ಹೈದರಾಬಾದ್(ನ. 01) ಕರ್ನಾಟಕದಂತೆ ಉಳಿದ ಕಡೆಯಲ್ಲಿಯೂ ಉಪಚುನಾವಣೆ ಅಬ್ಬರ ಜೋರಾಗಿಯೇ ಇದೆ.  ಮಧ್ಯಪ್ರದೇಶದ ಹಲವು ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು ಬಿಜೆಪಿ ನಾಯಕನ ಸಂಬಂಧಿಯೊಬ್ಬರ ಮನೆಯಲ್ಲಿ ಬರೋಬ್ಬರಿ ಒಂದು ಕೋಟಿ ರೂ. ಲೆಕ್ಕವಿಲ್ಲದ ಹಣ ಪತ್ತೆಯಾಗಿದೆ.

ಡಬಕ್ ಕ್ಷೇತದ್ರ ಉಪಚುನಾಣೆ ನಡೆಯುತ್ತಿದ್ದು ಆ ಕ್ಷೇತ್ರದ ಅಭ್ಯರ್ಥಿ ಎಂ ರಘುನಂದನ್ ರಾವ್ ಮನೆಯಲ್ಲಿ ಹಣ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿಯ ಭಾಮೈದ ಸುರಭಿ ಶ್ರೀನಿವಾಸ್ ರಾವ್ ಮನೆ ಮೇಲೆ ದಾಳಿ ಮಾಡಲಾಗಿದೆ. ಹಣವನ್ನು ಅಲ್ಲಿಂದ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದರು ಎಂದು ಹೈದರಾಬಾದ್ ಪೊಲೀಸ್ ಕಮಿಷನರ್  ಅಂಜನಿ ಕುಮಾರ್ ತಿಳಿಸಿದ್ದಾರೆ.

ಅಲ್ಲಿ ತೊಂದ್ರೆ ಆದರೆ ಬಿಜೆಪಿಗೆ ಬನ್ನಿ; ಸಿದ್ದುಗೆ ಮಾಜಿ ಶಿಷ್ಯನ ಆಹ್ವಾನ

ಅಕ್ಟೋಬರ್ 26,ನ ರಂದು ಇದೇ ಅಭ್ಯರ್ಥಿಯ ಸಂಬಂಧಿ ಮನೆ ಮೇಲೆ ದಾಳಿ ಮಾಡಿ 18.67  ಲಕ್ಷ ರೂ. ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.  ಮಧ್ಯಪ್ರದೇಶದ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಹೈದರಾಬಾದಿನಲ್ಲಿ ಹಣ ಸಂಗ್ರಹಣೆ ಮಾಡಲಾಗಿತ್ತು ಎಂಬ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದೆ.