Asianet Suvarna News Asianet Suvarna News

CAB: ಈಶಾನ್ಯಕ್ಕೆ ರಾ‘ಜೀವ’ ತುಂಬಿದ ಚಂದ್ರಶೇಖರ್!

CAB ವಿರೋಧಿಸಿ ಧಗಧಗಿಸುತ್ತಿರುವ ದೇಶದ ಈಶಾನ್ಯ ಭಾಗ| ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ| ಈಶಾನ್ಯ ರಾಜ್ಯಗಳ ಪ್ರತಿಭಟನೆ ವಿಶ್ಲೇಷಿಸಿದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್|  ಅಕ್ರಮ ವಲಸಿಗರ ಸಮಸ್ಯೆಯೇ ಜನರ ಆಕ್ರೋಶಕ್ಕೆ ಕಾರಣ ಎಂದ ರಾಜೀವ್ ಚಂದ್ರಶೇಖರ್| ‘ಹಿಂದಿನ ಸರ್ಕಾರಗಳ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅಕ್ರಮ ವಲಸಿಗರ ಸಮಸ್ಯೆ ಸೃಷ್ಠಿ’| ದೇಶಾದ್ಯಂತ NRC ಜಾರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ರಾಜೀವ್ ಚಂದ್ರಶೇಖರ್|

CAB North East Compelling Argument For India Wide NRC Rajeev Chandrasekhar
Author
Bengaluru, First Published Dec 14, 2019, 9:17 PM IST

ಬೆಂಗಳೂರು(ಡಿ.14): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕಾಯ್ದೆಯ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು, ಹಿಂಸಾತ್ಮಕ ಹಾದಿ ತುಳಿದಿದ್ದಾರೆ.

ನಿಂತಿದ್ದ ಐದು ರೈಲುಗಳಿಗೆ ಬೆಂಕಿ: ಇದೇನಾ ಪ್ರತಿಭಟನೆಯ ಪರಿ?

ಈ ಮಧ್ಯೆ CAB ಜಾರಿ ಮತ್ತು ಈಶಾನ್ಯ ರಾಜ್ಯಗಳ ಪ್ರತಿಭಟನೆಯನ್ನು ವಿಶ್ಲೇಷಿಸಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಅಕ್ರಮ ವಲಸಿಗರ ಸಮಸ್ಯೆ ಸದ್ಯದ ಕಹಿ ಘಟನೆಗಳಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಶಾನ್ಯ ರಾಜ್ಯಗಳ ಜನತೆ CAB ವಿರೋಧಿಸುತ್ತಿದ್ದಾರೆ ಎಂದು ಮೇಲ್ನೊಟಕ್ಕೆ ಕಂಡುಬಂದರೂ, ಅವರ ಆಕ್ರೋಶದ ಮೂಲ ಅಕ್ರಮ ವಲಸಿಗರ ಸಮಸ್ಯೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ: ಅಸ್ಸಾಂ ಏಕೆ ಕೊತ ಕೊತ ಕುದಿಯುತ್ತಿದೆ?

ಈ ಕುರಿತು ಟ್ವಿಟ್ ಮಾಡಿರುವ ರಾಜೀವ್ ಚಂದ್ರಶೇಖರ್, ಹಿಂದಿನ ಸರ್ಕಾರಗಳ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅಕ್ರಮ ವಲಸಿಗರನ್ನು ಸಹಿಸಿಕೊಂಡ ಈಶಾನ್ಯ ಭಾಗ, ಇದೀಗ ಪ್ರತಿಭಟನೆಯ ಹಾದಿ ಹಿಡಿದಿದೆ ಎಂದು ಆಪಾದಿಸಿದ್ದಾರೆ.

ಅಸಲಿಗೆ ಈಶಾನ್ಯ ರಾಜ್ಯದ ಜನತೆ ದೇಶಾದ್ಯಂತ NRC ಜಾರಿಗೆ ಆಗ್ರಹಿಸುತ್ತಿದ್ದು, ಇದನ್ನು CAB ವಿರೋಧಿ ಪ್ರತಿಭಟನೆ ಎಂದು ಬಿಂಬಿಸುವಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಯಶಶ್ವಿಯಾಗಿವೆ ಎಂದು ರಾಜೀವ್ ಚಂದ್ರಶೇಖರ್ ಹರಿಹಾಯ್ದಿದ್ದಾರೆ.

ದೇಶಾದ್ಯಂತ NRC ಜಾರಿ ಶತಸಿದ್ಧ ಎಂದಿರುವ ರಾಜೀವ್, ಈ ಕುರಿತು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನೀವ್ಯಾರೂ ಹೆದರಬೇಕಿಲ್ಲ: ಈಶಾನ್ಯ ಜನತೆಗೆ ಮೋದಿ ಭರವಸೆ!

ಕೆಲವರು CAB ಪ್ರಯೋಜನ ಅರಿಯದೇ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದು, ಕಾಯ್ದೆಯ ಜಾರಿಯಿಂದ ಈಶಾನ್ಯ ರಾಜ್ಯಗಳೂ ಸೇರಿದಂತೆ ಇಡೀ ದೇಶಕ್ಕೆ ಅನುಕೂಲವಾಗಲಿದೆ ಎಂದು ರಾಜೀವ್ ಚಂದ್ರಶೇಖರ್ ಭರವಸೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios