Asianet Suvarna News Asianet Suvarna News

ಪೌರತ್ವ ಮಸೂದೆಗೆ ರಾಷ್ಟ್ರಪತಿ ಅಂಕಿತ: ಇಂದಿನಿಂದಲೇ ಕಾನೂನು ಜಾರಿ!

ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ| ಇಂದಿನಿಂದಲೇ ಕಾನೂನಾಗಿ ಜಾರಿಗೆ ಬರಲಿರುವ ಕಾಯ್ದೆ| ಸಂಸತ್ತಿನಲ್ಲಿ ಅನುಮೋದನೆಗೊಂಡಿದ್ದ ಪೌರತ್ವ ವಿಧೇಯಕ 2019| ಪೌರತ್ವ ವಿಧೇಯಕ 2019 ಸಹಿ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್| ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆ| ಪೌರತ್ವ ಕಾಯ್ದೆಗೆ ಕೇರಳ, ಪಂಜಾಬ್ ಹಾಗೂ ಪ.ಬಂಗಾಳ ರಾಜ್ಯ ಸರ್ಕಾರಗಳು ವಿರೋಧ|

Citizenship Bill Gets President Ram Nath Kovind Assent
Author
Bengaluru, First Published Dec 13, 2019, 1:47 PM IST

ನವದೆಹಲಿ(ಡಿ.13): ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಮೂಲಕ ಸಂಸತ್ತಿನಲ್ಲಿ ಅನುಮೋದನೆಗೊಂಡಿದ್ದ ಪೌರತ್ವ ವಿಧೇಯಕ 2019 ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದಿದೆ. 

ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ಈ ಕುರಿತು ಅಧಿಸೂಚನೆ ಪ್ರಕಣೆಯಾಗಿದ್ದು, ಇಂದಿನಿಂದಲೇ ನೂತನ ಕಾಯ್ದೆ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ತ್ರಿವಳಿ ತಲಾಖ್, ಆರ್ಟಿಕಲ್ 370, ಪೌರತ್ವ ಮಸೂದೆ: ಮುಂದಿನ ಹೆಜ್ಜೆಗೆ ಕೇಂದ್ರದ ಭರದ ಸಿದ್ಧತೆ!

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಿಂದ ವಲಸೆ ಬಂದ ಹಿಂದೂ, ಕ್ರಿಶ್ಚಿಯನ್, ಬೌದ್ಧ ಹಾಗೂ ಜೋರಾಸ್ಟ್ರಿಯನ್ ಸಮುದಾಯದ ಜನರಿಗೆ ಭಾರತದ ಶಾಶ್ವತ ಪೌರತ್ವ ಕಲ್ಪಿಸಲು ಈ ಕಾನೂನು ಸಹಾಯಕಾರಿ.

ಆದರೆ ಕೇರಳ, ಪಂಜಾಬ್ ಹಾಗೂ ಪ.ಬಂಗಾಳ ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸಿದ್ದು, ಆಯಾ ರಾಜ್ಯಗಳಲ್ಲಿ ಜಾರಿಗೆ ತರುವುದಿಲ್ಲ ಎಂದು ಘೋಷಿಸಿವೆ.

ನೀವ್ಯಾರೂ ಹೆದರಬೇಕಿಲ್ಲ: ಈಶಾನ್ಯ ಜನತೆಗೆ ಮೋದಿ ಭರವಸೆ!

Follow Us:
Download App:
  • android
  • ios