ಬಿಜೆಪಿ ಕಾರ್ಯಕರ್ತನ ಮನೆ ಮೇಲೆ , ಟಿಎಂಸಿ ಕಚೇರಿ ಹೊರಗೆ ಬಾಂಬ್ ದಾಳಿ

West Bengal Violence: ಶನಿವಾರ ರಾತ್ರಿ ಪಶ್ವಿಮ ಬಂಗಾಳದ ಬರಾಕ್‌ಪೋರ್‌ ನಗರದಲ್ಲಿ (West Bengal's Barrackpore city) ದಾಳಿ ನಡೆಸಲಾಗಿದೆ. ಬಾಂಬ್‌ ದಾಳಿಯಿಂದ ಸುತ್ತಲಿನ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗದೆ.

Bombs thrown at BJP worker s house and Trinamool Congress office Saturday night mrq

ಕೋಲ್ಕತ್ತಾ: ಬಿಜೆಪಿ ಕಾರ್ಯಕರ್ತನ ನಿವಾಸದ (BJP Worker House) ಮೇಲೆ ಮತ್ತು ತೃಣಮೂಲ ಕಾಂಗ್ರೆಸ್ ಕಚೇರಿ (Trinamool Congress office) ಹೊರಗಡೆ ಬಾಂಬ್ ದಾಳಿ ನಡೆಸಲಾಗಿದೆ. ಏಳನೇ ಹಂತದ ಮತದಾನ ಮುಕ್ತಾಯದ ಬಳಿಕ ಶನಿವಾರ ರಾತ್ರಿ ಪಶ್ವಿಮ ಬಂಗಾಳದ ಬರಾಕ್‌ಪೋರ್‌ ನಗರದಲ್ಲಿ (West Bengal's Barrackpore city) ದಾಳಿ ನಡೆಸಲಾಗಿದೆ. ಬಾಂಬ್‌ ದಾಳಿಯಿಂದ ಸುತ್ತಲಿನ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗದೆ. ಜನರನ್ನು ಭಯಭೀತರನ್ನಾಗಿಸಲು ಹಾಗೂ ಆತಂಕದ ವಾತಾವರಣ ಸೃಷ್ಟಿಸಲು ಈ ಬಾಂಬ್ ದಾಳಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ದಾಳಿಯಲ್ಲಿ ಅದೃಷ್ಟವಷಾತ್ ಯಾವುದೇ ಗಾಯ ಮತ್ತು ಪ್ರಾಣಹಾನಿ ಸಂಭವಿಸಿಲ್ಲ. ಪಶ್ವಿಮ ಬಂಗಾಳದಲ್ಲಿ ಶನಿವಾರ ಕೊನೆಯ ಹಂತದ ಚುನಾವಣೆ ಮುಕ್ತಾಯವಾಗಿದೆ. 

ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಈ ವೇಳೆ ಸಣ್ಣಪುಟ್ಟ ಘರ್ಷಣೆಗಳು ಉಂಟಾಗಿವೆ. ಸಂದೇಶ್‌ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿತ್ತು. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾ ಆರೋಪಿಸಿದ್ದಾರೆ. ಇತ್ತ ಚುನಾವಣಾ ಪ್ರಕ್ರಿಯೆಗೆ ಬಿಜೆಪಿಯೇ ಅಡ್ಡಿಯುಂಟು ಮಾಡಿದೆ ಎಂದು ಟಿಎಂಸಿ ಕಾರ್ಯಕರ್ತರು ಪ್ರತ್ಯಾರೋಪ ಮಾಡಿದ್ದಾರೆ. ಈ ಸಂಬಂಧ ಬಸಂತಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಪರಿಸ್ಥಿತಿ ನಿಯಂತ್ರಕ್ಕಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. 

ವೇದಿಕೆ ಮೇಲೆ ಕಮಲಾ ಕಾಲಿಗೆರಗಿದ ಪ್ರಧಾನಿ ಮೋದಿ ವಿಡಿಯೋ ವೈರಲ್, ಯಾರು ಈ ಮಹಿಳೆ?

ಸಂದೇಶ್‌ಖಾಲಿ ಲೋಕಸಭಾ ಕ್ಷೇತ್ರದ ಜಾಧವ್‌ಪುರ, ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಟಿಎಂಸಿ ಮತ್ತು  ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ ಎಂದು ವರದಿಯಾಗಿದೆ. 

ಕೊಳಕ್ಕೆ ಎವಿಎಂ ಯಂತ್ರ, 2 ಸಾವಿರಕ್ಕೂ ಅಧಿಕ ದೂರು ದಾಖಲು

ದಕ್ಷಿಣ 24 ಪರಗಣ ಕ್ಷೇತ್ರದಲ್ಲಿ ಟಿಎಂಸಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉದ್ರಿಕ್ತರ ಗುಂಪು ಇವಿಎಂ ಯಂತ್ರಗಳನ್ನು ಕೊಳಕ್ಕೆ ಎಸೆದಿದ್ದಾರೆ. ಪಶ್ಚಿಮ ಬಂಗಾಳದ ಬಸಿರ್‌ಹತ್, ಮಥುರಾಪುರ್, ಜಯನಗರ, ಡೈಮಂಡ್ ಹಾರ್ಬರ್, ಬರಾಸತ್, ಜಾದವ್‌ಪುರ, ದಮ್ ಡಮ್, ಕೋಲ್ಕತ್ತಾ ದಕ್ಷಿಣ ಮತ್ತು ಕೋಲ್ಕತ್ತಾ ಉತ್ತರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮತ್ತು ಚುನಾವಣಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಇವಿಎಂ ನಾಶ ಸೇರಿದಂತೆ ಒಟ್ಟು 2,667 ದೂರುಗಳು ಬಂದಿವೆ. ಶನಿವಾರ ನಡೆದ ಹಿಂಸಾಚಾರದಲ್ಲಿ ಕನಿಷ್ಠ 24 ಜನರು ಗಾಯಗೊಂಡಿದ್ದಾರೆ. ಇದನ್ನು ಹೊರತುಪಡಿಸಿ ಉಳಿದಲ್ಲಡೆ ಬಹುತೇಕ ಕಡೆ ಶಾಂತಿಯುತ ಮತದಾನ ನಡೆದಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. 

ಪಿಒಕೆ ನಮ್ಮದಲ್ಲ: ಹೈಕೋರ್ಟ್‌ಗೆಪಾಕ್‌ ವಕೀಲರ ಅಚ್ಚರಿ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್‌ ಎಂದ ಸಮೀಕ್ಷೆಗಳು 

ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನದಂಥ ತನ್ನ ಸಾಂಪ್ರದಾಯಿಕ ರಾಜ್ಯಗಳಲ್ಲಿ ಬಿಜೆಪಿ ಬಹುತೇಕ ಎಲ್ಲ ಸೀಟುಗಳಲ್ಲಿ ಕಳೆದ ಸಲದಂತೆ ಜಯಿಸಲಿದೆ. ಇದಕ್ಕೆ ಹೆಚ್ಚುವರಿಯಾಗಿ ಪ.ಬಂಗಾಳ, ಒಡಿಶಾ, ಆಂಧ್ರಪ್ರದೇಶದಂಥ ತನಗೆ ಅಷ್ಟಾಗಿ ನೆಲೆ ಇಲ್ಲದ ರಾಜ್ಯಗಳಲ್ಲೂ ಬಿಜೆಪಿ (ಎನ್‌ಡಿಎ) ಸ್ವಂತ ಬಲದಿಂದ ಹಾಗೂ ಟಿಡಿಪಿಯಂಥ ಮಿತ್ರರ ಬಲದಿಂದ ಉತ್ತಮ ಸ್ಥಾನ ಸಂಪಾದಿಸಲಿದೆ. ತಮಿಳುನಾಡು, ಕೇರಳದಂಥ ರಾಜ್ಯಗಳಲ್ಲೂ ಖಾತೆ ಆರಂಭಿಸಲಿದೆ. ಈ ಮೂಲಕ ತನ್ನ 400ರ ಗುರಿಯ ಸನಿಹ ತಲುಪಲಿದೆ ಎಂದು ಸಮೀಕ್ಷೆಗಳು ಹೇಳಿವೆ

Latest Videos
Follow Us:
Download App:
  • android
  • ios