Asianet Suvarna News Asianet Suvarna News

ಮಲಯಾಳ ಪರೀಕ್ಷೆ: ಬಿಹಾರ ಮಹಿಳೆಗೆ ನೂರಕ್ಕೆ ನೂರು ಅಂಕ!

ಮಲಯಾಳ ಪರೀಕ್ಷೆ: ಬಿಹಾರ ಮಹಿಳೆಗೆ ನೂರಕ್ಕೆ ನೂರು ಅಂಕ!| ಆರು ವರ್ಷದ ಹಿಂದೆ ಹೊಟ್ಟೆಪಾಡಿಗಾಗಿ ಸ್ವಂತ ಊರು ಬಿಟ್ಟು ಗಂಡ ಸೈಫುಲ್ಲಾನೊಂದಿಗೆ ಕೇರಳಕ್ಕೆ ಬಂದಿದ್ದ ಮಹಿಳೆ

Bihar migrant mother of 4 month-old scores perfect 100 in Malayalam literacy exam
Author
Bangalore, First Published Feb 16, 2020, 8:15 AM IST

ಕೊಲ್ಲಂ[ಫೆ.16]: ಹೊಟ್ಟೆಪಾಡಿಗಾಗಿ ಬಿಹಾರದಿಂದ ಕೇರಳಕ್ಕೆ ಬಂದ ಕೂಲಿ ಮಹಿಳೆಯೊಬ್ಬಳು ರಾಜ್ಯ ಸರ್ಕಾರ ಮಲಯಾಳಂ ಭಾಷೆಯಲ್ಲಿ ನಡೆಸಿದ ಸಾಕ್ಷರತಾ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ರೊಮಿಯಾ ಕತೂರ್‌ (26) ಎಂಬಾಕೆ ಮಲಯಾಳಂ ತನ್ನ ಮಾತೃಭಾಷೆ ಅಲ್ಲದಿದ್ದರೂ ಇಂಥಹದ್ದೊಂದು ಸಾಧನೆ ಮಾಡಿ ಅಚ್ಚರಿಗೆ ಕಾರಣವಾಗಿದ್ದಾಳೆ.

ಆರು ವರ್ಷದ ಹಿಂದೆ ಹೊಟ್ಟೆಪಾಡಿಗಾಗಿ ಸ್ವಂತ ಊರು ಬಿಟ್ಟು ಗಂಡ ಸೈಫುಲ್ಲಾನೊಂದಿಗೆ ಕೇರಳದ ಕೊಲ್ಲಂ ಜಿಲ್ಲೆಯ ಉಮಯನಲ್ಲೂರ್‌ಗೆ ಬಂದ ರೊಮಿಯಾ, ವಲಸೆ ಕಾರ್ಮಿಕರನ್ನು ಸಾಕ್ಷರರನ್ನಾಗಿಸುವ ಕೇರಳ ಸರ್ಕಾರದ ‘ಚಂಙಾದಿ’ ಯೋಜನೆಯಡಿ ಜ.19ರಂದು ನಡೆದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಜೀವಾವಧಿ ಶಿಕ್ಷೆ ಅನುಭವಿಸಿದವ ಈಗ ಎಂಬಿಬಿಎಸ್‌ ಪದವೀಧರ!

ನಾಲ್ಕು ತಿಂಗಳ ಹಸುಳೆಯೊಂದಿಗೆ ಹೋಗಿ ಪರೀಕ್ಷೆ ಬರೆದಿದ್ದರು. ಸಣ್ಣ ಜ್ಯೂಸ್‌ ಅಂಗಡಿ ಇಟ್ಟು ಕೊಂಡಿರುವ ರೊಮಿಯಾಗೆ ಮೂರು ಮಕ್ಕಳಿದ್ದಾರೆ.

ವಲಸೆ ಕಾರ್ಮಿಕರಿಗೆ ಮಲಯಾಳಂ ಕಲಿಸುವ ಸಲುವಾಗಿ ಕೇರಳ ಸರ್ಕಾರ ಚಂಙಾದಿ (ಸ್ನೇಹಿತ) ಎಂಬ ಹೆಸರಿನಲ್ಲಿ 4 ತಿಂಗಳ ಕೋರ್ಸನ್ನು 2018ರಲ್ಲಿ ಪರಿಚಯಿಸಿತ್ತು. ಅಲ್ಲದೇ ಇದಕ್ಕೆ ಪ್ರೌಢ ಶಿಕ್ಷಣದ ಮಾನ್ಯತೆಯನ್ನೂ ನೀಡಿತ್ತು.

Follow Us:
Download App:
  • android
  • ios