ಚುನಾವಣೆಗೆ ಮೂರೇ ದಿನ ಮೊದಲು ಬಿಜೆಪಿಗೆ ಆಘಾತ, ಮಾವೋವಾದಿ ದಾಳಿಗೆ ಪ್ರಮುಖ ನಾಯಕ ಹತ್ಯೆ!
ಚತ್ತೀಸಘಡ ಚುನಾವಣೆಗೆ ಇನ್ನೂ ಮೂರೇ ದಿನ ಬಾಕಿ. ಅಷ್ಟರಲ್ಲೇ ಮಾವೋವಾದಿಗಳು ಬಿಜೆಪಿ ನಾಯಕನ ಮೇಲೆ ದಾಳಿ ನಡೆಸಿದೆ. ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಪ್ರಮುಖ ನಾಯಕ ವಾವೋವಾದಿಗಳ ದಾಳಿಗೆ ಬಲಿಯಾಗಿದ್ದಾರೆ.

ರಾಯಪುರ(ನ.04) ಪಂಚ ರಾಜ್ಯಗಳ ಚುನಾವಣೆ ಪೈಕಿ ಕೇವಲ ಚತ್ತೀಸಘಡದಲ್ಲಿ ಎರಡು ಹಂತದಲ್ಲಿ ಚುನಾವಣೆ ಆಯೋಜಿಸಲಾಗಿದೆ. ನಕ್ಸಲರು, ಮಾವೋವಾದಿ ಪೀಡಿತ ರಾಜ್ಯವಾಗಿರುವ ಸುರಕ್ಷತೆ ದೃಷ್ಟಿಯಿಂದ ಎರಡು ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಮೊದಲ ಹಂತದ ಚುನಾವಣೆ ನವೆಂಬರ್ 7 ರಂದು ನಡೆಯಲಿದೆ. ಚುನಾವಣೆಗೆ ಇನ್ನು ಮೂರು ದಿನವಿರುವಾಗಲೇ ವಾವೋವಾದಿಗಳು ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನಾರಾಯಣಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರತನ್ ದುಬೆ ವಾವೋವಾದಿಗಳ ದಾಳಿಗೆ ಬಲಿಯಾಗಿದ್ದಾರೆ.
ಬಿಜೆಪಿ ಪರ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ರತನ್ ದುಬೆ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ನಾರಾಯಣಪುರ ಜಿಲ್ಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು. ಈ ಬಾರಿ ಚತ್ತೀಸಘಡದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸಲು ಸತತ ಕೆಲಸ ಮಾಡುತ್ತಿದ್ದರು. ಸರ್ಕಾರದ ವೈಫಲ್ಯದ ಜೊತೆಗೆ ಬಿಜೆಪಿಯ ಅಭಿವೃದ್ಧಿಯನ್ನು ಜನರಿಗೆ ಮುಟ್ಟಿಸಿದ್ದರು. ಇದೇ ವೇಳೆ ಚತ್ತೀಸಘಡವನ್ನು ನಕ್ಸಲ್, ಮಾವೋವಾದಿ ಮುಕ್ತ ರಾಜ್ಯವನ್ನಾಗಿ ಮಾಡಲು ಬಿಜೆಪಿ ಪ್ರಮಾಣಿಕ ಪ್ರಯತ್ನ ಮಾಡಲಿದೆ ಎಂದಿದ್ದರು. ಇದು ವಾವೋವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಮಡಿಕೇರಿ: ಗೌರಿ ಕೊಲೆ ಆರೋಪಿಗಳ ಪರ ವಕೀಲಗೆ ನಕ್ಸಲರಿಂದ ಬೆದರಿಕೆ?: ದೂರು ದಾಖಲು
ನವೆಂಬರ್ 4 ರ ಸಂಜೆ 5.30ಕ್ಕೆ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ವಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಸುತ್ತಿನ ಗುಂಡಿನ ದಾಳಿಯಿಂದ ತೀವ್ರಗಾಯಗೊಂಡ ರತನ್ ದುಬೆ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವಿರುದ್ಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ವಾವೋವಾದಿಗಳು, ದಾಳಿಯ ಮುನ್ಸೂಚನೆ ನೀಡಿದ್ದರು.
ನಾರಾಯಣಪುರ ಜಿಲ್ಲೆಯ ಕೌಶಾಲ್ನಾರ್‌ದಲ್ಲಿ ಬಿಜೆಪಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಲೆ ವಾವೋವಾದಿಗಳು ದಾಳಿ ಮಾಡಿದ್ದಾರೆ. ಭೀಕರ ದಾಳಿಯಲ್ಲಿ ರತನ್ ದುಬೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಚತ್ತೀಸಘಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಇದೀಗ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.