ಲಕ್ನೋ, [ಅ.18]: ಹಿಂದು ಮಹಾಸಭಾದ ಮಾಜಿ ನಾಯಕ, ಹಿಂದು ಸಮಾಜ ಪಾರ್ಟಿಯ ನೇತಾರ ಕಮ್ಲೇಶ್ ತಿವಾರಿ ಅವರನ್ನು ಶುಕ್ರವಾರ ಹಾಡುಹಗಲೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಹಂತಕರ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು,  ಸಿಸಿಟಿವಿಯಲ್ಲಿ ಸಿಕ್ಕ ದೃಶ್ಯಗಳ ಪ್ರಕಾರ, ಇಬ್ಬರು ಹಂತಕರ ಪೈಕಿ ಒಬ್ಬಾತ ಕೇಸರಿ ಬಣ್ಣದ ಉಡುಪು ಧರಿಸಿದ್ದರೆ, ಇನ್ನೊಬ್ಬ ಆರೋಪಿ ಕೆಂಪು ಬಣ್ಣದ ಬಟ್ಟೆ ಧರಿಸಿದ್ದಾನೆ. ಜತೆಗೆ ತಲೆ ಮೇಲೆ ಕ್ಯಾಪ್ ಸಹ ಹಾಕಿಕೊಂಡಿದ್ದಾನೆ.

BSY ಅನ್‌ವಾಂಟೆಡ್ ಚೈಲ್ಡ್ ಎಂದ ಸಿದ್ದು, ಟ್ರಂಪ್ ಇನ್ಮುಂದೆ ಮಾಡಲ್ವಂತೆ ಮುದ್ದು: ಅ.18ರ ಟಾಪ್ 10 ಸುದ್ದಿ!

 ಲಕ್ನೋದ  ಖುರ್ಷಿದ್​ ಬಾಘ್​ನಲ್ಲಿರುವ ಪಾರ್ಟಿ ಕಚೇರಿಯಲ್ಲಿ ಶುಕ್ರವಾರ ಕಮ್ಲೇಶ್ ತಿವಾರಿ ಇದ್ದಾಗ, ಕೆಲವರು ಸ್ವೀಟ್ ಬಾಕ್ಸ್​ನೊಂದಿಗೆ ಆಗಮಿಸಿದ್ದರು.  ನಂತರ ಬಾಕ್ಸ್​ನಿಂದ ಸ್ವೀಟ್ ತೆಗೆದು ಕೊಡುವ ಬದಲು, ಪಿಸ್ತೂಲ್ ತೆಗೆದು ಏಕಾಏಕಿ ಕಮ್ಲೇಶ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು.  

ಕಮಲೇಶ್​ ತಿವಾರಿ ಉತ್ತರಪ್ರದೇಶ ಹಿಂದು ಮಹಾಸಭಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೇ 2017ರ ಜನವರಿಯಲ್ಲಿ ಹಿಂದು ಸಮಾಜ ಪಾರ್ಟಿ ಸ್ಥಾಪಿಸಿದ್ದರು.