ ರೀತಿ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಂಕಷ್ಟದ ಸಮಯದಲ್ಲಿ ನೇರವಾಗಿ ಜನರ ಜೊತೆಗಿನ ಸಂವಾದ, ತಾಳ್ಮೆಯಿಂದ ಹ್ಯಾಂಡಲ್ ರೀತಿ ಹಾಗೂ ತೆಗೆದುಕೊಂಡ ಕಠಿಣ ಕ್ರಮಗಳ ಬಗ್ಗೆ ಬಿಜೆಪಿ, ಕಾಂಗ್ರೆಸ್‌, ಎನ್‌ಸಿಪಿ ನಾಯಕರೂ ಕೂಡ ಹೊಗಳುತ್ತಿದ್ದಾರೆ.

ಠಾಕ್ರೆ ಕುಟುಂಬದ ಸಹಜ ಆಕ್ರಮಣಕಾರಿ ಸ್ವಭಾವ ಉದ್ಧವ್‌ ಅವರಲ್ಲಿ ಇಲ್ಲ. ಎಲ್ಲದಕ್ಕೂ ಬಾಳಾಠಾಕ್ರೆ ಜೊತೆ ಸಮೀಕರಿಸಿ ಉದ್ಧವ್‌ ಅಷ್ಟೆಲ್ಲ ಇಲ್ಲ ಎಂದು ಟೀಕೆಗಳಿದ್ದವು. ಆದರೆ ಸಂಕಷ್ಟದ ಸಮಯದಲ್ಲಿ ಇರಬೇಕಾದ ತಾಳ್ಮೆ, ಸಮಾಧಾನ, ನಿರ್ಣಯ ಸಾಮರ್ಥ್ಯಗಳಿಂದ ಉದ್ಧವ್‌ ಬಗ್ಗೆ ಸದ್ಯಕ್ಕಂತೂ ಅಭಿಪ್ರಾಯ ಬೇಗನೆ ಬದಲಾಗುತ್ತಿದೆ. ಇದಕ್ಕೆ ಉದ್ಧವ್‌ ಪುತ್ರ, ಪರಿಸರ ಮಂತ್ರಿ ಆದಿತ್ಯ ಠಾಕ್ರೆ ಕೊಡುಗೆಯೂ ಸಾಕಷ್ಟಿದೆ.

ಕನ್ನಿಕಾ ಕಪೂರ್‌ ಪಾರ್ಟಿಯಲ್ಲಿ ಭಾಗವಹಿಸಿದ್ದ ವಸುಂಧರಾ, ಉದಾಸಿ ಕ್ವಾರಂಟೈನ್‌ನಲ್ಲಿ!

ವಿಮಾನ ನಿರ್ಬಂಧ ಎಡವಟ್ಟಾಗಿದ್ದೆಲ್ಲಿ?

ಚೀನಾ ಮತ್ತು ಯುರೋಪ್‌ ದೇಶಗಳಿಂದ ಭಾರತಕ್ಕೆ ಬಹುಬೇಗನೆ ನಿರ್ಬಂಧವನ್ನು ಮೋದಿ ಸರ್ಕಾರ ಹಾಕಿತ್ತಾದರೂ ಮಿತ್ರರಾದ ಅಮೆರಿಕ, ಬ್ರಿಟನ್‌, ಜಪಾನ್‌, ಸೌದಿ ಅರೇಬಿಯಾದಿಂದ ವಿಮಾನಗಳು ಬರುವುದನ್ನು ನಿಲ್ಲಿಸಲು ರಾಜತಾಂತ್ರಿಕ ಕಾರಣಗಳಿಂದ ಹಿಂದೇಟು ಹಾಕಿತು.

ಹೊರಗೆಲ್ಲೂ ಕಾಣಿಸಕೊಳ್ಳದ ಅಮಿತ್ ಶಾ ತೆರೆಮರೆಯಲ್ಲಿ ಏನ್ಮಾಡ್ತಿದ್ದಾರೆ?

ದೇಶದೊಳಗೆ ವೈರಸ್‌ ಬಂದಿದ್ದೇ ದುಬೈ ಮತ್ತು ಲಂಡನ್‌ನಿಂದ. ಯುರೋಪ್‌ ದೇಶಗಳಿಂದ ಬರುವವರು ಲಂಡನ್‌ ಮೂಲಕ ಬಂದರೆ, ಉಳಿದವರು ದುಬೈ ಮೂಲಕ ಬಂದರು. ವಿಮಾನಗಳಿಗಿಂತ ವೈರಸ್‌ ಹೆಚ್ಚಳಕ್ಕೆ ಕಾರಣ ವಿಮಾನ ನಿಲ್ದಾಣಗಳು. ವಿಪರ್ಯಾಸ ನೋಡಿ, ಸಂಪೂರ್ಣ ಜಗತ್ತೇ ಒಂದು ಹಳ್ಳಿ ಎಂದು ಮನುಷ್ಯ ಬೀಗುತ್ತಿದ್ದಾಗ ಈಗ ಪ್ರತಿಯೊಂದು ನಗರವೂ ಒಂದು ದ್ವೀಪದಂತೆ ಕಾಣುತ್ತಿದೆ. Man proposes God Disposes 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ