ನವದೆಹಲಿ(ಡಿ.07): ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ರಾಕ್ಷಸರನ್ನು ನರಕಕ್ಕೆ ಕಳುಹಿಸಿದ ಪೊಲೀಸರಿಗೆ ಧನ್ಯವಾದಗಳ ಸುರಿಮಳೆಯೇ ಆಗುತ್ತಿದೆ.

ಆದರೆ ಹೈದರಾಬಾದ್ ಎನ್‌ಕೌಂಟರ್ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅಪಸ್ವರ ಎತ್ತಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನ್ಯಾಯಿಕ ಪ್ರಕ್ರಿಯೆ ಮೂಲಕವೇ ಅಪರಾಧಿಗಳಿಗೆ ಶಿಕ್ಷೆಯಾಗಬೇಕೇ ಹೊರತು, ಪೊಲೀಸರ ಎನ್‌ಕೌಂಟರ್‌ಗಳಿಂದಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್ ಎನ್‌ಕೌಂಟರ್‌ ಬಗ್ಗೆ ಅಪಸ್ವರ ಎತ್ತಿರುವ ಸಿಜೆಐ, ತ್ವರಿತ ನ್ಯಾಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಹೇಳಿದ್ದಾರೆ.

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಜೋಧ್'ಪುರ್'ನ ಸಮಾರಂಭದಲ್ಲಿ ಮಾತನಾಡಿದ ಜಸ್ಟೀಸ್ ಬೊಬ್ಡೆ, ನ್ಯಾಯ ದ್ವೇಷದಿಂದ ಕೂಡಿರಬಾರದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ದ್ವೇಷದ ಭಾವನೆ ಇಟ್ಟುಕೊಂಡು ನ್ಯಾಯವನ್ನು ಕೊಡಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ನ್ಯಾಯಿಕ ಪ್ರಕ್ರಿಯೆಯ ವಿಳಂಬ ಖೇದಕರ ಸಂಗತಿ ಎಂದಿರುವ ಬೊಬ್ಡೆ, ಅದಾಗ್ಯೂ ಕಾನೂನುಬಾಹಿರ ಎನ್‌ಕೌಂಟರ್‌ಗಳು ಸಮಸ್ಯೆಗೆ ಪರಿಹಾರ ಒದಗಿಸಲಾರವು ಎಂದು ಹೇಳಿದರು.

ರೇಪಿಸ್ಟ್‌ಗಳಿಗೆ ಕ್ಷಮಾದಾನ ಇಲ್ಲ: ರಾಷ್ಟ್ರಪತಿ ಕೋವಿಂದ್

ದಿಶಾ ಹತ್ಯಾಚಾರಿಗಳ ಎನ್‌ಕೌಂಟರ್ ಕುರಿತು ದೇಶಾದ್ಯಂತ ಪರ-ವಿರೋಧದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಎನ್‌ಕೌಂಟರ್ ಸಮರ್ಥನೀಯವಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿರುವುದು ಮಹತ್ವ ಪಡೆದುಕೊಂಡಿದೆ.