Asianet Suvarna News Asianet Suvarna News

ಛತ್ತೀಸ್‌ಗಢದಲ್ಲಿ 12 ನಕ್ಸಲರ ಹತ್ಯೆ: ಐದೇ ತಿಂಗಳಲ್ಲಿ 100 ಬಲಿ..!

ಬಿಜಾಪುರ ಜಿಲ್ಲೆ ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ತೆರಳಿದ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ. ಹತ ನಕ್ಸಲರ ಬಳಿ ಇದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ.

Border Security Force killed 12 Naxalites at Bijapur in Chhattisgarh grg
Author
First Published May 11, 2024, 6:41 AM IST

ಬಿಜಾಪುರ(ಛತ್ತೀಸ್‌ಗಢ)(ಮೇ.11): ಛತ್ತೀಸ್‌ಗಢದಲ್ಲಿ ನಕ್ಸಲ್ ನಿಗ್ರಹಕ್ಕೆ ಪಣ ತೊಟ್ಟಿರುವ ಭದ್ರತಾ ಪಡೆ ಶುಕ್ರವಾರ 12 ನಕ್ಸಲರನ್ನು ಹೊಡೆದುರುಳಿಸಿದೆ. ಈ ಮೂಲಕ ಈ ವರ್ಷ ಛತ್ತೀಸ್ ಗಢದಲ್ಲಿ ಬಸ್ತರ್ ನಕ್ಸಲ್ ವಲಯದಲ್ಲಿ ಭದ್ರತಾ ಸಿಬ್ಬಂದಿಗಳ ಗುಂಡೇಟಿಗೆ ಬಲಿಯಾದ ನಕ್ಸಲರ ಸಂಖ್ಯೆ 100ರ ಗಡಿ ದಾಟಿದೆ.

ಬಿಜಾಪುರ ಜಿಲ್ಲೆ ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ತೆರಳಿದ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ. ಹತ ನಕ್ಸಲರ ಬಳಿ ಇದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ.

ಛತ್ತೀಸ್‌ಗಢ: ಭದ್ರತಾ ಸಿಬ್ಬಂದಿಯ ಗುಂಡಿಗೆ 10 ಮಂದಿ ನಕ್ಸಲರು ಬಲಿ!

ಇತ್ತೀಚಿನ ದಿನಗಳಲ್ಲಿ ಮಾವೋವಾದಿಗಳ ಮೇಲೆ ಭದ್ರತಾ ಪಡೆ ಮಾಡಿದ ಮೂರನೇ ಅತಿದೊಡ್ಡ ದಾಳಿಯಾಗಿದೆ. ಏ. 16 ರಂದು 29, 2.30 0 10 ನಕ್ಸಲರನ್ನು ಭದ್ರತಾ ಸಿಬ್ಬಂದಿಗಳು ಹತ್ಯೆ ಮಾಡಿದ್ದರು. ರಾಜ್ಯದ ಬಸ್ತಾರ್‌ಜಿಲ್ಲೆಯಲ್ಲಿ ನಡೆದ ಬೇರೆ ಬೇರೆ ಪ್ರಕರಣಗಳಲ್ಲಿ ಈ ವರ್ಷ 103 ನಕ್ಸಲರು ಭದ್ರತಾ ಸಿಬ್ಬಂದಿಗಳಿಂದ ಕೊಲ್ಲಲ್ಪಟ್ಟಿದ್ದಾರೆ. 

Latest Videos
Follow Us:
Download App:
  • android
  • ios