Asianet Suvarna News Asianet Suvarna News

ಕೇರಳದ ಮೊದಲ ತೃತೀಯಲಿಂಗಿ ಡಾಕ್ಟರ್..!

ಸಮಾಜದಲ್ಲಿ ಮಂಗಳಮುಖಿಯರನ್ನು ಅವರಿದ್ದಂತೆ ಸ್ವೀಕರಿಸುವುದು ಭಾರೀ ವಿರಳ. ನೋಡಿ ಅವರನ್ನು ತಿಳಿದುಕೊಳ್ಳುವ ಮೊದಲೇ ಅವರು ಮಂಗಳಮುಖಿಯರು ಎಂದು ಜಡ್ಜ್ ಮಾಡಲಾಗುತ್ತದೆ. ಆದರೆ ಇದೆಲ್ಲದರ ಮಧ್ಯೆ ಕೇರಳದ ಡಾಕ್ಟರ್ ಒಬ್ಬರ ಕಥೆ ನಿಜಕ್ಕೂ ಪ್ರೇರಣಾದಾಯಕವಾಗಿದೆ.

Boy realises he is a girl Meet Dr VS Priya Keralas first transgender doctors inspiring story dpl
Author
Bangalore, First Published Sep 24, 2021, 1:42 PM IST
  • Facebook
  • Twitter
  • Whatsapp

10 ವರ್ಷಗಳ ಹಿಂದೆ ಹೋದರೆ ತೃತೀಯಲಿಂಗಿಯೊಬ್ಬರು ತಮಗೆ ಬೇಕಾದ ಶಿಕ್ಷಣ ಪಡೆದು, ಇಷ್ಟಪಡುವ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಆದರೆ ಇಂದು ಅದು ಬದಲಾಗಿದೆ. ಇಂದಿಗೂ ಜಗತ್ತಿನಲ್ಲಿ ತೃತೀಯ ಲಿಂಗಿಗಳು(Transgender) ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾಗಿದ್ದರೂ ಕೇರಳದ(Kerala) ಡಾ. ಪ್ರಿಯಾ ಪೋಷಕರಿಂದ ಆರ್ಥಿಕ ಹಾಗೂ ಮಾನಸಿಕ ಬೆಂಬಲ ಪಡೆದು ತಾವು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾರೆ.

ಹುಟ್ಟಿನ ಸಂದರ್ಭ ಹುಡುಗ ಎಂದು ಆಯುರ್ವೇದಿಕ್ ವೈದ್ಯರೊಬ್ಬರು ಬರೆದಿದ್ದರು. ಆದರೆ ಬಾಲ್ಯದಲ್ಲಿಯೇ ಪ್ರಿಯಾಗೆ ತಾನು ಹೆಣ್ಣು ಎಂಬುದು ಅರಿವಾಗಿತ್ತು. ಪುರುಷ ದೇಹದಲ್ಲಿ ಬದುಕುವ ಹೆಣ್ಣು ತಾನು ಎಂದು ಅರ್ಥವಾದಾಗ ಅದನ್ನು ಒಪ್ಪಿಕೊಳ್ಳುವುದಕ್ಕೂ ಮನೆಯವರಿಗೆ ಹೇಳುವುದಕ್ಕೂ ಪ್ರಿಯಾಗೆ ಧೈರ್ಯವಿರಲಿಲ್ಲ. ನನಗಿದ್ದ ಒಂದೇ ದಾರಿ ಡೈರಿಯಲ್ಲಿ ನನ್ನ ಸಮಸ್ಯೆಗಳನ್ನು ಬರೆದಿಡುವುದಾಗಿತ್ತು. ಆದರೆ ನಂತರ ಅದು ಪೋಷಕರ ಗಮನಕ್ಕೆ ಬಂದಿತ್ತು.

ಆಭರಣದ ಜಾಹೀರಾತಿನಲ್ಲಿ ನಾಯಕಿಯಾದ ತೃತೀಯ ಲಿಂಗಿ! ಜನರ ಪ್ರತಿಕ್ರಿಯೆ ಹೇಗಿತ್ತು?

ಆರಂಭದಲ್ಲಿ ಭಯವಾದರೂ ನಂತರ ಪ್ರಿಯಾ ತನ್ನ ಕುರಿತು ಪೋಷಕರಿಗೆ ತಿಳಿಸಿದ್ದರು. ಮೊದಲು ನನ್ನ ಪೋಷಕರು ಪ್ರಿಯಾಳನ್ನು ಮಾನಸಿಕ ವೈದ್ಯರಲ್ಲಿ ಕರೆದುಕೊಂಡು ಹೋದರು. ವೈದ್ಯರು ತಮ್ಮ ಮಗನಿಗೆ ನೆರವಾಗಬಹುದೆಂದು ಪೋಷಕರು ಅಂದುಕೊಂಡಿದ್ದರು. ಆದರೆ ವೈದ್ಯರೂ ಪ್ರಿಯಾಗೆ ಯಾವುದೇ ಮಾನಸಿಕ ತೊಂದರೆ ಇಲ್ಲ ಎಂದಿದ್ದರು. 15 ವರ್ಷ ತುಂಬಿದಾಗ ಸಮಾಜದ ಭಯದಿಂದ ತನ್ನ ಗುರುತನ್ನು ರಿವೀಲ್ ಮಾಡುವುದು ಸಾಧ್ಯವಿಲ್ಲ ಎನಿಸಿತ್ತು ಪ್ರಿಯಾಗೆ.

ಬಾಲ್ಯದಲ್ಲಿ ಗುರುತು ಬದಲಾಗಿ ಬದುಕುವುದು ಭಾರೀ ಕಷ್ಟವಾಗಿದ್ದ ಪ್ರಿಯಾ ಬೆಳೆಯುತ್ತಲೇ ಶಾಲಾ ಶಿಕ್ಷಣ ಮುಗಿಸಿ ಬೇರೆ ಸ್ಥಳಕ್ಕೆ ಹೋಗಿ ಹೆಣ್ಣಾಗಿ ಬದುಕಲು ಆರಂಭಿಸಿದ್ದರು. ನನ್ನ ತಂದೆ ತಾಯಿ ಇಬ್ಬರೂ ನರ್ಸ್‌ಗಳಾಗಿದ್ದ ಕಾರಣ, ನನ್ನ ಸಹೋದರ ಮತ್ತು ನಾನು ಇಬ್ಬರೂ ವೈದ್ಯರಾಗಬೇಕೆಂದು ಅವರು ಬಯಸಿದ್ದರು. ನನ್ನ ಸಹೋದರ ತನ್ನ ಎಂಬಿಬಿಎಸ್(MBBS) ಮುಗಿಸಿ ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವಾಗ, ನಾನು ಶಿಕ್ಷಕನಾಗಲು ಬಯಸಿದ್ದೆ. ಅದೇನೇ ಇದ್ದರೂ, ನನ್ನ ಹೆತ್ತವರ ಸಲುವಾಗಿ ನಾನು ವೈದ್ಯಕೀಯದಲ್ಲಿ ತೊಡಗಲುಪ್ರಯತ್ನಿಸಲು ನಿರ್ಧರಿಸಿದೆ ಎನ್ನುತ್ತಾರೆ ಪ್ರಿಯಾ.

ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ತೃತೀಯ ಲಿಂಗಿ ಅಥ್ಲೀಟ್‌ ಸ್ಪರ್ಧೆ!

ಶಾಲೆಯ ನಂತರ ಪ್ರಿಯಾ 2013 ರಲ್ಲಿ ಒಲ್ಲೂರು, ತ್ರಿಶೂರ್‌ನ ವೈದ್ಯರತ್ನಂ ಆಯುರ್ವೇದ ಕಾಲೇಜಿನಲ್ಲಿ ಸೇರಿಕೊಂಡರು. ಅಲ್ಲಿ ಅವರು ತಮ್ಮ ಬ್ಯಾಚುಲರ್ ಆಫ್ ಆಯುರ್ವೇದ, ಮೆಡಿಸಿನ್ ಮತ್ತು ಸರ್ಜರಿ (ಬಿಎಎಂಎಸ್) ಅನ್ನು ಹುಡುಗನಾಗಿಯೇ ಮುಗಿಸಿದ್ದರು. ಮದುವೆಯ ಮಾತುಕತೆ ತಪ್ಪಿಸಲು ನಂತರ ಅವರು ಎಂಡಿ ನಾಡಿದರು. ನಂತರ ಮಂಗಳೂರಿನಲ್ಲಿ(Mangaluru) ಆಕೆಗೆ ತ್ರಿಪುನಿಥುರಾದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಕಣ್ಣೂರಿನ(Kannur) ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು.

2018 ರಲ್ಲಿ, ಅವರು ತ್ರಿಶೂರ್‌ನ ಸೀತಾರಾಮ್ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರಾಗಿ(Doctor) ಸೇರಿಕೊಂಡರು. ವೃತ್ತಿಪರವಾಗಿ ಯಶಸ್ಸು ಗಳಿಸುತ್ತಿದ್ದರೂ ಗುರುತು ಮಾತ್ರ ತೊಂದರೆಯೇ ಆಗಿತ್ತು. ಗುರುತಿನ ವಿಚಾರ ತನ್ನ ಹೆತ್ತವರಿಗೆ ಅದರ ಬಗ್ಗೆ ತಿಳಿಸಲು ಇದು ಸಕಾಲ ಎಂದು ತಿಳಿದು ಲಿಂಗ ಪುನರ್ವಸತಿ ಶಸ್ತ್ರಚಿಕಿತ್ಸೆ, ಅದರ ವೆಚ್ಚಗಳು ಮತ್ತು ನಂತರದ ಪರಿಣಾಮಗಳನ್ನು ನೊಡಿ.ಹೆತ್ತವರಿಗೆ ಸತ್ಯವನ್ನು ಹೇಳಿದ್ದರು ಪ್ರಿಯಾ.

ಡಾ ಪ್ರಿಯಾ ಅವರಿಗೆ ಈಗಾಗಲೇ ಆರು ಶಸ್ತ್ರಚಿಕಿತ್ಸೆಗಳು ನಡೆದಿವೆ ಮತ್ತು ಇನ್ನೂ ಎರಡು ಉಳಿದಿವೆ. 8 ಲಕ್ಷ ರೂಪಾಯಿಗಳ ದುಬಾರಿ ಶಸ್ತ್ರಚಿಕಿತ್ಸೆಯನ್ನು ಆರಿಸಿಕೊಂಡಿದ್ದರು ಆಕೆ. ಹೊಸ ಗುರುತಿನೊಂದಿಗೆ ಆಸ್ಪತ್ರೆಗೆ ಮರಳಿದ್ದರು. ಗುರುತಿನ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದಾಗ ಅವರೆಲ್ಲರೂ ಸ್ವಾಗತಿಸಿದ್ದರು. ಪರಿವರ್ತನೆಯ ನಿರ್ಧಾರವನ್ನು ಬೆಂಬಲಿಸಿದರು. ಖಾಯಂ ಬರುವ ರೋಗಿಗಳಿಗೂ ಇದನ್ನು ತಿಳಿಸಿದ್ದರು ಪ್ರಿಯಾ. ಅವರಲ್ಲಿ ಹೆಚ್ಚಿನವರು ಶಸ್ತ್ರಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೊಂದಿದ್ದರು. ನಾನು ಅವರ ಎಲ್ಲಾ ಅನುಮಾನಗಳನ್ನು ಬಗೆಹರಿಸಿದೆ ಎನ್ನುತ್ತಾರೆ ಪ್ರಿಯಾ.

Follow Us:
Download App:
  • android
  • ios